ರಾಜ್ಯ

ಕಲಬುರಗಿ ರೈಲು ನಿಲ್ದಾಣಕ್ಕೆ ಹಸಿರು ಬಣ್ಣ: ಮಸೀದಿಯನ್ನು ಹೋಲುತ್ತದೆ ಎಂದ ಹಿಂದೂ ಸಂಘಟನೆಗಳು; ಬಿಳಿ ಬಣ್ಣ ಲೇಪಿಸಿದ ಇಲಾಖೆ

Sumana Upadhyaya

ಕಲಬುರಗಿ: ಮೈಸೂರು ನಗರದಲ್ಲಿ ಬಸ್ ನಿಲ್ದಾಣವೊಂದನ್ನು ಗುಂಬಜ್ ಮಾದರಿಯಲ್ಲಿ ಕೆ ಆರ್ ಕ್ಷೇತ್ರದ ಶಾಸಕ ಎಸ್ ಎ ರಾಮದಾಸ್ ಅವರು ನಿರ್ಮಾಣ ಮಾಡಿ ಅದಕ್ಕೆ ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ತೀವ್ರ ವಿರೋಧ ವ್ಯಕ್ತಪಡಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಆದೇಶದಂತೆ ನಂತರ ಗುಂಬಜ್ ಮಾದರಿಯನ್ನು ತೆರವು ಮಾಡಿದ್ದು ಹಳೆಯ ವಿಚಾರ.

ಇಂತಹದ್ದೇ ಪ್ರಕರಣ ಕಲಬುರಗಿಯ ರೈಲ್ವೆ ನಿಲ್ದಾಣಕ್ಕೆ ಎದುರಾಗಿದೆ. ಕಲಬುರಗಿ ರೈಲು ನಿಲ್ದಾಣ ಮಸೀದಿಯನ್ನು ಹೋಲುತ್ತದೆ, ಅದರ ಮಧ್ಯಭಾಗ ಗುಂಬಜ್ ಮಾದರಿಯಲ್ಲಿ ಹಸಿರು ಬಣ್ಣವನ್ನು ರೈಲು ನಿಲ್ಧಾಣದ ಗೋಡೆಗೆ ಹಚ್ಚಿರುವುದರಿಂದ ಮಸೀದಿಯ ರೀತಿ ಕಾಣುತ್ತದೆ, ಅಲ್ಲಿಗೆ ಬೇರೆ ಬಣ್ಣ ಹಚ್ಚಬೇಕೆಂದು ಹಿಂದೂಪರ ಸಂಘಟನೆಗಳು ಒತ್ತಾಯಿಸಿದ್ದವು.

ಹಿಂದೂ ಸಂಘಟನೆಗಳ ಒತ್ತಡದಿಂದ ವಿವಾದ ಸ್ವರೂಪಕ್ಕೆ ತಿರುಗುವುದು ಬೇಡವೆಂದು ರೈಲ್ವೆ ಇಲಾಖೆ ಈಗ ಹಸಿರು ಬಣ್ಣದ ಮೇಲೆ ಬಿಳಿಯ ಬಣ್ಣವನ್ನು ಹಚ್ಚಿಸಿದೆ.

SCROLL FOR NEXT