ರಾಜ್ಯ

ಬೆಂಗಳೂರು: ಕೆಎಎಸ್ ಆಕಾಂಕ್ಷಿಗೆ 59.50 ಲಕ್ಷ ರೂ. ಮೋಸ, ವಂಚಕನ ಬಂಧನ

Nagaraja AB

ಬೆಂಗಳೂರು: ಕೆಎಎಸ್ ಆಕಾಂಕ್ಷಿಗಳನ್ನು ಗುರಿಯಾಗಿಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಲು ಸಹಾಯ ಮಾಡುವುದಾಗಿ ಭರವಸೆ ನೀಡಿ ಅವರಿಂದ ಹಣ ವಸೂಲಿ ಮಾಡುತ್ತಿದ್ದ 32 ವರ್ಷದ ಆರೋಪಿಯನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿ ಮೂಲದ ಸಿದ್ದರಾಜು ಸುಭಾಶ್ಚಂದ್ರ ಕಟ್ಟಿಮನಿ ಆರೋಪಿ. ಈತ 59.50 ಲಕ್ಷ ಹಣ ಪಡೆದು ವಂಚಿಸಿರುವುದಾಗಿ ಕೆಎಎಸ್‌ ಆಕಾಂಕ್ಷಿ ಸವಿತಾ ಶಾಂತಪ್ಪ ಯಳಸಂಗಿಕರ್‌ ಎಂಬುವರು ಇತ್ತೀಚಿಗೆ ದೂರು ದಾಖಲಿಸಿದ್ದರು. ಆಕೆಯ ದೂರಿನ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.  

ಸ್ನೇಹಿತರೊಬ್ಬ ಮೂಲಕ ಮಹಿಳೆಯೊಂದಿಗೆ ಸಂಪರ್ಕಕ್ಕೆ ಬಂದಿದ್ದ ಕಟ್ಟಿಮನಿ, ಕಲಬುರಗಿ ಮೂಲದ ಸವಿತಾ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಲು ಬೆಂಗಳೂರಿಗೆ ಬಂದಿದ್ದಾರೆ ಎಂದು ತಿಳಿದ ನಂತರ, ತನಗೆ  ಹಲವಾರು ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ಪರಿಚಯವಿದ್ದು, ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಲು ಆಕೆಗೆ ಸಹಾಯ ಮಾಡುವುದಾಗಿ ಹೇಳಿಕೊಂಡಿದ್ದ. ಆತನನ್ನು ನಂಬಿ ಮಹಿಳೆ 2020ರ ಆಗಸ್ಟ್‌ನಲ್ಲಿ ಮೊದಲು 15.50 ಲಕ್ಷ ರೂ. ಪಾವತಿಸಿದ್ದಳು.

ಅಲ್ಲದೇ ಆಕೆಗೆ ಸಹಾಯ ಮಾಡಲು ಅಧಿಕಾರಿಗಳು ಒಪ್ಪಿಕೊಂಡಿದ್ದು, ತಹಸೀಲ್ದಾರ್ ಮಾಡಲು ಹೆಚ್ಚಿನ ಹಣಕ್ಕಾಗಿ ಬೇಡಿಕೆಯಿಡುತ್ತಿದ್ದಾರೆ ಎಂದು ಆರೋಪಿ ಹೇಳಿದ್ದ. ಮಹಿಳೆ ತನ್ನ ತಾಯಿಯ ಚಿನ್ನಾಭರಣಗಳನ್ನು ಮಾರಾಟ ಮಾಡಿ ಕೃಷಿ ಭೂಮಿ ಗಿರವಿ ಇಟ್ಟು ಒಟ್ಟು 59.50 ಲಕ್ಷ ರೂ.ಗಳನ್ನು ಪಾವತಿಸಿದ್ದಳು,

ಹಣ ಪಡೆದ ನಂತರ ಕಟ್ಟಿಮನಿ ಆಕೆಯಿಂದ ತಪ್ಪಿಸಿಕೊಳ್ಳಲಾರಂಭಿಸಿದ ಮತ್ತು ಹಣವನ್ನು ಕೇಳದಂತೆ ಬೆದರಿಕೆ ಹಾಕಿದ್ದ. ಹೀಗಾಗಿ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ ಎಂದು ಪೊಲೀಸರು ಹೇಳಿದರು. ಕಟ್ಟೀಮನಿಯನ್ನು ವಶಕ್ಕೆ ಪಡೆದಿರುವ ಪೊಲೀಸರು, ಮತ್ತೊಬ್ಬರಿಗೆ ಇದೇ ರೀತಿ ವಂಚಿಸಿದ್ದಾರಾ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

SCROLL FOR NEXT