ರಾಜ್ಯ

ಜನತೆ ನಿಮ್ಮನ್ನು ಸ್ಮರಿಸಲು ಶಾಶ್ವತ ಕೊಡುಗೆಗಳ ನೀಡಿ: ರಾಜಕೀಯ ನಾಯಕರಿಗೆ ಹಿರಿಯ ಪತ್ರಕರ್ತ ಟಿಜೆಎಸ್ ಜಾರ್ಜ್​

Manjula VN

ಬೆಂಗಳೂರು: ಜನತೆ ನಿಮ್ಮನ್ನು ಸದಾಕಾಲ ನೆನೆಸಲು ಶಾಶ್ವತ ಕೊಡುಗೆಗಳ ನೀಡಿ ಎಂದು ರಾಜಕೀಯ ನಾಯಕರಿಗೆ ಹಿರಿಯ ಪತ್ರಕರ್ತ ಟಿಜೆಎಸ್ ಜಾರ್ಜ್ ಅವರು ಸಲಹೆ ನೀಡಿದ್ದಾರೆ.

ಬೆಂಗಳೂರು ಲಿಟರೇಚರ್ ಫೆಸ್ಟಿವಲ್ 2022 ರಲ್ಲಿ ತಮ್ಮ ಇತ್ತೀಚಿನ ಪುಸ್ತಕ ದಿ ಡಿಸ್ಮ್ಯಾಂಟ್ಲಿಂಗ್ ಆಫ್ ಇಂಡಿಯಾ ಇನ್ 35 ಪೋಟ್ರೇಟ್‌ಗಳ ಕುರಿತ ಪ್ಯಾನೆಲ್ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಂದಿನ ಕೆಲವು ವರ್ಷಗಳಲ್ಲಿ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅಪ್ರಸ್ತುತರಾಗುತ್ತಾರೆಂದು ಹೇಳಿದ್ದಾರೆ.

ಚರ್ಚೆ ವೇಳೆ ಭಾರತ್ ಜೋಡೋ ಯಾತ್ರೆಯ ನಂತರ ರಾಹುಲ್ ಅವರ ವಿಮರ್ಶಾತ್ಮಕ ದೃಷ್ಟಿಕೋನವನ್ನು ನೀವು ಪರಿಷ್ಕರಿಸಿದ್ದೀರಾ ಎಂಬ ಪ್ರಶ್ನೆವೊಂದಕ್ಕೆ ಉತ್ತರಿಸಿದ ಜಾರ್ಜ್ ಅವರು, ಅವರನ್ನು ವಿಚಾರವೆಂದು ನಾನು ಭಾವಿಸುವುದೇ ಇಲ್ಲ. ಏಕೆಂದರೆ, ಇನ್ನು ಕೆಲವೇ ವರ್ಷಗಳಲ್ಲಿ ಅವರು ಅಪ್ರಸ್ತುರಾಗಲಿದ್ದಾರೆಂದು ಹೇಳಿದ್ದಾರೆ.

ಅದೇ ರೀತಿ, ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಸೇರಿದಂತೆ "ನಮ್ಮ ದೇಶದ ಮಹಾನ್ ನಾಯಕರು" ಕೆಲವು ದಶಕಗಳಲ್ಲಿ ಅಪ್ರಸ್ತುತರಾಗುತ್ತಾರೆ ಎಂದು ತಿಳಿಸಿದ್ದಾರೆ.

“ಇನ್ನು ಐವತ್ತು ವರ್ಷಗಳ ನಂತರ, ಇಂದಿರಾ ಅಥವಾ ಪ್ರಸ್ತುತ ಅಧಿಕಾರದಲ್ಲಿರುವ ಜನರು ಮುಖ್ಯವಾಗುವುದಿಲ್ಲ ಎಂದು ನಾನು ಭಾವಿಸುತ್ತೇನೆ. ನಾಯಕರು ಇತಿಹಾಸಕ್ಕೆ ಶಾಶ್ವತ ಕೊಡುಗೆ ನೀಡದ ಹೊರತು, ಅವರನ್ನು ಸ್ಮರಿಸಲಾಗುವುದಿಲ್ಲ ಎಂದಿದ್ದಾರೆ.

“ಜೆಆರ್‌ಡಿ ಟಾಟಾ ಅಥವಾ ಅಣ್ಣಾದೊರೈ ಅವರಂತಹವರು ದೇಶಕ್ಕೆ ನೀಡಿದ ಕೊಡುಗೆಗಳ ಬಗ್ಗೆ ಯಾವುದೇ ಪ್ರಶ್ನೆಯಿಲ್ಲ ಎಂದು ನಾನು ಭಾವಿಸುತ್ತೇನೆ. ಆದರೆ ನೀವು ಪ್ರಸ್ತಾಪಿಸಿದ [ಮೋದಿ ಮತ್ತು ಶಾ] ಜನರ ಬಗ್ಗೆ ಮಾತನಾಡುತ್ತಾ, ಅವರು ಯಾವುದೇ ಶಾಶ್ವತ ಕೊಡುಗೆಗಳನ್ನು ನೀಡಿದ್ದಾರೆ ಎಂದು ನಾನು ಭಾವಿಸುವುದಿಲ್ಲ ಎಂದು ಹೇಳಿದರು.

ಮೋದಿಗೆ ಹೋಲಿಸಿದರೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಬಗ್ಗೆ ಮೃದು ಧೋರಣೆ ಅನುಸರಿಸಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿ, ವಾಜಪೇಯಿ ಅವರು ಮೋದಿಗಿಂತ ಭಿನ್ನವಾಗಿ ತಮ್ಮ ಪಕ್ಷಕ್ಕಿಂತ ಮೇಲಕ್ಕೆ ಏರಿದ್ದರು ಎಂದು ಹೇಳಿದ್ದಾರೆ.

SCROLL FOR NEXT