ಪ್ರಾತಿನಿಧಿಕ ಚಿತ್ರ 
ರಾಜ್ಯ

ಬೆಂಗಳೂರು: ಜುಲೈ ಕೊನೆಯ 381 ಮಾದರಿಗಳ ಪರೀಕ್ಷೆಯಲ್ಲಿ ಓಮೈಕ್ರಾನ್ ಉಪತಳಿಗಳು ಅಧಿಕ

ರಾಜ್ಯದಲ್ಲಿ ವಿಶೇಷವಾಗಿ ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳು ಏರಿಕೆಯಾಗುತ್ತಿದ್ದು, ರಾಜ್ಯ ಆರೋಗ್ಯ ಇಲಾಖೆಯು ಜುಲೈ ಅಂತ್ಯದಲ್ಲಿ 381 ಆರ್‌ಟಿಪಿಸಿಆರ್‌ ಮಾದರಿಗಳಲ್ಲಿ ಹೆಚ್ಚಿನವು ಕೋವಿಡ್ ರೂಪಾಂತರ ಓಮೈಕ್ರಾನ್‌ ಹೆಚ್ಚಿನ ಪ್ರಮಾಣದಲ್ಲಿ ಕಂಡುಬಂದಿದೆ ಎನ್ನಲಾಗಿದೆ.

ಬೆಂಗಳೂರು: ರಾಜ್ಯದಲ್ಲಿ ವಿಶೇಷವಾಗಿ ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳು ಏರಿಕೆಯಾಗುತ್ತಿದ್ದು, ರಾಜ್ಯ ಆರೋಗ್ಯ ಇಲಾಖೆಯು ಜುಲೈ ಅಂತ್ಯದಲ್ಲಿ 381 ಆರ್‌ಟಿಪಿಸಿಆರ್‌ ಮಾದರಿಗಳಲ್ಲಿ ಹೆಚ್ಚಿನವು ಕೋವಿಡ್ ರೂಪಾಂತರ ಓಮೈಕ್ರಾನ್‌ ಹೆಚ್ಚಿನ ಪ್ರಮಾಣದಲ್ಲಿ ಕಂಡುಬಂದಿದೆ ಎನ್ನಲಾಗಿದೆ.

ಓಮೈಕ್ರಾನ್ ಮತ್ತು ಅದರ ಉಪ ತಳಿಗಳಾದ BA2, BA1.1.529 ಮತ್ತು BA5 ಪ್ರಾಬಲ್ಯವನ್ನು ಮುಂದುವರೆಸಿದೆ ಎಂದು ದೃಢಪಟ್ಟಿದೆ. ಆದರೆ, ರಾಜ್ಯದಲ್ಲಿ ಓಮೈಕ್ರಾನ್‌ನ ಯಾವುದೇ ಹೊಸ ಉಪ ತಳಿ ವರದಿಯಾಗಿಲ್ಲ. ಈ ಪೈಕಿ ಶೇ 90ಕ್ಕೂ ಹೆಚ್ಚು ಪ್ರಕರಣಗಳು ಬೆಂಗಳೂರಿನಿಂದಲೇ ವರದಿಯಾಗಿವೆ.

355 ಮಾದರಿಗಳಲ್ಲಿ ಓಮೈಕ್ರಾನ್ ಉಪತಳಿಗಳ ಉಪಸ್ಥಿತಿಯನ್ನು ದೃಢಪಡಿಸಲಾಗಿದೆ. ಓಮೈಕ್ರಾನ್‌ನ ಉಪತಳಿಗಳಾದ BA2 ಅನ್ನು 141 ಮಾದರಿಗಳಲ್ಲಿ ದೃಢೀಕರಿಸಲಾಗಿದೆ, 77 ಮಾದರಿಗಳಲ್ಲಿ BA1.1.529, 133 ಮಾದರಿಗಳಲ್ಲಿ BA5 ಮತ್ತು ನಾಲ್ಕು ಮಾದರಿಗಳಲ್ಲಿ BA4 ಕಂಡುಬಂದಿದೆ. ಅಲ್ಲದೆ, ಇಟಿಎ, ಕಪ್ಪಾ ಮತ್ತು ಪಾಂಗೊ ಸೇರಿದಂತೆ ಕೋವಿಡ್‌ನ ಇತರ ರೂಪಾಂತರಗಳು ಕೂಡ 26 ಮಾದರಿಗಳಲ್ಲಿ ಕಂಡುಬಂದಿದೆ.

ಜುಲೈ ತಿಂಗಳಿನಾದ್ಯಂತ ವಂಶವಾಹಿ ಸಂರಚನೆ ವಿಶ್ಲೇಷಣೆಗಾಗಿ (ಜಿನೋಮ್‌ ಸೀಕ್ವೆನ್ಸಿಂಗ್) ಕಳುಹಿಸಲಾದ 1,300 ಮಾದರಿಗಳಲ್ಲಿ, 1,274 ಮಾದರಿಗಳಲ್ಲಿ ಓಮೈಕ್ರಾನ್‌ನ ಉಪತಳಿಗಳು ಕಂಡುಬಂದಿದೆ. ಜುಲೈನಲ್ಲಿ ವರದಿಯಾದ ಒಟ್ಟು ಪ್ರಕರಣಗಳ ಪೈಕಿ ಅವು ಶೇ 98 ರಷ್ಟಿವೆ.

ಸದ್ಯ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ಶಿವಮೊಗ್ಗ, ಧಾರವಾಡ, ಬಾಗಲಕೋಟೆ ಮತ್ತು ಬಳ್ಳಾರಿಯಲ್ಲಿ ಕೋವಿಡ್ ಪಾಸಿಟಿವಿಟಿ ದರವು ಶೇ 7.21 ರಿಂದ ಶೇ 10 ನಡುವಿದೆ. ಈ ಪೈಕಿ ದಾರವಾಡದಲ್ಲೇ ಅತಿಹೆಚ್ಚು ಎನ್ನಲಾಗಿದೆ. ಆರೋಗ್ಯ ಇಲಾಖೆಯು ದಿನವೊಂದಕ್ಕೆ ಕನಿಷ್ಠ 30 ಸಾವಿರ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸುತ್ತಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ, ಸೋಂಕಿತ ಪ್ರಾಥಮಿಕ ಸಂಪರ್ಕದಲ್ಲಿರುವವರೂ ಮತ್ತು ಸಹ ರೋಗಲಕ್ಷಣಗಳನ್ನು ಹೊಂದಿರುವವರನ್ನು ಮಾತ್ರ ಪರೀಕ್ಷಿಸಲಾಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT