ರಾಜ್ಯ

ಮೂಡಬಿದರಿಯಲ್ಲಿ ಭಾರತದ ಮೊದಲ ಅಂತಾರಾಷ್ಟ್ರೀಯ ಸ್ಕೌಟ್ಸ್, ಗೈಡ್ಸ್ ಜಾಂಬೂರಿಗೆ ಸಕಲ ಸಿದ್ಧತೆ 

Srinivas Rao BV

ಮಂಗಳೂರು: ಭಾರತದ ಮೊದಲ ಅಂತಾರಾಷ್ಟ್ರೀಯ ಸ್ಕೌಟ್ಸ್ ಹಾಗೂ ಗೈಡ್ಸ್ ಜಾಂಬೂರಿಗೆ ಮೂಡಬಿದರಿಯಲ್ಲಿ ಸಿದ್ಧತೆಗಳು ಭರದಿಂದ ಸಾಗಿದೆ.

ಡಿ.21 ರಿಂದ 27 ವರೆಗೂ ಆಳ್ವಾಸ್ ಶಿಕ್ಷಣ ಫೌಂಡೇಷನ್ (ಎಇಎಫ್) ಕ್ಯಾಂಪಸ್ ನಲ್ಲಿ ಜಾಂಬೂರಿ ನಡೆಯಲಿದ್ದು, 50,000 ಸ್ಕೌಟ್ಸ್ ಹಾಗೂ ಗೈಡ್ ಗಳು ಸೇರಿದಂತೆ ಒಟ್ಟು 63,000 ಮಂದಿ ಭಾಗವಹಿಸಲಿದ್ದಾರೆ. 10 ದೇಶಗಳಿಂದ 10,000 ಮಂದಿ ತರಬೇತಿ ನೀಡುವವರು ಹಾಗೂ 3,000 ಮಂದಿ ಸ್ವಯಂ ಸೇವಕರು ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ. ಇದೇ ಮೊದಲ ಬಾರಿಗೆ ಭಾರತದಲ್ಲಿ ಇಂಥಹದ್ದೊಂದು ಕಾರ್ಯಕ್ರಮ ನಡೆಯುತ್ತಿದೆ. 

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, 100 ಎಕರೆಯ ವ್ಯಾಪ್ತಿಯಲ್ಲಿರುವ ಆಳ್ವಾಸ್ ಕ್ಯಾಂಪಸ್ ನಲ್ಲಿ ಈ ಕಾರ್ಯಕ್ರಮ ನಡೆಯುತ್ತಿದ್ದು, ವಿದ್ಯಾರ್ಥಿಗಳಿಗೆ ಪಶ್ಚಿಮ ಘಟ್ಟ ಹಾಗೂ ಇತರ ಅಂಶಗಳನ್ನು ತಿಳಿಸುವುದಕ್ಕೆ ಜಂಗಲ್ ಟ್ರಯಲ್ ಗಾಗಿ ಅರಣ್ಯ ಪ್ರದೇಶವನ್ನು ಸಿದ್ಧಗೊಳಿಸಲಾಗಿದೆ. 

SCROLL FOR NEXT