ರಾಜ್ಯ

ಡಿಸೆಂಬರ್ 9 ರಿಂದ ಮಂಗಳೂರು-ಮುಂಬೈ ನಡುವೆ ಸಂಚರಿಸಲಿವೆ ವಿಶೇಷ ರೈಲುಗಳು

Ramyashree GN

ಮಂಗಳೂರು: ಕೇಂದ್ರ ರೈಲ್ವೆಯ ಸಮನ್ವಯದೊಂದಿಗೆ ಕೊಂಕಣ ರೈಲ್ವೆಯು ಮುಂಬೈ ಮತ್ತು ಮಂಗಳೂರು ನಡುವೆ ವಿಶೇಷ ರೈಲುಗಳನ್ನು ಓಡಿಸಲಿದ್ದು, ಚಳಿಗಾಲದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ಭಾನುವಾರ ಅಧಿಕೃತ ಪ್ರಕಟಣೆ ತಿಳಿಸಿದೆ.

ರೈಲು ಸಂಖ್ಯೆ 01453 ಲೋಕಮಾನ್ಯ ತಿಲಕ್ (ಟಿ)-ಮಂಗಳೂರು ಜಂಕ್ಷನ್ ಸಾಪ್ತಾಹಿಕ ವಿಶೇಷ ರೈಲು ಡಿಸೆಂಬರ್ 9 ರಿಂದ ಜನವರಿ 6 ರವರೆಗೆ ಪ್ರತಿ ಶುಕ್ರವಾರ ಲೋಕಮಾನ್ಯ ತಿಲಕ್‌ ನಿಲ್ದಾಣದಿಂದ ರಾತ್ರಿ 10.15 ಕ್ಕೆ ಹೊರಡಲಿದೆ. ರೈಲು ಮರುದಿನ ಸಂಜೆ 5.05ಕ್ಕೆ ಮಂಗಳೂರು ಜಂಕ್ಷನ್‌ಗೆ ತಲುಪಲಿದೆ.

ರೈಲು ಸಂಖ್ಯೆ 01454 ಮಂಗಳೂರು ಜಂಕ್ಷನ್-ಲೋಕಮಾನ್ಯ ತಿಲಕ್ ಸಾಪ್ತಾಹಿಕ ವಿಶೇಷ ರೈಲು ಮಂಗಳೂರು ಜಂಕ್ಷನ್‌ನಿಂದ ಡಿಸೆಂಬರ್ 10 ರಿಂದ ಜನವರಿ 7 ರವರೆಗೆ ಪ್ರತಿ ಶನಿವಾರ ಸಂಜೆ 6.45ಕ್ಕೆ ಹೊರಡಲಿದೆ. ರೈಲು ಮರುದಿನ ಮಧ್ಯಾಹ್ನ 2.25 ಕ್ಕೆ ಲೋಕಮಾನ್ಯ ತಿಲಕ್ ನಿಲ್ದಾಣವನ್ನು ತಲುಪಲಿದೆ.

ಈ ರೈಲುಗಳು ಒನ್ ಟು ಟಯರ್ ಎಸಿ ಕೋಚ್, ಮೂರು 3 ಟಯರ್ ಎಸಿ ಮತ್ತು 8 ಸ್ಲೀಪರ್ ಕೋಚ್‌ಗಳು ಸೇರಿದಂತೆ ಒಟ್ಟು 17 ಕೋಚ್‌ಗಳನ್ನು ಹೊಂದಿರುತ್ತವೆ ಎಂದು ಪ್ರಕಟಣೆ ತಿಳಿಸಿದೆ.

SCROLL FOR NEXT