ರಾಜ್ಯ

ನಾಗರಹೊಳೆ ಹುಲಿ ಸಂರಕ್ಷಿತಾರಣ್ಯದಿಂದ ಬಲವಂತದಿಂದ ತೆರವು: ಅರಣ್ಯಾಧಿಕಾರಿಗಳ ವಿರುದ್ಧ ಪ್ರತಿಭಟಿಸಿದ ಜೇನು ಕುರುಬರು

Manjula VN

ಬೆಂಗಳೂರು: ನಾಗರಹೊಳೆ ಹುಲಿ ಸಂರಕ್ಷಿತಾರಣ್ಯದಿಂದ ಬಲವಂತದಿಂದ ತಮ್ಮನ್ನು ತೆರವುಗೊಳಿಸುತ್ತಿರುವ ಅರಣ್ಯ ಇಲಾಖೆ ವಿರುದ್ಧ ಜೇನು ಕುರುಬ ಜನಾಂಗದವರು ಭಾನುವಾರ ಪ್ರತಿಭಟನೆ ನಡೆಸಿದರು.

ಬೆಂಗಳೂರು ಅಂತರಾಷ್ಟ್ರೀಯ ಕೇಂದ್ರದಲ್ಲಿ ನಡೆಯುತ್ತಿರುವ ಗ್ರೀನ್ ಲಿಟರೇಚರ್ ಫೆಸ್ಟಿವಲ್ ನಲ್ಲಿ ಬುಡಕಟ್ಟು ಜನಾಂಗದ ಏಳು ಮಂದಿ ಭಿತ್ತಿಪತ್ರ ಹಿಡಿದು ಪ್ರತಿಭಟನೆ ನಡೆಸಿದರು.

ಸಂರಕ್ಷಣೆಯ ನೆಪದಲ್ಲಿ ಹಲವು ವರ್ಷಗಳಿಂದ ಅರಣ್ಯದಲ್ಲಿ ವಾಸಿಸುತ್ತಿರುವ ಬುಡಕಟ್ಟು ಜನಾಂಗದವರಿಗೆ ಬೆದರಿಕೆ, ಕಿರುಕುಳ ನೀಡಲಾಗುತ್ತಿದ್ದು, ಬಲವಂತದಿಂದ ಸ್ಥಳಾಂತರ ಮಾಡಲಾಗುತ್ತಿದೆ ಎಂದು ಕಿಡಿ ಕಾರಿದರು.

"ನಾವು ಅರಣ್ಯ ಇಲಾಖೆಯಿಂದ ನಿರಂತರ ಕಿರುಕುಳ ಮತ್ತು ಬಲವಂತದ ಹೊರಹಾಕುವಿಕೆಯನ್ನು ಎದುರಿಸುತ್ತಿದ್ದೇವೆ. ವನ್ಯಜೀವಿ ಸಂರಕ್ಷಣಾ ಸೊಸೈಟಿಯಂತಹ ಎನ್‌ಜಿಒಗಳು ನಾವು ವನ್ಯಜೀವಿಗಳ ನಿರಂತರ ಭಯದಲ್ಲಿ ಬದುಕುತ್ತಿದ್ದೇವೆ ಎಂದು ಬಿಂಬಿಸುವ ಮೂಲಕ ಸ್ಥಳಾಂತರಕ್ಕೆ ಬೆಂಬಲ ನೀಡುತ್ತಿವೆ, ಅದು ನಿಜವಲ್ಲ. ಡಬ್ಲ್ಯುಡಬ್ಲ್ಯುಎಫ್‌ನ ಸಂರಕ್ಷಣಾ ಮಾದರಿಯ ವಿರುದ್ಧ ನಾವು ಹೋರಾಟ ನಡೆಸುತ್ತಿದ್ದೇವೆ ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಜೇನು ಕುರುಬ ಯುವ ಮುಖಂಡ ಶಿವು ಜೆ.ಎ ಅವರು ಹೇಳಿದರು.

SCROLL FOR NEXT