ಮೊಹಮದ್ ನಲಪಾಡ್ 
ರಾಜ್ಯ

ಚುನಾವಣಾ ಪ್ರಚಾರಕ್ಕೆ ಕಾರು ಪಡೆದು ಸ್ನೇಹಿತನಿಗೆ ಕಿರಿಕ್‌- ಮೊಹಮದ್ ನಲಪಾಡ್‌ ವಿರುದ್ಧ ದೂರು

ರಾಜ್ಯ ಯುವ ಕಾಂಗ್ರೆಸ್‌ ಅಧ್ಯಕ್ಷ ಮೊಹಮ್ಮದ್‌ ನಲಪಾಡ್ ವಿರುದ್ದ ಸ್ನೇಹಿತನೇ ದೂರು ದಾಖಲಿಸಿದ್ದಾರೆ. ಉದ್ಯಮಿ ನಜೀರ್‌ ದೂರು ನೀಡಿದ್ದು, ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಗಂಭೀರ ಸ್ವರೂಪವಲ್ಲದ ಪ್ರಕರಣ(NCR) ದಾಖಲಾಗಿದೆ.

ಬೆಂಗಳೂರು: ರಾಜ್ಯ ಯುವ ಕಾಂಗ್ರೆಸ್‌ ಅಧ್ಯಕ್ಷ ಮೊಹಮ್ಮದ್‌ ನಲಪಾಡ್ ವಿರುದ್ದ ಸ್ನೇಹಿತನೇ ದೂರು ದಾಖಲಿಸಿದ್ದಾರೆ. ಉದ್ಯಮಿ ನಜೀರ್‌ ದೂರು ನೀಡಿದ್ದು, ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಗಂಭೀರ ಸ್ವರೂಪವಲ್ಲದ ಪ್ರಕರಣ(NCR) ದಾಖಲಾಗಿದೆ.

ಯೂತ್ ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ನಲಪಾಡ್ ಸ್ನೇಹಿತ ನಜೀರ್‌ ಅವರಿಂದ ಫಾರ್ಚೂನರ್ ಕಾರು ಪಡೆದಿದ್ದರು. ಸ್ನೇಹಿತ ಎಂಬ ಕಾರಣಕ್ಕೆ ನಜೀರ್‌ ಕಾರು ನೀಡಿದ್ದರು. ಚುನಾವಣೆ ನಡೆದ ಬಳಿಕ ತನ್ನ ಕಾರನ್ನು ಮರಳಿ ಹಿಂದಿರುಗಿಸುವಂತೆ ನಜೀರ್‌ ಕೇಳಿದ್ದಾರೆ. ಆದರೆ ನಲಪಾಡ್‌ ಕಾರು ನೀಡುವ ಮನಸ್ಸನ್ನು ಮಾಡಿರಲಿಲ್ಲ. ಕಾರು ನೀಡದ ನಲಪಾಡ್‌ ಈಗ ಧಮ್ಕಿ ಹಾಕಿದ್ದಾರೆ.

ಈಗ ಕಾರು ಕೇಳಿದರೆ ಕೊಡಲ್ಲ. ಏನು ಬೇಕಾದರೂ ಮಾಡಿಕೋ ಹೋಗು. ನನ್ನ ಬಳಿ ಯೂತ್‌ ಹುಡುಗರು ಇದ್ದಾರೆ. ನಿನ್ನನ್ನು ನೋಡಿಕೊಳ್ಳುತ್ತಾರೆ. ಮತ್ತೆ ಕಾರು ಕೇಳಿದರೆ ನಿನ್ನನ್ನು ಸಾಯಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ. ಸದ್ಯ ನಜೀರ್ ದೂರಿನ ಆಧಾರದ ಮೇಲೆ‌ ಎನ್ ಸಿಆರ್ ದಾಖಲಿಸಿಕೊಂಡ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

Congress ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ

SIR ವಿರುದ್ಧ 'ಚುನಾವಣಾ ಆಯೋಗ ಚಲೋ' ಘೋಷಿಸಿದ ಪ್ರಕಾಶ್ ರಾಜ್; ಆಯುಕ್ತರ ರಾಜೀನಾಮೆಗೆ ಆಗ್ರಹ

ನಾಳೆ ಜಗತ್ತಿನಾದ್ಯಂತ ಯಶ್ ನಟನೆಯ 'Toxic' ಚಿತ್ರ ಬಿಡುಗಡೆ; ಇಂದು ದಿಢೀರ್ ಕೋರ್ಟ್ ಮೆಟ್ಟಿಲೇರಿದ ನಿರ್ಮಾಪಕ!

ಬೆಂಗಳೂರು: ಸಿಗ್ನಲ್‌ನಲ್ಲಿ ನಿಂತಿದ್ದ ಬೈಕ್‌ಗೆ ವೇಗವಾಗಿ ಬಂದ ಕಾರು ಡಿಕ್ಕಿ, ಹೇರ್ ಸ್ಟೈಲಿಸ್ಟ್ ಸಾವು; Video