ಸಂಗ್ರಹ ಚಿತ್ರ 
ರಾಜ್ಯ

ಝಿಕಾ ವಿರುದ್ಧ ಹೋರಾಡಲು ಸೊಳ್ಳೆಗಳ ಸಂತಾನೋತ್ಪತ್ತಿ ತಾಣಗಳನ್ನು ನಿರ್ಮೂಲನೆಗೊಳಿಸಿ: ತಜ್ಞರು

ರಾಜ್ಯದಲ್ಲಿ ಮೊದಲ ಝಿಕಾ ವೈರಸ್ ಕೇಸ್ ಪತ್ತೆಯಾಗಿದ್ದು, ಝಿಕಾ ವಿರುದ್ಧ ಹೋರಾಡಲು ನಗರದಲ್ಲಿ ಸೊಳ್ಳೆಗಳ ಉತ್ಪತ್ತಿ ತಾಣಗಳನ್ನು ನಿರ್ಮೂಲನೆ ಮಾಡುವಂತೆ ಸಾರ್ವಜನಿಕರಿಗೆ ವೈದ್ಯರು ಸಲಹೆ ನೀಡಿದ್ದಾರೆ.

ಬೆಂಗಳೂರು: ರಾಜ್ಯದಲ್ಲಿ ಮೊದಲ ಝಿಕಾ ವೈರಸ್ ಕೇಸ್ ಪತ್ತೆಯಾಗಿದ್ದು, ಝಿಕಾ ವಿರುದ್ಧ ಹೋರಾಡಲು ನಗರದಲ್ಲಿ ಸೊಳ್ಳೆಗಳ ಉತ್ಪತ್ತಿ ತಾಣಗಳನ್ನು ನಿರ್ಮೂಲನೆ ಮಾಡುವಂತೆ ಸಾರ್ವಜನಿಕರಿಗೆ ವೈದ್ಯರು ಸಲಹೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಳೆಗಾಲವು ಏಳೆಂಟು ತಿಂಗಳ ಕಾಲ ವಿಸ್ತರಣೆಗೊಂಡಿರುವುದರಿಂದ ಈ ಸಂದರ್ಭದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದೆ.

ಕೆಸಿ ಜನರಲ್ ಆಸ್ಪತ್ರೆಯ ಡಾ.ಲಕ್ಷ್ಮೀಪತಿ ಸುದ್ದೇಕುಂಟೆ ಮಾತನಾಡಿ, ಆರು ತಿಂಗಳಿನಿಂದ ಪ್ರತಿದಿನ ಎರಡರಿಂದ ಮೂರು ಪ್ರಕರಣಗಳು ಪತ್ತೆಯಾಗುತ್ತಿವೆ. ಝಿಕಾ ವೈರಸ್ ಒಬ್ಬರಿಂದ ಒಬ್ಬರಿಗೆ ಹರಡುವ ರೋಗವಾಗಿದ್ದು, ಡೆಂಗ್ಯೂ-ಉಂಟುಮಾಡುವ ಸೊಳ್ಳೆಗಳಿಂದಲೂ ಹರಡುವ ಸಾಧ್ಯತೆಗಳಿವೆ, ಹೀಗಾಗಿ ನಗರದಲ್ಲಿ ಸೊಳ್ಳೆ ಉತ್ಪತ್ತಿಯಾಗುವ ಎಲ್ಲಾ ಸ್ಥಳಗಳನ್ನು ನಿರ್ಮೂಲನೆ ಮಾಡಬೇಕೆಂದು ಸಲಹೆ ನೀಡಿದ್ದಾರೆ.

ಡೆಂಗ್ಯೂ, ಜಾಂಡೀಸ್, ಮೆದುಳಿನ ಜ್ವರ, ವೆಸ್ಟ್ ನೈಲ್ ವೈರಸ್‌ಗಳಿಗೆ ಝಿಕಾ ನಿಕಟ ಸಂಬಂಧ ಹೊಂದಿದೆ. ಇದು ಸೋಂಕಿತ ಈಡಿಸ್ ಜಾತಿಯ ಸೊಳ್ಳೆಯ ಕಚ್ಚುವಿಕೆಯ ಮೂಲಕ ಹರಡುತ್ತದೆ, ಇದು ಡೆಂಗ್ಯೂಗೆ ಕಾರಣವಾಗಿದೆ ಎಂದು ತೀವ್ರ ನಿಗಾ ಸೇವೆಗಳ ಮಕ್ಕಳ ಸಲಹೆಗಾರ ಡಾ.ನವೇದ್ ಅಜಮ್ ವಿವರಿಸಿದರು.

ನಿಂತ ನೀರನ್ನು ಸ್ವಚ್ಛಗೊಳಿಸುವುದು ಅಥವಾ ಸಂಗ್ರಹಿಸಿದ ನೀರಿನ ಮೇಲೆ ಲಾರ್ವಿಡಲ್ ಎಣ್ಣೆಯನ್ನು ಸಿಂಪಡಿಸಲು ವೈದ್ಯರು ಸಲಹೆ ನೀಡಿದ್ದಾರೆ.

ಪೋಷಕರು ತಮ್ಮ ಮಕ್ಕಳಿಗೆ ಪೂರ್ಣ ತೋಳಿನ ಬಟ್ಟೆಗಳನ್ನು ಧರಿಸುವಂತೆ ಮತ್ತು ಸೊಳ್ಳೆ ನಿವಾರಕ ಕ್ರೀಮ್‌ಗಳನ್ನು ಬಳಸುವಂತೆ, ಬೆಡ್ ನೆಟ್‌ಗಳು, ಕಿಟಕಿ ಪರದೆಗಳು, ವೇಪರೈಸರ್‌ಗಳಂತಹ ರಕ್ಷಣೆಯ ಕ್ರಮಗಳನ್ನು ಬಳಸುವಂತೆಯೂ ಸಲಹೆ ನೀಡಿದ್ದಾರೆ.

ಗರ್ಭಿಣಿಯರು ಝಿಕಾ ವೈರಸ್'ಗೆ ಹೆಚ್ಚು ಗುರಿಯಾಗುತ್ತಿದ್ದು, ಗರ್ಭಿಣಿಯರಿಗೆ, ನವಜಾತ ಶಿಶುಗಳಿಗೆ ಹೆಚ್ಚೆಚ್ಚು ಪರೀಕ್ಷೆ ನಡೆಸುವಂತೆ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

BMTC ಬಸ್ ಚಾಲಕನಿಗೆ ಫಿಡ್ಸ್, ಚಿನ್ನಸ್ವಾಮಿ ಕ್ರೀಡಾಂಗಣ ರಸ್ತೆಯಲ್ಲಿ ಸರಣಿ ಅಪಘಾತ

ಬೆಂಗಳೂರು: ರಾತ್ರಿಯಿಡೀ ಸುರಿದ ಮಳೆಯಿಂದ ಹಲವೆಡೆ ಜಲಾವೃತ, ಸಂಚಾರ ದಟ್ಟಣೆ, ಇಂದಿನ IMD ವರದಿ!

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

SCROLL FOR NEXT