ರಾಜ್ಯ

ರಾಜ್ಯದಲ್ಲಿ ಕ್ವಾರಿ, ಸ್ಟೋನ್ ಕ್ರಷರ್ ಬಂದ್: ಕಟ್ಟಡ ನಿರ್ಮಾಣ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ

Manjula VN

ಬೆಂಗಳೂರು: ಹುಣಸೋಡು ಸ್ಫೋಟ ಘಟನೆ ಬಳಿಕ ಶಿವಮೊಗ್ಗ ಮಾತ್ರವಲ್ಲದೆ ಇಡೀ ರಾಜ್ಯದಲ್ಲಿ ಕಲ್ಲು ಗಣಿಗಾರಿಕೆಗೆ ಬ್ರೇಕ್ ಬಿದ್ದಿದ್ದು,  ಅನಧಿಕೃತ ಕ್ರಷರ್, ಕ್ವಾರಿಗಳ ಜತೆಗೆ ಅಧಿಕೃತ ಕ್ವಾರಿಗಳೂ ಸ್ಥಗಿತಗೊಂಡಿರುವ ಪರಿಣಾಮ ಕಳೆದೆರಡು ವಾರದಿಂದ ಅಭಿವೃದ್ಧಿ ಕಾರ್ಯಗಳ ಮೇಲೆ ಕಾಮೋಡ ಕವಿಯುವಂತಾಗಿದೆ.
    
ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ಬಹುತೇಕ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಹೊರತುಪಡಿಸಿ ಅಭಿವೃದ್ಧಿ ಕಾಮಗಾರಿಗಳ ನಡೆಸಲು ಸರ್ಕಾರ ಮುಂದಾಗಿದೆ. ನೂರಾರು ಕೋಟಿ ವೆಚ್ಚದ ಹಲವು ಮಹತ್ವಾಕಾಂಕ್ಷೆಯ ಮೂಲಸೌಕರ್ಯ ಕಾಮಗಾರಿಗಳ ನಡೆಸಲು ಸರ್ಕಾರ ಚಿಂತನೆ ನಡೆಸಿದೆ. ಆದರೆ, ಕ್ವಾರಿಗಳು ಮತ್ತು ಕ್ರಷರ್‌ಗಳು ಬಂದ್ ಆಗಿರುವುದರಿಂದ, ನಿರ್ಮಾಣ ಉದ್ಯಮಕ್ಕೆ ನಿರ್ಮಾಣ ಸಾಮಗ್ರಿಗಳ ತೀವ್ರ ಕೊರತೆ ಎದುರಾಗಿದೆ.

ಕಳೆದ ನಾಲ್ಕು ದಿನಗಳಿಂದ ಮಾರುಕಟ್ಟೆಯಲ್ಲಿ ನಿರ್ಮಾಣ ಸಾಮಗ್ರಿಗಳನ್ನು ಪಡೆಯಲು ಗುತ್ತಿಗೆದಾರರು ಸಂಕಷ್ಟ ಎದುರಿಸುತ್ತಿದ್ದಾರೆ.

ಪ್ರತಿಭಟನೆಯ ನೇತೃತ್ವ ವಹಿಸಿರುವ ಕರ್ನಾಟಕ ಕ್ವಾರಿ ಮತ್ತು ಕ್ರಷರ್‌ಗಳ ಸಂಘದ ಅಧ್ಯಕ್ಷ ರವೀಂದ್ರ ಶೆಟ್ಟಿ ಮಾತನಾಡಿ, ಕರ್ನಾಟಕ ರಾಜ್ಯ ರಿಮೋಟ್ ಸೆನ್ಸಿಂಗ್ ಏಜೆನ್ಸಿ ಮೂಲಕ ಸಮೀಕ್ಷೆ ನಡೆಸಲಾಗಿದ್ದು, ಇದನ್ನು ನಾವು ವಿರೋಧಿಸುತ್ತಿದ್ದೇವೆ. ಸರ್ಕಾರ ಅಕ್ರಮ ಮತ್ತು ಹೊಂದಾಣಿಕೆಗಳ ಮೇಲೆ ಕೆಲಸ ಮಾಡಲು ನಮ್ಮನ್ನು ಒತ್ತಾಯಿಸುವ ಬದಲು ಸಂಪೂರ್ಣ ವ್ಯವಹಾರವನ್ನು ಕಾನೂನುಬದ್ಧಗೊಳಿಸಿದರೆ ಆದಾಯವನ್ನು ಹೆಚ್ಚಿಸಬಹುದಾಗಿದೆ ಎಂದು ಹೇಳಿದ್ದಾರೆ.

ನಾವು ದೆಹಲಿ ಚಲೋ ನಡೆಸಲು ಕೂಡ ಚಿಂತನೆ ನಡೆಸಿದ್ದೇವೆ. ಅಧಿವೇಶನ ಮುಗಿದ ಬಳಿಕ ಮುಷ್ಕರ ನಡೆಸಲು ಕೂಡ ಮುಂದಾಗಿದ್ದೇವೆಂದು ತಿಳಿಸಿದ್ದಾರೆ.

ಈ ಕುರಿತು ಗಣಿ ಸಚಿವ ಹಾಲಪ್ಪ ಆಚಾರ್ ಅವರನ್ನು ಪ್ರಶ್ನಿಸಿದಾಗ ಕ್ರಷಿಂಗ್ ಕೈಗಾರಿಕೆಯಲ್ಲಿ ಸಮಸ್ಯೆ ಇದ್ದು, ಬಹುತೇಕ ಬಂದ್ ಆಗಿದೆ. ಕೆಲ ವಿಷಯದ ಬಗ್ಗೆ ಬೇಡಿಕೆಗಳ ಪಟ್ಟಿಯನ್ನು ಇರಿಸಿದ್ದಾರೆ. ಈ ಬಗ್ಗೆ ಸೋಮವಾರ ಬೆಳಗಾವಿಯಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ. ಆದಷ್ಟು ಬೇಗ ಪರಿಹಾರ ಕಂಡುಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

SCROLL FOR NEXT