ಹೆಚ್ ಆರ್ ಬಿಆರ್ ಲೇಔಟ್ ನ ಕುಟುಂಬಗಳು (ಸಂಗ್ರಹ ಚಿತ್ರ) 
ರಾಜ್ಯ

ಬೆಂಗಳೂರು: ಹೆಚ್ ಆರ್ ಬಿಆರ್ ಲೇಔಟ್ ನಲ್ಲಿ ಮಾಲಿಕತ್ವಕ್ಕಾಗಿ ನಿವಾಸಿಗಳ ಸಂಘರ್ಷ

ಕಂದಾಯ ಇಲಾಖೆ ತನ್ನ 17 ಎಕರೆ ಜಾಗದ ಮಾಲಿಕತ್ವವನ್ನು ಬಿಡಿಎ ಗೆ ವರ್ಗಾವಣೆ ಮಾಡುತ್ತಿರುವುದರಲ್ಲಿ ದಶಕಗಳ ವಿಳಂಬ ಹೆಚ್ ಆರ್ ಬಿಆರ್ ಲೇಔಟ್ ನಲ್ಲಿ ಹಂಚಿಕೆಯಾಗಿರುವ 222 ನಿವೇಶನಗಳ ಕಾನೂನು ಸ್ಥಿತಿಗತಿಗಳ ಮೇಲೆ ಪರಿಣಾಮ ಉಂಟುಮಾಡುತ್ತಿದೆ.

ನವದೆಹಲಿ: ಕಂದಾಯ ಇಲಾಖೆ ತನ್ನ 17 ಎಕರೆ ಜಾಗದ ಮಾಲಿಕತ್ವವನ್ನು ಬಿಡಿಎ ಗೆ ವರ್ಗಾವಣೆ ಮಾಡುತ್ತಿರುವುದರಲ್ಲಿ ದಶಕಗಳ ವಿಳಂಬ ಹೆಚ್ ಆರ್ ಬಿಆರ್ ಲೇಔಟ್ ನಲ್ಲಿ  ಹಂಚಿಕೆಯಾಗಿರುವ 222 ನಿವೇಶನಗಳ ಕಾನೂನು ಸ್ಥಿತಿಗತಿಗಳ ಮೇಲೆ ಪರಿಣಾಮ ಉಂಟುಮಾಡುತ್ತಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನ ಇತ್ತೀಚಿನ ಆದೇಶ ಇಲ್ಲಿ ಮೂರು ದಶಕಗಳಿಂದ ನೆಲೆಸಿರುವ 150 ಕುಟುಂಬಗಳಿಗೆ ಎಚ್ಚರಿಕೆಯ ಗಂಟೆಯಾಗಿ ಪರಿಣಮಿಸಿದೆ. 

ಈ ಲೇಔಟ್ ನ್ನು ಬಿಡಿಎ 1984-1985 ರಲ್ಲಿ 222 ನಿವೇಷನಗಳೊಂದಿಗೆ 17 ಎಕರೆ ಪ್ರದೇಶದಲ್ಲಿ ನಿರ್ಮಿಸಿತ್ತು,  ಹಲವು ಯತ್ನಗಳ ಬಳಿಕ ಇಲ್ಲಿ ವಾಸಿಸುತ್ತಿರುವವರಿಗೆ ನಿವೇಷನಗಳು ಲಭ್ಯವಾಗಿದ್ದು, ಈಗ ಹಿರಿಯ ನಾಗರಿಕರಾಗಿದ್ದಾರೆ. 

ಬಿಡಿಎ ಒಣಗಿರುವ ಚನ್ನಸಂದ್ರ ಕೆರೆ (48 ಎಕರೆ) ಬಾನಸವಾಡಿ ಗ್ರಾಮದಲ್ಲಿ ಈ ಲೇಔಟ್ ನಿರ್ಮಿಸಿದ್ದು, ಬೆಂಗಳೂರು ಕೆರೆಗಳಿಗೆ ಸಂಬಂಧಿಸಿದಂತೆ ತನ್ನ ವರದಿಯಲ್ಲಿ ಲಕ್ಷ್ಮಣ ರಾವ್ ಸಮಿತಿ ಚನ್ನಸಂದ್ರದ ಕೆರೆಯನ್ನು ಪುನರುಜ್ಜೀವನಗೊಳಿಸಲು ಸಾಧ್ಯವಾಗದ ಕೆರೆ ಎಂದು ನಮೂದಿಸಿದೆ.  ರಾಜ್ಯ ಸರ್ಕಾರ ಈ ವರದಿಯನ್ನು ಅಂಗೀಕರಿಸಿದ್ದು, ಗೆಝೆಟ್ ನಲ್ಲಿ ಪ್ರಕಟಿಸಿದೆ. 

ನಗರದಲ್ಲಿರುವ ಎಲ್ಲಾ ಕೆರೆಗಳ ಮಾಲಿಕತ್ವ ಕಂದಾಯ ಇಲಾಖೆಯದ್ದಾಗಿದ್ದು, ಸರ್ವೇ ನಂಬರ್ 211 ರಲ್ಲಿ ಬರುವ ಕೆರೆ ಪ್ರದೇಶದ ಮಾಲಿಕತ್ವವನ್ನು ಕಂದಾಯ ಇಲಾಖೆ ಬಿಡಿಎ ಗೆ ಹಸ್ತಾಂತರಿಸಿಲ್ಲ! 1993 ರಿಂದ 2012 ರ ವರೆಗೂ ಬಿಡಿಎ ಕಂದಾಯ ಇಲಾಖೆಗೆ ಮಾಲಿಕತ್ವ ವರ್ಗಾವಣೆ ಮಾಡುವಂತೆ ಪತ್ರಗಳನ್ನು ಬರೆದಿದ್ದರೂ ಈ ವರೆಗೂ ಯಾವುದೇ ಉಪಯೋಗವಾಗಿಲ್ಲ.

2015 ರ ಜನವರಿ ತಿಂಗಳಲ್ಲಿ ಈ ಲೇಔಟ್ ನಲ್ಲಿರುವ ನಿವಾಸಿಗಳಿಗೆ ಮನೆಗಳನ್ನು ನೆಲಸಮ ಮಾಡುವ ನೊಟೀಸ್ ಬಂದು ದಶಕಗಳಿಂದ ವಾಸಿಸುತ್ತಿದ್ದವರಿಗೆ ಅಘಾತ ಉಂಟಾಗಿತ್ತು. 

"ಈ ಬಗ್ಗೆ ಮಾತನಾಡಿರುವ ನಿವೇಷನದ ಮಾಲಿಕರಾಗಿರುವ ಸುನಿತಾ ಹರೀಶ್, ನಾವು ಕೆಆರ್ ಪುರಂ ನಲ್ಲಿರುವ ತಹಶೀಲ್ದಾರ್ ಕೋರ್ಟ್ ನ್ನು ಪ್ರಶ್ನಿಸಿದ್ದೆವು ಅದಾದ ಬಳಿಕ ನೆಲಸಮ ಆಗಲಿಲ್ಲ. ಆದರೆ ಖಾಸಗಿ ಒತ್ತುವರಿದಾರರ ಮಳಿಗೆಗಳನ್ನು ನೆಲಸಮ ಮಾಡಲಾಯಿತು ಎಂದು ವಿವರಿಸಿದ್ದಾರೆ.
 
ಕುನ್ನಪ್ಪ, ಕುಟ್ಟಪ್ಪ ಎಂಬ ಇಬ್ಬರು ವ್ಯಕ್ತಿಗಳ ಕುಟುಂಬಗಳು ಲೇಔಟ್ ನಿರ್ಮಾಣ ಮಾಡಲಾಗಿರುವ 17 ಎಕರೆ ಪ್ರದೇಶದ ಮೇಲೆ ಹಕ್ಕು ಪ್ರತಿಪಾದನೆ ಮಾಡಿದ್ದರು ಡಿ.1, 2022 ರಂದು ಹೈಕೋರ್ಟ್ ಈ ಎರಡು ವ್ಯಕ್ತಿಗಳ ಪರವಾಗಿ ಹೈಕೋರ್ಟ್ ತೀರ್ಪು ನೀಡಿದೆ. 
 
ಕೋರ್ಟ್ ಗೆ ಹೋದ ಕುಟುಂಬಗಳು ಬಡ ಕುಟುಂಬಗಳಾಗಿದ್ದು, ಬಿಲ್ಡರ್ ಗಳು ಭೂಮಿಯನ್ನು ಕಿತ್ತುಕೊಳ್ಳುವಂತೆ ಉತ್ತೇಜಿಸುತ್ತಿದ್ದಾರೆ ಎನ್ನುತ್ತಾರೆ ಇಲ್ಲಿನ ನಿವಾಸಿ ಎನ್ ಸೆಲ್ವಿ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Delhi Red Fort blast: ಉಗ್ರ ಉಮರ್‌ಗೆ ಆಶ್ರಯ ನೀಡಿದ್ದ ಆರೋಪಿ ಬಂಧನ, NIA ವಿಚಾರಣೆ

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ಅರುಣಾಚಲ ಪ್ರದೇಶ ಭಾರತದ "ಅವಿಭಾಜ್ಯ-ಅಳಿಸಲಾಗದ" ಭಾಗ: ಚೀನಾಗೆ ಭಾರತ ತಿರುಗೇಟು

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

ಅಯೋಧ್ಯೆ ಧರ್ಮಧ್ವಜದಲ್ಲಿರುವ ಕೋವಿದಾರ ಮರ: ರಾಜವೃಕ್ಷಕ್ಕೂ, ಶ್ರೀರಾಮಚಂದ್ರನಿಗೂ ಅದೆಂಥ ನಂಟು? ತ್ರೇತಾಯುಗದಲ್ಲಿದ್ದ ದೈವಿಕ ಮರದ ವಿಶೇಷತೆ ಏನು?

SCROLL FOR NEXT