ರಾಜ್ಯ

ಕಲಬುರಗಿ: ಶಿಥಿಲಾವಸ್ಥೆಯಲ್ಲಿರುವ ಓವರ್ ಹೆಡ್ ಟ್ಯಾಂಕ್ ಗೆ ಬಿದ್ದು 18 ಮಂಗಗಳು ಸಾವು

Sumana Upadhyaya

ಕಲಬುರಗಿ: ಚಿತ್ತಾಪುರ ತಾಲೂಕಿನ ಹಲಕರ್ತ ಗ್ರಾಮದಲ್ಲಿ ಆಕಸ್ಮಿಕವಾಗಿ ಬಿದ್ದು 18 ಮಂಗಗಳು ಮೃತಪಟ್ಟಿದ್ದು, 16 ಮಂಗಗಳನ್ನು ಕಾಪಾಡಲಾಗಿದೆ. 

ಈ ಕುರಿತು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಚಿತ್ತಾಪುರ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನೀಲಗಂಗಾ, ಶುಕ್ರವಾರ ಸಂಜೆ ಕೆಲವು ಮಂಗಗಳು ಮೃತಪಟ್ಟಿರುವ ಬಗ್ಗೆ ತಡವಾಗಿ ತಿಳಿದುಬಂದಿದೆ. ಸ್ಥಳೀಯ ಜನರು ಗ್ರಾಮ ಪಂಚಾಯಿತಿಯ ನೆರವಿನೊಂದಿಗೆ ಗುರುವಾರ 16 ಮಂಗಗಳನ್ನು ರಕ್ಷಿಸಿದ್ದು, ಸುಮಾರು 6 ಗಂಟೆಗಳ ಕಾರ್ಯಾಚರಣೆಯಲ್ಲಿ 18 ಮಂಗಗಳ ಮೃತದೇಹವನ್ನು ಓವರ್‌ಹೆಡ್ ಟ್ಯಾಂಕ್‌ನಿಂದ ಹೊರಕ್ಕೆ ತರಲಾಯಿತು.

ನೀಲಗಂಗಾ ಹಲಕರ್ತ ಗ್ರಾಮದ ಓವರ್‌ಹೆಡ್‌ ಟ್ಯಾಂಕ್‌ ಶಿಥಿಲಗೊಳ್ಳಲು ಮುಂದಾಗಿದೆ. ಈ ಓವರ್ ಹೆಡ್ ಟ್ಯಾಂಕ್ ಹಿಂಭಾಗದಲ್ಲಿ ದೊಡ್ಡ ಬೇವಿನ ಮರವಿದೆ. ಬಹುಶಃ ಆಟವಾಡುತ್ತಿದ್ದಾಗ ಮಂಗಗಳು ಓವರ್‌ಹೆಡ್‌ ಟ್ಯಾಂಕ್‌ಗೆ ಹಾರಿ, ಸರಿಯಾಗಿ ಮುಚ್ಚದ ಕಾರಣ ಅದರಲ್ಲಿ ಬಿದ್ದಿರಬಹುದು ಎಂದಿದ್ದಾರೆ. 

ಇಲ್ಲಿನ ಓವರ್‌ಹೆಡ್‌ ಟ್ಯಾಂಕ್‌ನಿಂದ ಮಂಗಗಳ ಕೂಗಾಟ ಕೇಳಿ ಬಂದು ನಂತರ ಗುರುವಾರ ಟ್ಯಾಂಕ್ ನಿಂದ ದುರ್ವಾಸನೆ ಬೀರಲಾರಂಭಿಸಿತು. ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯಿತಿ ನೌಕರರು ಜಂಟಿಯಾಗಿ 15 ಮಂಗಗಳನ್ನು ಓವರ್‌ಹೆಡ್‌ ಟ್ಯಾಂಕ್‌ಗೆ ಹಗ್ಗ ಹಾಕಿ ಹೊರತರುವಲ್ಲಿ ಯಶಸ್ವಿಯಾದರು. ಅವರಿಗೆ ಪಶುವೈದ್ಯರು ಚಿಕಿತ್ಸೆ ನೀಡಿದರು. ನಿನ್ನೆ ಬೆಳಗ್ಗೆ ಮತ್ತೊಂದು ಕೋತಿ ಮರಿ ಜೀವಂತವಾಗಿ ಹೊರತರಲಾಗಿದೆ. 

ಚಿತ್ತಾಪುರ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನೀಲಗಂಗಾ, ಪಶುವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕಿ, ವಲಯ ಅರಣ್ಯಾಧಿಕಾರಿ ಹಾಗೂ ಗ್ರಾಮೀಣ ಒಳಚರಂಡಿ ಮತ್ತು ನೀರು ಸರಬರಾಜು ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು ನಿನ್ನೆ ಬೆಳಗ್ಗೆ ಹಲಕರ್ತ ಗ್ರಾಮಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದರು. ಸುಮಾರು 6 ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ 1 ಮರಿ ಮಂಗವನ್ನೂ ರಕ್ಷಿಸಲಾಗಿದ್ದು, 18 ಕೋತಿಗಳ ಶವವನ್ನು ಹೊರತರಲಾಯಿತು.

ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಶವಗಳನ್ನು ಹೂಳಲಾಯಿತು. ಸಮಾಧಿ ಮಾಡುವ ಮೊದಲು ಮಂಗಗಳಿಗೆ ಪೂಜೆ ಸಲ್ಲಿಸುವುದು ಮುಂತಾದ ಆಚರಣೆಗಳನ್ನು ನಡೆಸಲಾಯಿತು. ಮುಂಜಾಗ್ರತಾ ಕ್ರಮವಾಗಿ ಹಲಕರ್ತ ಗ್ರಾಮದಲ್ಲಿ ಫಾಗಿಂಗ್ ಮಾಡಲಾಗಿದ್ದು, ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದ್ದು, ಆಗಬಹುದಾದ ಅನಾಹುತಗಳನ್ನು ತಪ್ಪಿಸಲಾಗಿದೆ.

SCROLL FOR NEXT