ರಾಜ್ಯ

ಬೆಂಗಳೂರು: ಹಣವೂ ಇಲ್ಲ, ಮದುವೆಯೂ ಇಲ್ಲ; ಪ್ರೀತಿಸಿದ ಯುವತಿ ವಿವಾಹವಾಗಲೂ ನಿರಾಕರಿಸಿದ್ದಕ್ಕೆ ಯುವಕ ಆತ್ಮಹತ್ಯೆ

Shilpa D

ಬೆಂಗಳೂರು: ಮದುವೆಗೆ ಇನ್ನೇನು ಕೆಲವೇ ದಿನಗಳು ಬಾಕಿಯಿರುವಾಗ ಯುವತಿಯ ಮನೆಯವರು ಮದುವ ರದ್ಧುಗೊಳಿಸಿದ್ದಕ್ಕೆ ಮನನೊಂದ 29 ವರ್ಷದ ಖಾಸಗಿ ಸಂಸ್ಥೆಯ ಉದ್ಯೋಗಿಯೊಬ್ಬರು ಮಾಗಡಿ ರಸ್ತೆಯ ಹೊಸಪಾಳ್ಯದ ನಿವಾಸದ ಬಳಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಾಗಡಿಯ ತಿಪ್ಪಸಂದ್ರ ನಿವಾಸಿ ಆರ್ ಮೋಹನ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ, ಕಾವ್ಯಶ್ರೀ ಜೊತೆ ಮೋಹನ್ ಕುಮಾರ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಮದುವೆಯ ನಂತರ ಕಾವ್ಯಶ್ರೀ ಓದುವುದನ್ನು ಮುಂದುವರಿಸಲು ಪ್ರೋತ್ಸಾಹಿಸಲು ಕುಮಾರ್ ಅವರ ಕುಟುಂಬವು ಒಪ್ಪಿಕೊಂಡಿತ್ತು. ಮದುವೆಯ ವ್ಯವಸ್ಥೆಗಾಗಿ ಯುವತಿಯ ಕುಟುಂಬಕ್ಕೆ ಮೋಹನ್ ಕುಮಾರ್ 10 ಲಕ್ಷ ರೂಪಾಯಿ ನೀಡಿದ್ದರು ಎಂದು ವರದಿಯಾಗಿದೆ.

ಆದರೆ ಕೆಲವು ವದಂತಿಗಳು ಬಂದ ನಂತರ, ಹುಡುಗಿಯ ಮನೆಯವರು ಕುಮಾರ್ ಅವರನ್ನು ತಮ್ಮ ಮನೆಗೆ ಕರೆಸಿಕೊಂಡರು. ಮದುವೆಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿದರು. ಯುವತಿ ಮನೆಯವರು ಹಣವನ್ನು ಹಿಂದಿರುಗಿಸಲು ನಿರಾಕರಿಸಿದರು ಎಂದು ಆರೋಪಿಸಲಾಗಿದೆ.

ಸಮಸ್ಯೆ ಬಗೆಹರಿಸಲು ಕುಮಾರ್ ಮತ್ತು ಆತನ ಪೋಷಕರು ಕಾವ್ಯಶ್ರೀ ಮನೆಗೆ ಹೋದಾಗ, ಅವರನ್ನು ಅವಮಾನಿಸಿ ಬಲವಂತವಾಗಿ ಮನೆಯಿಂದ ಹೊರಕ್ಕೆ ತಳ್ಳಿದ್ದಾರೆ ಎನ್ನಲಾಗಿದೆ. ಇದೆಲ್ಲದರಿಂದ ಮನನೊಂದ ಆತ ನೇಣು ಬಿಗಿದುಕೊಂಡಿದ್ದಾನೆ ಎನ್ನಲಾಗಿದೆ.

ಮೋಹನ್ ಕುಮಾರ್ ಅವರ ತಂದೆ, ಎಚ್ ರಂಗಸ್ವಾಮಯ್ಯ (60), ಕಾವ್ಯಶ್ರೀ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದರ ಜೊತೆಗೆ ಅವಳ ತಾಯಿ, ವರಲಕ್ಷ್ಮಮ್ಮ ಮತ್ತು ದೂರದ ಸಂಬಂಧಿ ಜಯರಾಮಯ್ಯ. ಎಂಬ ಮೂವರು ಆರೋಪಿಗಳ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಲಾಗಿದೆ.

ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಮೃತ ವ್ಯಕ್ತಿ ಯಾವುದಾದರೂ ಡೆತ್ ನೋಟ್ ಬಿಟ್ಟು ಹೋಗಿದ್ದಾರೆಯೇ ಎಂಬುದನ್ನು ಪರಿಶೀಲಿಸುತ್ತಿದ್ದೇವೆ. ಸೆಪ್ಟೆಂಬರ್ 17 ರಂದು ವರಲಕ್ಷ್ಮಮ್ಮ ಮತ್ತು ಕಾವ್ಯಶ್ರೀ ಅವರಿಗೆ ಕುಮಾರ್ ಹಣ ನೀಡಿದ್ದರು ಎಂದು ಆರೋಪಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಾವ್ಯಶ್ರೀಗೆ ಏನಾದರೂ ತೊಂದರೆ ಯತ್ನಿಸಿದರೆ ಮಾತ್ರ ಕೊಲೆ ಮಾಡುವುದಾಗಿ ಆರೋಪಿಗಳು ಮೋಹನ್ ಕುಮಾರ್ ಅವರಿಗೆ ಜೀವ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಕುಮಾರ್ ತನ್ನ ಪೋಷಕರೊಂದಿಗೆ ಮನೆಗೆ ಮರಳಿದರು. ಬೆಳಗಿನ ಜಾವ 3.30ರ ಸುಮಾರಿಗೆ ಕೆಲಸ ನಿಮಿತ್ತ ಮನೆಯಿಂದ ಹೊರಟು ನಾಲ್ಕು ಗಂಟೆಗೆ ಕಾವ್ಯಶ್ರೀ ಮನೆಯ ಬಳಿ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

SCROLL FOR NEXT