ರಾಜ್ಯ

ದತ್ತ ಜಯಂತಿ: ಮನೆ ಮನೆಗೆ ತೆರಳಿ ಭಿಕ್ಷಾಟನೆ ನಡೆಸಿದ ಸಿ.ಟಿ ರವಿ

Manjula VN

ಚಿಕ್ಕಮಗಳೂರು: ದತ್ತ ಜಯಂತಿ ಹಿನ್ನೆಲೆ ಶಾಸಕ ಸಿಟಿ ರವಿಯವರು ಬುಧವಾರ ಮನೆ ಮನೆಗೆ ತೆರಳಿ ಭಿಕ್ಷಾಟನೆ ನಡೆಸಿದರು.

ನಗರದ ನಾರಾಯಣಪುರ, ರಾಘವೇಂದ್ರ ಮಠದ ರಸ್ತೆ ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿ ಭಿಕ್ಷಾಟನೆ ಮೂಲಕ ಮಾಲಾಧಾರಿಗಳಿಂದ ಪಡಿಸಂಗ್ರಹ ನಡೆಸಿದರು.

ಪಡಿ ಸಂಗ್ರಹಕ್ಕೆ ಮನೆಗೆ ಬಂದ ದತ್ತಮಾಲಾಧಾರಿಗಳಿಗೆ ಜನರು ತೆಂಗಿನಕಾಯಿ, ಬಾಳೆಹಣ್ಣು, ಅಕ್ಕಿ, ವಿಳ್ಯೆದೆಲೆ ಅಡಿಕೆ -ಬೆಲ್ಲ ನೀಡಿ ಸ್ವಾಗತಿಸಿದರು.

ಬುಧವಾರ ಮನೆಮನೆಗೆ ತೆರಳಿ ಪಡಿ ಸಂಗ್ರಹಿಸಿದ ದತ್ತಮಾಲಾಧಾರಿಗಳು ಗುರುವಾಋ ಇರುಮುಡಿ ರೂಪದಲ್ಲಿ ಅದನ್ನ ದತ್ತಪೀಠಕ್ಕೆ ಕೊಂಡೊಯ್ದು ದತ್ತಾತ್ರೇಯ ಸ್ವಾಮಿಗೆ ಅರ್ಪಣೆ ಮಾಡಲಿದ್ದಾರೆ.

20ಕ್ಕೂ ಹೆಚ್ಚು ಮಾಲಾಧಾರಿಗಳ ಜೊತೆಗೆ ಶಾಸಕ ಸಿ.ಟಿ. ರವಿ ಪಡಿ ಸಂಗ್ರಹ ಮಾಡಿದರು. ಬುಧವಾರ ಮಧ್ಯಾಹ್ನ ನಗರದಲ್ಲಿ 30 ಸಾವಿರಕ್ಕೂ ಅಧಿಕ ದತ್ತ ಭಕ್ತರಿಂದ ನಗರದಲ್ಲಿ ಬೃಹತ್ ಶೋಭಾಯಾತ್ರೆ ನಡೆಯಲಿದೆ. ಹಾಗಾಗಿ, ಮುಂಜಾಗೃತ ಕ್ರಮವಾಗಿ ಶೋಭಾಯಾತ್ರೆ ತೆರಳುವ ಮಾರ್ಗದಲ್ಲಿ ಪಾರ್ಕಿಂಗ್ ರದ್ದು ಮಾಡಿದ್ದು, ಬೆಳಗ್ಗೆಯಿಂದಲೂ ಪೊಲೀಸರು ಕಾವಲಿದ್ದು, ಖಾಕಿ ಪಡೆ ಜಿಲ್ಲಾದ್ಯಂತ ಹೈ ಅಲರ್ಟ್ ಘೋಷಿಸಿದ್ದಾರೆ.

SCROLL FOR NEXT