ರಾಜ್ಯ

ಕೊಡಗಿನಲ್ಲೊಂದು ಕೋಮು ಸೌಹಾರ್ದತೆಯ ಕಥೆ: ಪುತ್ತರಿಯ ಸುಗ್ಗಿಯ ಹಬ್ಬ ಆಚರಿಸಿದ ಮುಸ್ಲಿಮ್ ಕುಟುಂಬ

Srinivas Rao BV

ಮಡಿಕೇರಿ: ಮಡಿಕೇರಿಯ ಎಮ್ಮೆಮಡು ಗ್ರಾಮದಲ್ಲೊಂದು ಕೋಮು ಸೌಹಾರ್ದತೆಯ ನಡೆ ಕಂಡುಬಂದಿದ್ದು, ತಮ್ಮ ಹಿಂದಿನ ಪೀಳಿಗೆಯೊಂದಿಗೆ ಬೆಸೆದುಕೊಂಡಿರುವ ನಂಟಿನ ಕಥೆ ಹೇಳುತ್ತಿದೆ. 

ಎಮ್ಮೆಮಡು ಗ್ರಾಮದ ಮುಸ್ಲಿಮರು ಹಾಗೂ ಕೊಡವ ಸಮುದಾಯದವರು ಒಟ್ಟಿಗೆ ಪುತ್ತರಿಯ ಸುಗ್ಗಿ ಹಬ್ಬವನ್ನು ಆಚರಿಸುತ್ತಾರೆ. 

ಕಾಲೀರಾ ಮುಸ್ಲಿಮ್ ಕುಟುಂಬ ಇತ್ತೀಚೆಗಷ್ಟೇ ಪುತ್ತರಿ ಹಬ್ಬವನ್ನು ಸಂಪ್ರದಾಯದ ಪ್ರಕಾರ ಆಚರಣೆ ಮಾಡಿದೆ. ಮೊದಲ ಭತ್ತದ ಕೊಯ್ಲನ್ನು ಮನೆಗೆ ತಂದು ಅದಕ್ಕೆ ಪೂಜೆ ಸಲ್ಲಿಸಿದ್ದಾರೆ. ಮನೆಯಲ್ಲಿ ಸಾವು ಸಂಭವಿಸಿದ್ದರ ಪರಿಣಾಮ ಪುತ್ತರಿಯನ್ನು ಅದೇ ದಿನ ಆಚರಿಸಲು ಸಾಧ್ಯವಾಗಲಿಲ್ಲ. ಆದ್ದರಿಂದ 7 ದಿನಗಳ ನಂತರ ಹಬ್ಬ ಆಚರಣೆ ಮಾಡಿದೆವು ಎಂದು ಕಲೀರಾ ಖಾದರ್ ಹೇಳಿದ್ದಾರೆ. 

ಪುರಾತನ ಕಾಲದಿಂದಲೂ ನಮ್ಮ ಕುಟುಂಬದ ಪೂರ್ವಜರು ಪುತ್ತರಿಯನ್ನು ಆಚರಣೆ ಮಾಡುತ್ತಿದ್ದರು. ಗ್ರಾಮದಲ್ಲಿ ಕೊಡವ ಸಮುದಾಯದೊಂದಿಗೆ ಮುಸ್ಲಿಮ್ ಸಮುದಾಯ ವಿಶೇಷ ನಂಟಿ ಹೊಂದಿದ್ದು,  ಈ ಹಿಂದೆ ಎರಡೂ ಸಮುದಾಯಗಳು ಒಟ್ಟಿಗೆ ಪುತ್ತರಿ ಆಚರಿಸುತ್ತಿದ್ದವು. ಆದರೆ ಕಾರಣಾಂತರಗಳಿಂದ ಇದು ಈಗ ಸ್ಥಗಿತಗೊಂಡಿದೆ. ಆದರೆ ಪ್ರತ್ಯೇಕವಾಗಿ ಪ್ರತಿ ವರ್ಷ ಆಚರಣೆ ಮಾಡಲಾಗುತ್ತಿದೆ. 
 

SCROLL FOR NEXT