ಚನ್ನಾಡ್ಲು ನಿವಾಸಿಗಳು ತಮ್ಮ ಮನೆಗಳ ಪಾಯದ ಮೇಲೆ ತ್ರಿವರ್ಣ ಧ್ವಜಗಳನ್ನು ನೆಟ್ಟು 75ನೇ ಸ್ವಾತಂತ್ರ್ಯೋತ್ಸವಕ್ಕೆ ಸಜ್ಜಾಗುತ್ತಿದ್ದಾರೆ. 
ರಾಜ್ಯ

ಚಿಕ್ಕಮಗಳೂರು: ಭೂಕುಸಿತ ಉಂಟಾಗಿ ಮೂರು ವರ್ಷ ಕಳೆದರೂ ಗ್ರಾಮಸ್ಥರಿಗೆ ಸಿಗದ ಹೊಸ ಮನೆಗಳು

2019ರ ಆಗಸ್ಟ್ 9ರಂದು ಮೂಡಿಗೆರೆ ತಾಲೂಕಿನ ಹಿರೇಬೈಲ್‌ನಲ್ಲಿ ಸುರಿದ ಭಾರಿ ಮಳೆಗೆ ಭಾರಿ ಭೂಕುಸಿತ ಉಂಟಾಗಿ ಚನ್ನಾಡ್ಲು ಗ್ರಾಮದ 22 ಕುಟುಂಬಗಳ ಬದುಕು ಅತಂತ್ರವಾಗಿದ್ದವು. ಅದಾಗಿ ಮೂರು ವರ್ಷ ಕಳೆದಿದ್ದರೂ, ಇಲ್ಲಿನ ನಿವಾಸಿಗಳು ಇನ್ನೂ ಆ ಆಘಾತದಿಂದ ಚೇತರಿಸಿಕೊಂಡಿಲ್ಲ.

ಚಿಕ್ಕಮಗಳೂರು: 2019ರ ಆಗಸ್ಟ್ 9ರಂದು ಮೂಡಿಗೆರೆ ತಾಲೂಕಿನ ಹಿರೇಬೈಲ್‌ನಲ್ಲಿ ಸುರಿದ ಭಾರಿ ಮಳೆಗೆ ಭಾರಿ ಭೂಕುಸಿತ ಉಂಟಾಗಿ ಚನ್ನಾಡ್ಲು ಗ್ರಾಮದ 22 ಕುಟುಂಬಗಳ ಬದುಕು ಅತಂತ್ರವಾಗಿದ್ದವು. ಅದಾಗಿ ಮೂರು ವರ್ಷ ಕಳೆದಿದ್ದರೂ, ಇಲ್ಲಿನ ನಿವಾಸಿಗಳು ಇನ್ನೂ ಆ ಆಘಾತದಿಂದ ಚೇತರಿಸಿಕೊಂಡಿಲ್ಲ.

ಚನ್ನಾಡ್ಲುವಿನ ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುವುದು ಮತ್ತು ಪ್ರತಿ ಮನೆಗೆ 5 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಜಿಲ್ಲಾಧಿಕಾರಿ ಬಗಾಡಿ ಗೌತಮ್ ಅಂದು ಭರವಸೆ ನೀಡಿದ್ದರು.  ಅಲ್ಲದೆ, ಸ್ಥಳಾಂತರ ಪೂರ್ಣಗೊಳ್ಳುವವರೆಗೂ ನಿವಾಸಿಗಳಿಗೆ ಬಾಡಿಗೆ ಮನೆಗಾಗಿ ಬಾಡಿಗೆ ನೀಡುವುದಾಗಿಯೂ ಹೇಳಿದ್ದರು. ಭೂಕುಸಿತದಿಂದ ಕಂಗೆಟ್ಟಿದ್ದ ನಿವಾಸಿಗಳಿಗೆ ಇದು ನೆಮ್ಮದಿಯನ್ನು ನೀಡಿತ್ತು.

ಆದರೆ, ಅಧಿಕಾರಿಗಳ ನಿರಾಸಕ್ತಿಯಿಂದಾಗಿ ಜಿಲ್ಲಾಧಿಕಾರಿ ನೀಡಿದ್ದ ಭರವಸೆಗಳು ಇಂದಿಗೂ ಈಡೇರಿಲ್ಲ. ತಮ್ಮ ಆತ್ಮೀಯರು ಸೇರಿದಂತೆ ಎಲ್ಲವನ್ನೂ ಕಳೆದುಕೊಂಡ ನಿವಾಸಿಗಳ ಕಣ್ಣಲ್ಲಿನ ನೀರು ಹಾಗೂ ಭರವಸೆಯೇ ಈಗ ಬತ್ತಿ ಹೋಗಿದೆ.

ಇಲ್ಲಿನ ನಿವಾಸಿಗಳ ಸ್ಥಳಾಂತರಕ್ಕೆ 15 ಕಿ.ಮೀ ದೂರದ ಕಳಸ ಸಮೀಪದ ಕುಂಬಳಡಿಕೆಯಲ್ಲಿ ಸರ್ಕಾರಿ ಜಾಗವನ್ನು ನೀಡಲು ಜಿಲ್ಲಾಡಳಿತ ನಿರ್ಧರಿಸಿತ್ತು. ಆದರೆ, ಕಾಫಿ ತೋಟಗಳು ಮತ್ತು ಜಾನುವಾರುಗಳನ್ನು ಬಿಟ್ಟು ನಿವಾಸಿಗಳು ದೂರದ ಸ್ಥಳಕ್ಕೆ ಸ್ಥಳಾಂತರಗೊಳ್ಳಲು ನಿರಾಕರಿಸಿದರು. ಅದರ ಬದಲಿಗೆ, ಒಡಿನಕುಡಿಗೆ ಬಳಿ ಜಮೀನು ಗುರುತಿಸಿ ಅಲ್ಲಿಗೆ ಸ್ಥಳಾಂತರ ಮಾಡಲು ಮುಂದಾಗಿದ್ದರು. ಒಂದೇ ಬಾರಿಗೆ ಮನೆ ನಿರ್ಮಿಸಿಕೊಳ್ಳದವರಿಗೆ 1 ಲಕ್ಷ ರೂ. ಪರಿಹಾರ ನೀಡುವುದಾಗಿಯೂ ಜಿಲ್ಲಾಡಳಿತ ಹೇಳಿತ್ತು.

ಶಾಸಕ ಎಂ.ಪಿ.ಕುಮಾರಸ್ವಾಮಿ ಸಂತ್ರಸ್ತರಿಗೆ 2.20 ಎಕರೆ ಜಮೀನು ಮಂಜೂರು ಮಾಡಲು ಸಹಾಯ ಮಾಡಿದರು. ಈ ಪ್ರಕ್ರಿಯೆಯು ಎರಡು ವರ್ಷಗಳ ಕಾಲ ನಡೆಯಿತು. ಅರಣ್ಯ ಇಲಾಖೆಯಿಂದ ಅನುಮತಿ ಪಡೆಯಲು ನಿವಾಸಿಗಳು ಇನ್ನೂ 6 ತಿಂಗಳು ಕಾಯಬೇಕಾಯಿತು ಮತ್ತು ಭೂಮಿಯನ್ನು ಸಮತಟ್ಟು ಮಾಡಲು ಇನ್ನೂ ಮೂರು ತಿಂಗಳು ಕಾಯಬೇಕಾಯಿತು.

ಇದಾದ ಬಳಿಕವೂ ನಿವಾಸಿಗಳಿಗೆ ಮತ್ತೊಂದು ಸಂಕಷ್ಟ ಎದುರಾಯಿತು. ಹೊಸ ಮನೆಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದ ಅವರು, ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ಮಳೆ ಪೀಡಿತ ಪ್ರದೇಶಗಳಲ್ಲಿ ಅನುದಾನ ಪಡೆಯಲು ಅಗತ್ಯವಿರುವ ನಿವೇಶನಗಳ ಹಕ್ಕುಪತ್ರ ಪಡೆಯಲು ಹರಸಾಹಸ ಪಡುತ್ತಿದ್ದಾರೆ. ಅಧಿಕಾರಿಗಳ ಹಗ್ಗಜಗ್ಗಾಟದಿಂದ ನಿರ್ಮಾಣ ಕಾರ್ಯ ಸ್ಥಗಿತಗೊಂಡಿದ್ದು, ಇದರಿಂದ ಗ್ರಾಮಸ್ಥರು ಮತ್ತೆ ಅತಂತ್ರರಾಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

SCROLL FOR NEXT