ರಾಜ್ಯ

ಏರ್ ಪೋರ್ಟ್ ಮೆಟ್ರೋ ಮಾರ್ಗದಲ್ಲಿ ಬೆಟ್ಟಹಲಸೂರು ನಿಲ್ದಾಣ ರದ್ದು, ಚಿಕ್ಕಜಾಲದಲ್ಲಿ ನಿರ್ಮಾಣ

Nagaraja AB

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮೆಟ್ರೋ ಮಾರ್ಗದಲ್ಲಿ ಪ್ರಸ್ತಾಪಿಸಲಾಗಿದ್ದ ಬೆಟ್ಟಹಲಸೂರು ಮೆಟ್ರೋ ನಿಲ್ದಾಣವನ್ನು ಕೈಬಿಡಲಾಗುತ್ತಿದ್ದು, ಆ ಜಾಗವನ್ನು ನಿವಾಸಿಗಳ ಬೇಡಿಕೆಗಳ ನಡುವೆ ಚಿಕ್ಕಜಾಲ ನಿಲ್ದಾಣ ಪಡೆದಿದೆ.

ಎಂಬೆಸ್ಸಿ ಗ್ರೂಪಿನ ನಿವಾಸಿಗಳ ಕಾರಣದಿಂದ ಬೆಟ್ಟ ಹಲಸೂರು ಮೆಟ್ರೋ ನಿಲ್ದಾಣಕ್ಕೆ  (ದೊಡ್ಡಜಾಲ ಮತ್ತು ಬಾಗಲೂರು ಕ್ರಾಸ್ ನಡುವಿನ) ಎಂಬೆಸಿ ಗ್ರೂಪ್ ಯೋಜಿಸಿತ್ತು. ಈ ನಿಲ್ದಾಣದ ನಿರ್ಮಾಣಕ್ಕೆ ಸುಮಾರು 140 ಕೋಟಿ ರೂ. ನೀಡಲು ಬಿಎಂಆರ್ ಸಿಎಲ್ ನೊಂದಿಗೆ ಕಂಪನಿ ಒಪ್ಪಂದ ಕೂಡಾ ಮಾಡಿಕೊಂಡಿತ್ತು.

 ಬಿಎಂಆರ್ ಸಿಎಲ್ ನೊಂದಿಗೆ ಸಾರ್ವಜನಿಕ- ಖಾಸಗಿ ಸಹಭಾಗಿತ್ವದಲ್ಲಿ ಈ ಮೆಟ್ರೋ ನಿಲ್ದಾಣಕ್ಕೆ ಯೋಜಿಸಲಾಗಿತ್ತು. ಆದರೆ, ಎಂಬೆಸಿ ಕಂಪನಿ ಯಾವುದೇ ರೀತಿಯ ಹಣವನ್ನು ಒದಗಿಸಿಲ್ಲ. ಇತ್ತೀಚಿಗೆ ಸಂಪರ್ಕಿಸಿದಾಗಲೂ ಆಂತರಿಕ ಸಮಸ್ಯೆಯಿಂದ ಅಷ್ಟು ಹಣವನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದೆ. ಆದ್ದರಿಂದ ಬೆಟ್ಟಹಲಸೂರು ಮೆಟ್ರೋ ನಿಲ್ದಾಣ ಪ್ರಸ್ತಾಪವನ್ನು ಕೈ ಬಿಡಲಾಗಿದೆ ಎಂದು ಬಿಎಂಆರ್ ಸಿಎಲ್ ಅಧಿಕಾರಿ ತಿಳಿಸಿದ್ದಾರೆ. 

ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ವಿಸ್ತೃತಾ ಯೋಜನಾ ವರದಿ ಅನುಮೋದನೆಗೊಂಡ ನಂತರ ಯಾವುದಾದರೂ ನಿಲ್ದಾಣವನ್ನು ಸೇರಿಸಬೇಕಾದರೆ ಅಥವಾ ತೆಗೆಯಬೇಕಾದರೆ ಉನ್ನತ ಮಟ್ಟದ ಸಮಿತಿಯ ಅನುಮೋದನೆ ಪಡೆಯಬೇಕಾಗುತ್ತದೆ. ಅದನ್ನು ಕೋರಲಾಗುವುದು ಎಂದು ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ಹೇಳಿದ್ದಾರೆ. ಉನ್ನತ ಮಟ್ಟದ ಸಮಿತಿ ಚಿಕ್ಕಜಾಲ ಮೆಟ್ರೋ ನಿಲ್ದಾಣಕ್ಕೆ ಅನುಮೋದನೆ ನೀಡಿರುವುದಾಗಿ ಅವರು ತಿಳಿಸಿದ್ದಾರೆ. 
 

SCROLL FOR NEXT