ರಾಜ್ಯ

ಮೂಡುಬಿದರಿಯಲ್ಲಿ ಜಾಂಬೂರಿಗೆ ಭರ್ಜರಿ ಸಿದ್ಧತೆ: 2 ಲಕ್ಷ ರೊಟ್ಟಿ ಪೂರೈಸಲು ಸ್ಕೌಟ್ಸ್ ಮತ್ತು ಗೈಡ್ಸ್ ಮುಂದು!

Manjula VN

ಗದಗ: ಡಿ.21ರಿಂದ 27ರವರೆಗೆ ಮೂಡುಬಿದರಿಯ ಆಳ್ವಾಸ್ ಕಾಲೇಜು ಆವರಣದಲ್ಲಿ ಅಂತರರಾಷ್ಟ್ರೀಯ ಸ್ಕೌಟ್ಸ್ –ಗೈಡ್ಸ್ ಸಾಂಸ್ಕೃತಿಕ ಜಾಂಬೂರಿ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಗದಗದ ಸ್ಕೌಟ್ಸ್ ಮತ್ತು ಗೈಡ್ಸ್ ಸದಸ್ಯರು ವಿನೂತನ ಪ್ರಯತ್ನವೊಂದಕ್ಕೆ ಮುಂದಾಗಿದ್ದಾರೆ.

ಕಾರ್ಯಕ್ರಮಕ್ಕೂ ಮುನ್ನ ಗದಗದ ಸ್ಕೌಟ್ಸ್ ಮತ್ತು ಗೈಡ್ಸ್ ಸದಸ್ಯರು ಮೂಡುಬಿದರಿಗೆ 2 ಲಕ್ಷ ಜೋಳದ ರೊಟ್ಟಿ ಕಳುಹಿಸಲು ಮುಂದಾಗಿದ್ದಾರೆ.

ಭಾರತ, ಕೆನಡಾ, ಮಲೇಷ್ಯಾ, ಥೈಲ್ಯಾಂಡ್ ಮತ್ತು ಇತರ 10 ದೇಶಗಳ ಸುಮಾರು 50,000 ವಿದ್ಯಾರ್ಥಿಗಳು ಮತ್ತು 10,000 ಶಿಕ್ಷಕರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಗದಗ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಪ್ರತಿ ತಾಲೂಕಿನಿಂದ 40 ರಿಂದ 50 ಸಾವಿರ ರೊಟ್ಟಿ ಸಂಗ್ರಹಿಸುವ ಜವಾಬ್ದಾರಿಯನ್ನು ಸದಸ್ಯರಿಗೆ ನೀಡಿದೆ.

ಗದಗ ಪಟ್ಟಣದ ವಿವೇಕಾನಂದನಗರದ ವಿದ್ಯಾರ್ಥಿ ಶರಣು ಬಾರ್ಕರ್ ಮಾತನಾಡಿ, ನಮ್ಮ ಶಿಕ್ಷಕರು ಮತ್ತು ಇತರ ಸದಸ್ಯರು ಜೋಳದ ರೊಟ್ಟಿ ಕಳುಹಿಸಲು ನಿರ್ಧರಿಸಿದ್ದಾರೆ. ಬೇರೆ ಭಾಗದ ವಿದ್ಯಾರ್ಥಿಗಳೂ ಆಹಾರ ಪದಾರ್ಥಗಳನ್ನು ಪೂರೈಸುತ್ತಿದ್ದಾರೆ. ಗದಗ ಸ್ಕೌಟ್ ಮತ್ತು ಗೈಡ್ಸ್ ತಂಡ 2 ಲಕ್ಷ ರೊಟ್ಟಿ ಕಳುಹಿಸಲು ನಿರ್ಧರಿಸಿದ್ದು, ಅದನ್ನು ಸಾಧಿಸಲು ಜಿಲ್ಲೆಯ ಮೂಲೆ ಮೂಲೆಗೆ ತೆರಳಿ ಆರ್ಡರ್ ನೀಡಿ ರೊಟ್ಟಿ ಪಡೆಯುತ್ತಿದ್ದೇವೆಂದು ಹೇಳಿದ್ದಾರೆ.

ಸೋಮವಾರದವರೆಗೆ, ನಾವು ಸುಮಾರು 80,000 ರೊಟ್ಟಿಗಳನ್ನು ಸಂಗ್ರಹಿಸಿದ್ದೇವೆ. ಅವುಗಳನ್ನು ಈವೆಂಟ್‌ಗೆ ಎರಡು ಅಥವಾ ಮೂರು ದಿನಗಳ ಮೊದಲು ಕಳುಹಿಸುತ್ತೇವೆಂದು ತಿಳಿಸಿದ್ದಾರೆ.

ಈ ವಿಚಾರವನ್ನು ಪ್ರಸ್ತಾಪಿಸಿದ ಲಕ್ಷ್ಮೇಶ್ವರ ಬಿಇಒ ಅವರು, “ಇದು ಪ್ರಪಂಚದಾದ್ಯಂತದ ವಿದ್ಯಾರ್ಥಿಗಳ ಸಭೆಯಾಗಿದೆ. ವಿದ್ಯಾರ್ಥಿಗಳು ರೊಟ್ಟಿ, ಶೇಂಗಾ (ಕಡಲೆ) ಚಟ್ನಿ ಮತ್ತು ಮೊಸರು ರುಚಿ ನೋಡಬೇಕೆಂದು ನಾವು ಬಯಸುತ್ತೇವೆ. ಸದ್ಯಕ್ಕೆ 2 ಲಕ್ಷ ರೊಟ್ಟಿ ಮತ್ತು 2 ಕ್ವಿಂಟಾಲ್ ಶೇಂಗಾ ಚಟ್ನಿ ಕಳುಹಿಸಲು ಸಿದ್ಧತೆ ನಡೆಸಿದ್ದೇವೆಂದಿದ್ದಾರೆ.

SCROLL FOR NEXT