ಸಾಂದರ್ಭಿಕ ಚಿತ್ರ 
ರಾಜ್ಯ

ಮಡಿಕೇರಿ: ವಾಸಿಸಲು ಮನೆ ಸಿಗುತ್ತಿಲ್ಲ, ದಯಾ ಮರಣ ಕರುಣಿಸಿ; ಜಿಲ್ಲಾಧಿಕಾರಿಗೆ ತೃತೀಯಲಿಂಗಿ ಮನವಿ

ತೃತೀಯಲಿಂಗಿಯಾಗಿರುವ ನನಗೆ ಮಡಿಕೇರಿಯಲ್ಲಿ ಬಾಡಿಗೆ ಮನೆ ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ದಯಾಮರಣ ಕೋರಿ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದ್ದೇನೆ

ಮಡಿಕೇರಿ: ಬಾಡಿಗೆ ಮನೆ ಪಡೆಯಲು ಸಾಧ್ಯವಾಗದೆ ತೃತೀಯಲಿಂಗಿಯೊಬ್ಬರು ದಯಾಮರಣಕ್ಕೆ ಮನವಿ ಮಾಡಿಕೊಂಡಿದ್ದಾರೆ. ತೃತೀಯಲಿಂಗಿಯಾಗಿರುವ ನನಗೆ ಮಡಿಕೇರಿಯಲ್ಲಿ ಬಾಡಿಗೆ ಮನೆ ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ದಯಾಮರಣ ಕೋರಿ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದ್ದೇನೆ. ಆದರೂ ನನ್ನ ಮನವಿಗೆ ಪ್ರತಿಕ್ರಿಯಿಸಲು ಡಿಸಿ ವಿಫಲರಾಗಿದ್ದಾರೆ ಎಂದು ರಿಹಾನಾ ತಮ್ಮ ಅಳಲು ತೋಡಿಕೊಂಡಿದ್ದಾರೆ.  

‘ನಾನು ಡಿಸಿಗೆ ಅರ್ಜಿ ಸಲ್ಲಿಸಿದ್ದೇನೆ. ಆದರೂ ಯಾವುದೇ ರೀತಿ ಪ್ರಯೋಜನವಾಗಿಲ್ಲ. ನಾನು ತೃತೀಯಲಿಂಗಿಯಾಗಿ ಹುಟ್ಟಿದ್ದು ತಪ್ಪೇ? ನನಗೆ ಬದುಕುವ ಹಕ್ಕಿಲ್ಲವೇ..? ಜನರಲ್ಲಿ ಮಾನವೀಯ ಮೌಲ್ಯಗಳಿವೆಯೇ? ನಾವು ಭಾರತೀಯ ಪ್ರಜೆಗಳಲ್ಲವೇ? ಎಂದು ರಿಹಾನಾ ಪ್ರಶ್ನಿಸಿದ್ದಾರೆ.

‘ನಾನು ಭಿಕ್ಷಾಟನೆ ಮೂಲಕ ಜೀವನ ಸಾಗಿಸುತ್ತಿದ್ದೇನೆ. ಆದರೆ, ನಮಗೆ ಯಾರೂ ಮನೆಯನ್ನು ಬಾಡಿಗೆಗೆ ನೀಡುತ್ತಿಲ್ಲ. ಡಿಸಿ ಕೂಡ ನಮಗೆ ಸಹಾಯ ಮಾಡಲು ವಿಫಲರಾಗಿದ್ದಾರೆ. ನನಗೆ ಉಚಿತ ಮನೆ ಬೇಡ, ಬಾಡಿಗೆ ನೀಡಲು ನಾನು ಸಿದ್ಧ. ಹೇಗಾದರೂ ಮಾಡಿ ನನಗೆ ಬಾಡಿಗೆ ಮನೆ ಕೊಡಿಸಿ, ಇಲ್ಲವೆ ದಯಾಮರಣ ಕೊಡಿಸಿ ಎಂದು ರಿಹಾನಾ ತಮಗಾದ ನೋವನ್ನು ಹಂಚಿಕೊಂಡಿದ್ದಾರೆ.   

ದಶಕದ ಹಿಂದೆ ರಿಹಾನಾ ಕೇರಳದಿಂದ ಮಡಿಕೇರಿಗೆ ತೆರಳಿದ್ದರು. ಇತರ ವಿದ್ಯಾರ್ಥಿಗಳ ಕಿರುಕುಳದಿಂದ ಆಕೆ ಸರ್ಕಾರಿ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಮಧ್ಯದಲ್ಲಿಯೇ ಬಿಡಬೇಕಾಯಿತು. "ನಾನು ಟ್ರಾನ್ಸ್‌ವುಮನ್ ಆಗಿದ್ದಕ್ಕಾಗಿ ಕಿರುಕುಳಕ್ಕೊಳಗಾಗಿದ್ದರಿಂದ ನಾನು ನನ್ನ ಅಧ್ಯಯನವನ್ನು ತ್ಯಜಿಸಲು ನಿರ್ಧರಿಸಿದೆ. ನಾನು ಮೈಸೂರಿನಲ್ಲಿ ಟ್ರಾನ್ಸ್ಜೆಂಡರ್ ಸಮುದಾಯಕ್ಕೆ ಸೇರಿಕೊಂಡೆ ಮತ್ತು ನಂತರ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೆ. ನಾನು ಮೈಸೂರು ಮತ್ತು ಬೆಂಗಳೂರಿಗೆ ಓಡಾಡುತ್ತಿದ್ದೆ,  ಮತ್ತೆ ಮಡಿಕೇರಿಗೆ ತೆರಳಲು ನಿರ್ಧರಿಸಿದೆ.

ಸುದೀರ್ಘ ಹುಡುಕಾಟದ ನಂತರ, ನಾನು ಬಾಡಿಗೆಗೆ ಮನೆಯನ್ನು ಹುಡುಕುವಲ್ಲಿ ಯಶಸ್ವಿಯಾಗಿದ್ದೇನೆ, ಆದರೆ ನೆರೆಹೊರೆಯವರು ಮಾಲೀಕನ ಮೇಲೆ ಒತ್ತಡ ಹೇರಿದರು ಮತ್ತು ನನ್ನನ್ನು ಹೊರಹಾಕಿದರು, ನಂತರ ಮಡಿಕೇರಿಯಲ್ಲಿ ಪ್ರವಾಹ ಸಂತ್ರಸ್ತರೊಬ್ಬರಿಂದ ಸಹಾಯ ಪಡೆದರು, ಅವರು ಭೂಕುಸಿತದಿಂದ ಹಾನಿಗೊಳಗಾದ ಮನೆಯಲ್ಲಿ ಆಶ್ರಯ ನೀಡಲು ಒಪ್ಪಿಕೊಂಡರು. ಪ್ರವಾಹ ಪರಿಹಾರ ಕಾರ್ಯದಡಿ ಕುಟುಂಬಕ್ಕೆ ಮನೆ ಮಂಜೂರಾಗಿದ್ದು, ಅವರು ತಮ್ಮ ಹಳೆಯ ಮನೆಯಲ್ಲಿಯೇ ಇರುವಂತೆ ಹೇಳಿದರು. ಆದರೆ, ಮನೆ ಈಗ ಶಿಥಿಲಾವಸ್ಥೆಯಲ್ಲಿದೆ' ಹೀಗಾಗಿ ನನಗೆಅಲ್ಲಿ ವಾಸಿಸಲು ಆಗುತ್ತಿಲ್ಲ ಎಂದು ತಮ್ಮನೋವು ತೋಡಿಕೊಂಡಿದ್ದಾರೆ.  ಸರ್ಕಾರಿ ವಸತಿ ಯೋಜನೆಯಡಿ ಮನೆಗಾಗಿ ರಿಹಾನಾ ಅರ್ಜಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

ಮಡಿಕೇರಿಯ ಜಿಲ್ಲಾಧಿಕಾರಿ (ಡಿಸಿ) ಕಚೇರಿಗೆ ತಾನು ಹಲವಾರು ಬಾರಿ ಭೇಟಿ ನೀಡಿ ಅರ್ಜಿಗಳನ್ನು ನೀಡಿದರೂ ನಿರ್ಲಕ್ಷಿಸಲಾಗಿದೆ ಎಂದು ರಿಹಾನಾ ಹೇಳಿದರು.  ಸದ್ಯ ಒಂದು ತಿಂಗಳಿನಿಂದ ಲಾಡ್ಜ್‌ನಲ್ಲಿ ಉಳಿದುಕೊಂಡಿದ್ದು ದಿನಕ್ಕೆ 400 ರೂ ಪಾವತಿಸಬೇಕಾಗಿದೆ. ಕೊನೆಯ ಪ್ರಯತ್ನವಾಗಿ, ನನಗೆ ದಯಾ ಮರಣ ನೀಡಲು ಅನುಮತಿ ನೀಡುವಂತೆ ಅರ್ಜಿಯೊಂದಿಗೆ ಡಿಸಿಯನ್ನು ಭೇಟಿ ಮಾಡಲು ಹೋಗಿದ್ದಾಗಿ ತಿಳಿಸಿದ್ದಾರೆ.

ನಾನು ಬದುಕಲು ಬಯಸುತ್ತೇನೆ, ಆದರೆ ನಾನು ಬದುಕುವುದು ಹೇಗೆ? . ಜಿಲ್ಲೆಯಲ್ಲಿ ಕೇವಲ ನಾಲ್ವರು ಟ್ರಾನ್ಸ್‌ವುಮೆನ್‌ಗಳಿದ್ದು, ಅವರು ಜೀವನೋಪಾಯಕ್ಕಾಗಿ ಭಿಕ್ಷೆಯನ್ನು ಅವಲಂಬಿಸಿದ್ದಾರೆ ಎಂದು ರಿಹಾನಾ ಹೇಳಿದ್ದಾರೆ. “ಉದ್ಯೋಗ ಹೊಂದುವುದು ನನ್ನ ಕನಸು. ಆದರೆ ನಮಗೆ ಯಾವುದು ಸಿಗುತ್ತಿಲ್ಲ. ಆಡಳಿತವು ಮಾಡಬಹುದಾದ ಕನಿಷ್ಠ ಕೆಲಸವೆಂದರೆ ನನಗೆ ಮನೆ ನೀಡುವುದು, ಅದನ್ನಾದರೂ ನೀಡಲಿ  ಎಂದು ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT