ರಾಜ್ಯ

ವಿವಿ ಕುಲಪತಿ ನೇಮಕದಲ್ಲಿ ವಸೂಲಿ ಆರೋಪ: ಉನ್ನತ ತನಿಖೆಗೆ ಕಾಂಗ್ರೆಸ್ ಒತ್ತಾಯ

Nagaraja AB

ಬೆಂಗಳೂರು: 5-6 ಕೋಟಿ ರೂಪಾಯಿ ಹಣ ಪಡೆದು ವಿಶ್ವವಿದ್ಯಾಲಯಗಳಿಗೆ ಕುಲಪತಿಗಳನ್ನ ನೇಮಿಸಲಾಗುತ್ತಿದೆ ಎಂದು ಬಿಜೆಪಿ ಸಂಸದ ಪ್ರತಾಪ್ ಸಿಂಹ ನೀಡಿರುವ ಹೇಳಿಕೆ ಆಧಾರದ ಮೇಲೆ ಉನ್ನತ ಮಟ್ಟದ ತನಿಖೆ ನಡೆಯಬೇಕೆಂದು  ಪ್ರತಿಪಕ್ಷ ಕಾಂಗ್ರೆಸ್ ಒತ್ತಾಯಿಸಿದೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಆಗ ಸಹಾಯಕ ಪ್ರಾಧ್ಯಾಪಕ ನೇಮಕ ಹಗರಣ, ಈಗ ವಿಸಿ ನೇಮಕಕ್ಕೆ ವಸೂಲಿ  ಬಯಲಿಗೆ, ಅಶ್ವಥ್ ನಾರಾಯಣ್ ಅವರ ಭ್ರಷ್ಟ ಕೈಗಳು ಅದೆಷ್ಟು ಉದ್ಧವಾಗಿವೆ? ಎಂದು ಆರೋಪಿಸಿದೆ.

ಹಣ ನೀಡಿ ಪೊಲೀಸರು ಪೋಸ್ಟಿಂಗ್ ಪಡೆಯುತ್ತಾರೆ  ಎಂದು ಸಚಿವ ಎಂಟಿಬಿ ನಾಗರಾಜ್ ಹೇಳಿದ್ರೆ, ನಿರಾಣಿ ಹಣ ನೀಡಿ ಮಂತ್ರಿಯಾಗಿದ್ದಾರೆ ಅಂತಾ ಬಸನಗೌಡ ಪಾಟೀಲ್ ಯಾತ್ನಾಳ್ ಹೇಳ್ತಾರೆ.  5, 6 ಕೋಟಿ ನೀಡಿ ವಿವಿ ಕುಲಪತಿಗಳಾಗಿದ್ದಾರೆ  ಎಂದು ಸಂಸದ ಪ್ರತಾಪ್ ಸಿಂಹ ಹೇಳುತ್ತಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ  ದಮ್ಮು, ತಾಕತ್ತಿದ್ದರೆ ಹಣ ಪಡೆದವರು ಯಾರೆಂದು ಹೇಳಲಿ. ಇಲ್ಲವೇ ಅವರ ಹೇಳಿಕೆ ಆಧಾರದಲ್ಲಿ ಉನ್ನತ ತನಿಖೆಗೆ ವಹಿಸಲಿ ಎಂದು ಕಾಂಗ್ರೆಸ್ ಒತ್ತಾಯಿಸಿದೆ. 

SCROLL FOR NEXT