ರಾಜ್ಯ

ಪ್ರತಿ ತ್ರೈಮಾಸಿಕದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ- ಚುನಾವಣಾ ಆಯೋಗ

Nagaraja AB

ಬೆಂಗಳೂರು: ಮತದಾರರು ಈಗ ತಮ್ಮ ಆಧಾರ್ ಸಂಖ್ಯೆಯನ್ನು ಮತದಾರರ ಗುರುತಿನ ಚೀಟಿಯೊಂದಿಗೆ ಜೋಡಿಸಬಹುದು ಎಂದು ಚುನಾವಣಾ ಆಯೋಗ ಪ್ರಕಟಿಸಿದೆ. 17 ವರ್ಷ ಆದವರು 18 ವರ್ಷಕ್ಕೆ ಕಾಯುವ ಬದಲು ಮುಂಚಿತವಾಗಿ ಮತದಾರರ ಗುರುತಿನ ಚೀಟಿಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.  ಪ್ರತಿ ತ್ರೈಮಾಸಿಕದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗೂ ಆಯೋಗ ಮುಂದಾಗಿದೆ. 

ಚುನಾವಣಾ ಆಯೋಗದ ವಿವಿಧ ಉಪಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದ ರಾಜ್ಯದ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ, ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು, ವಿಳಾಸ ಬದಲಾವಣೆ, ಪಟ್ಟಿಯಿಂದ ಹೆಸರು ತೆಗೆದುಹಾಕುವುದು ಮತ್ತು ಅದರೊಂದಿಗೆ ಆಧಾರ್ ಜೋಡಣೆಗಾಗಿ  ನಾಗರಿಕರಿಗೆ ಹೊಸ ನಮೂನೆಗಳನ್ನು ನೀಡಲಾಗುವುದು ಎಂದು ತಿಳಿಸಿದರು. 

 ಚುನಾವಣಾ ಆಯೋಗ ಈಗ 17 ವರ್ಷ ವಯಸ್ಸಿನವರಿಂದ ಮುಂಚಿತವಾಗಿ ಅರ್ಜಿಗಳನ್ನು ಸ್ವೀಕರಿಸುತ್ತದೆ ಮತ್ತು ಅವುಗಳನ್ನು ನಿಯತಕಾಲಿಕವಾಗಿ ಪರಿಶೀಲಿಸುತ್ತದೆ. ಮೊದಲು, ಅವರು ನೋಂದಾಯಿಸಲು ಜನವರಿ 1 ರವರೆಗೆ ಕಾಯಬೇಕಾಗಿತ್ತು, ಆದರೆ ಹೊಸ ವ್ಯವಸ್ಥೆಯಲ್ಲಿ, ಜನವರಿ, ಏಪ್ರಿಲ್, ಜುಲೈ ಮತ್ತು ಅಕ್ಟೋಬರ್‌ನಲ್ಲಿ ಪ್ರತಿ ತ್ರೈಮಾಸಿಕದಲ್ಲಿ ಅರ್ಜಿಗಳನ್ನು ಪರಿಶೀಲಿಸಲಾಗುತ್ತದೆ. ಮತದಾರರು ವೈಯಕ್ತಿಕ ವಿವರಗಳು ಮತ್ತು ಇಪಿಐಸಿ ಸಂಖ್ಯೆಗಳನ್ನು ಬಳಸಿಕೊಂಡು ತಮ್ಮ ಮತದಾರರ ಪಟ್ಟಿ ಹುಡುಕಲು ಅನುವು ಮಾಡಿಕೊಡುವ ಸಹಾಯವಾಣಿ ಆ್ಯಪ್ ನ್ನು ಆಯೋಗ ಪರಿಚಯಿಸಿದೆ.

ಚುನಾವಣಾ ಆಯೋಗವು ಸೋಮವಾರದಿಂದ ಸ್ವಯಂಪ್ರೇರಣೆಯಿಂದ ಮತದಾರರ ಗುರುತಿನ ಚೀಟಿಗೆ ಆಧಾರ್ ಜೋಡಿಸುವ ಅಭಿಯಾನಕ್ಕೆ ಮುಂದಾಗಿದೆ, ಆದರೆ ಇದು ಕಡ್ಡಾಯವಲ್ಲ. ನಕಲಿ ನಮೂದುಗಳನ್ನು ತೆಗೆದುಹಾಕಲು ಮತ್ತು ಸೇವಾ ಮತದಾರರಿಗೆ ಚುನಾವಣಾ ಕಾನೂನನ್ನು ಲಿಂಗ-ತಟಸ್ಥಗೊಳಿಸಲು ಮತದಾರರ ಪಟ್ಟಿಯೊಂದಿಗೆ ಆಧಾರ್ ವಿವರಗಳನ್ನು ಜೋಡಿಸಲು ಅವಕಾಶ ಮಾಡಿಕೊಡಲು ಜೂನ್‌ನಲ್ಲಿ ಸರ್ಕಾರ ಮತದಾರರ ನೋಂದಣಿ ನಿಯಮಗಳಿಗೆ  ತಿದ್ದುಪಡಿ ಮಾಡಿದೆ. 
 

SCROLL FOR NEXT