ಬೆಂಗಳೂರಿಗೆ ಆಗಮಿಸಿದ ಅಮಿತ್ ಶಾ ಸ್ವಾಗತಿಸಿದ ಮುಖ್ಯಮಂತ್ರಿ ಬೊಮ್ಮಾಯಿ 
ರಾಜ್ಯ

ಬೆಂಗಳೂರಿಗೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ: ಸ್ವಾಗತ ಕೋರಿದ ಸಿಎಂ ಬೊಮ್ಮಾಯಿ

ಎರಡು ದಿನಗಳ ಭೇಟಿಗಾಗಿ ಕೇಂದ್ರ ಗೃಹ ವ್ಯವಹಾರಗಳು ಮತ್ತು ಸಹಕಾರ ಸಚಿವ ಅಮಿತ್ ಶಾ ಗುರುವಾರ ರಾತ್ರಿ ಬೆಂಗಳೂರಿಗೆ ಆಗಮಿಸಿದರು.

ಬೆಂಗಳೂರು: ಎರಡು ದಿನಗಳ ಭೇಟಿಗಾಗಿ ಕೇಂದ್ರ ಗೃಹ ವ್ಯವಹಾರಗಳು ಮತ್ತು ಸಹಕಾರ ಸಚಿವ ಅಮಿತ್ ಶಾ ಗುರುವಾರ ರಾತ್ರಿ ಬೆಂಗಳೂರಿಗೆ ಆಗಮಿಸಿದರು.

ವಾಯುಪಡೆಯ ವಿಶೇಷ ವಿಮಾನದಲ್ಲಿ ಯಲಹಂಕ ವಾಯುನೆಲೆಯಲ್ಲಿ ಬಂದಿಳಿದ ಅಮಿತ್ ಶಾ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮತ್ತಿತರರು ಪುಷ್ಪ ಗುಚ್ಚ ನೀಡುವ ಮೂಲಕ ಮೂಲಕ ಬರಮಾಡಿಕೊಂಡರು.

ನಂತರ ರಸ್ತೆ ಮೂಲಕ ರೇಸ್ ಕೋರ್ಸ್ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ಗೆ ಅಮಿತ್ ಶಾ ತೆರಳಿದರು. ಅಲ್ಲಿ ವಾಸ್ತವ್ಯ ಹೂಡಿರುವ ಅಮಿತ್ ಶಾ, ನಾಳೆ ಮಂಡ್ಯದಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಅಲ್ಲದೇ ಮದ್ದೂರಿನ ಗೆಜ್ಜಲಗೆರೆಯಲ್ಲಿ ಮೆಗಾ ಡೇರಿಯನ್ನು ಉದ್ಘಾಟಿಸಲಿದ್ದಾರೆ. ತದನಂತರ ಬೆಂಗಳೂರಿನಲ್ಲಿ ನಡೆಯಲಿರುವ ಸಹಕಾರ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Sonam Wangchuk Arrested: NSA ಅಡಿ ಕೇಸ್; ಜಾಮೀನು ಸಿಗುವ ಸಾಧ್ಯತೆಯೇ ಇಲ್ಲ!

ಜಾತಿ ಗಣತಿ: ಇಲ್ಲಿಯವರೆಗೆ ಕೇವಲ ಶೇ.2 ರಷ್ಟು ಪ್ರಗತಿ; ಪ್ರತಿದಿನ ಶೇ.10 ರಷ್ಟು ಸಮೀಕ್ಷೆಗೆ ಸಿಎಂ ಸೂಚನೆ; ಗಡುವಿನೊಳಗೆ ಪೂರ್ಣ!

Asia Cup 2025: Indian Army ಕುರಿತು ವ್ಯಂಗ್ಯ, ಪಾಕ್ ಕ್ರಿಕೆಟಿಗ Haris Rauf ಗೆ ಬರೆ ಹಾಕಿದ ICC, ದಂಡ, ಫರ್ಹಾನ್ ಗೂ ಎಚ್ಚರಿಕೆ!

'I Love Muhammed' row: ಬರೇಲಿಯ ಮಸೀದಿ ಹೊರಗೆ ಸ್ಥಳೀಯ ಮುಸ್ಲಿಮರು, ಪೊಲೀಸರ ನಡುವೆ ಭಾರಿ ಘರ್ಷಣೆ! ಕಾರಣವೇನು?

Cricket: 'ಅವರ ''ಗರ್ವ'' ಮುರಿಯಿರಿ'..: Asia Cup Final ನಲ್ಲಿ ಭಾರತ ಮಣಿಸಲು Shoaib Akhtar ಮಾಸ್ಟರ್ ಪ್ಲಾನ್!

SCROLL FOR NEXT