ಎನ್ ಎಚ್ ಆರ್ ಸಿ 
ರಾಜ್ಯ

ಕನಕಪುರ ಆರ್ ಟಿ ಐ ಕಾರ್ಯಕರ್ತನ ಹತ್ಯೆ ಪ್ರಕರಣ: ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು

ಡಿಸೆಂಬರ್ 22 ರಂದು ನಡೆದ ಆರ್‌ಟಿಐ ಕಾರ್ಯಕರ್ತ ಮೂರ್ತಿ ಅವರ ಹತ್ಯೆಯು ಕೌಟುಂಬಿಕ ಕಲಹದ ಪರಿಣಾಮವಾಗಿ ಪೊಲೀಸರು ಅದನ್ನು ತಳ್ಳಿಹಾಕಲು ಪ್ರಯತ್ನಿಸಿದ್ದರೂ ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ.

ಬೆಂಗಳೂರು: ಡಿಸೆಂಬರ್ 22 ರಂದು ನಡೆದ ಆರ್‌ಟಿಐ ಕಾರ್ಯಕರ್ತ ಮೂರ್ತಿ ಅವರ ಹತ್ಯೆಯು ಕೌಟುಂಬಿಕ ಕಲಹದ ಪರಿಣಾಮವಾಗಿ ಪೊಲೀಸರು ಅದನ್ನು ತಳ್ಳಿಹಾಕಲು ಪ್ರಯತ್ನಿಸಿದ್ದರೂ ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ.

ಮೂರ್ತಿ ಅವರ ಕುಟುಂಬ ಸದಸ್ಯೆ ಮತ್ತು ವಕೀಲೆ ಶಿಲ್ಪಾ ರಾಣಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಿದ್ದು, ಅವರ ಆರ್‌ಟಿಐ ಚಟುವಟಿಕೆಯಿಂದ ಕೊಲೆ ನಡೆದಿದೆಯೇ ಹೊರತು ಕೌಟುಂಬಿಕ ಕಲಹವಲ್ಲ ಎಂದು ಆರೋಪಿಸಿದ್ದಾರೆ. ಸಾತನೂರಿನ ಸ್ಥಳೀಯ ಪಂಚಾಯಿತಿಯ ಹಗರಣಗಳನ್ನು ಬಯಲಿಗೆಳೆಯುವುದಾಗಿ ಮೂರ್ತಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.

ತಮ್ಮ ಹೇಳಿಕೆಗೆ ಮತ್ತಷ್ಠು ಪುಷ್ಟಿ ನೀಡುವ ಉದ್ದೇಶದಿಂದ ಶಿಲ್ಪಾರಾಣಿ ಎರಡು ಎಫ್ ಐ ಆರ್ ಪ್ರತಿಗಳನ್ನು  ಸಲ್ಲಿಸಿದ್ದಾರೆ.2022 ರ ಜುಲೈ ತಿಂಗಳಲ್ಲಿ ಈಗ ಮೂರ್ತಿ ಅವರನ್ನು ಹತ್ಯೆ ಮಾಡಿರುವ ವ್ಯಕ್ತಿಗಳಿಂದ ಹಲ್ಲೆ ನಡೆದಿದ್ದ ಎಫ್ ಐಆರ್ ಅನ್ನು ಲಗತ್ತಿಸಿದ್ದಾರೆ.

ಅಕ್ಟೋಬರ್ ತಿಂಗಳಿನಲ್ಲಿ ಇದೇ ಗುಂಪಿನಿಂದ ಮೂರ್ತಿ ಅವರ ಮನೆ ಮೇಲೆ ಬಿಯ ಬಾಟಲ್ ಮತ್ತಿತರ ಹಾನಿಕಾರಕ ವಸ್ತುಗಳನ್ನು ಎಸೆಯಲಾಗಿತ್ತು. ಈ ಸಂಬಂಧ ದಾಖಸಲಾಗಿದ್ದ ಎರಡನೇ ಎಫ್ ಐ ಆರ್ ಕಾಪಿಯನ್ನು ಸಹ ಶಿಲ್ಪಾರಾಣಿ ಸಲ್ಲಿಸಿದ್ದಾರೆ.

ತಮ್ಮ ಆರ್‌ಟಿಐ ಚಟುವಟಿಕೆಯನ್ನು ನಿಲ್ಲಿಸುವಂತೆ ಮೂರ್ತಿ ಅವರಿಗೆ ಬೆದರಿಕೆ ಹಾಕಲಾಗಿತ್ತು, ಆದರೆ ಅವರ ಬೆದರಿಕೆಗೆ ಮೂರ್ತಿ ಬಗ್ಗದ ಕಾರಣ  ಕೊಲೆ ಮಾಡಿದ್ದಾರೆ ಎಂದು ವಕೀಲೆ ಆರೋಪಿಸಿದ್ದಾರೆ.

ಕಾಮನ್‌ವೆಲ್ತ್ ಹ್ಯೂಮನ್ ರೈಟ್ಸ್ ಇನಿಶಿಯೇಟಿವ್ ಡೈರೆಕ್ಟರ್ ವೆಂಕಟೇಶ್ ನಾಯಕ್ ಮಾತನಾಡಿ, ಕೌಟುಂಬಿಕ ಕಲಹಗಳೆಂಬಂತೆ ಆರ್‌ಟಿಐ ಕಾರ್ಯಕರ್ತರ ಕೊಲೆಗಳು ಮಾಮೂಲಿಯಾಗಿದ್ದು, ಮಹಾರಾಷ್ಟ್ರದಲ್ಲಿ ಇಂತಹ ಹಲವು ನಿದರ್ಶನಗಳಿವೆ ಎಂದಿದ್ದಾರೆ. ಮೂರ್ತಿ ಅವರ ಪ್ರಕರಣವನ್ನು ಸಾತನೂರು ಪೊಲೀಸರು ಬೇರೆಯೇ ದೃಷ್ಟಿಕೋನದಲ್ಲಿ ತನಿಖೆ ನಡೆಸಬೇಕು ಎಂದು ಹೇಳಿದ್ದಾರೆ.

ರಾಷ್ಟ್ರದಾದ್ಯಂತ 104 ಆರ್‌ಟಿಐ ಕಾರ್ಯಕರ್ತರ ಹತ್ಯೆಗಳು ನಡೆದಿದ್ದು, ಅದರಲ್ಲಿ 11 ಹತ್ಯೆಗಳು ಕರ್ನಾಟಕದಲ್ಲಿ ನಡೆದಿವೆ ಎಂದು ಅಂಕಿಅಂಶಗಳು ಬಹಿರಂಗಪಡಿಸುತ್ತವೆ. ರಾಷ್ಟ್ರೀಯ ಮಟ್ಟದಲ್ಲಿ ಸುಮಾರು 184 ಆರ್‌ಟಿಐ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿದ್ದು, ಕರ್ನಾಟಕದಲ್ಲಿ 18 ಪ್ರಕರಣಗಳು ದಾಖಲಾಗಿವೆ. ಕರ್ನಾಟಕದಲ್ಲಿ ಇದುವರೆಗೆ ಯಾವುದೇ ಶಿಕ್ಷೆಯಾಗಿಲ್ಲ.

ಡಿಸೆಂಬರ್ 22 ರಂದು ಕೊಲೆ ನಡೆದಿದ್ದರೂ, ಪೊಲೀಸರು ಮರುದಿನ ಮಾತ್ರ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಶಿಲ್ಪಾರಾಣಿ ತಿಳಿಸಿದ್ದಾರೆ. ಮೂರ್ತಿ ವಿರುದ್ಧದ ಹಿಂದಿನ ಎರಡು ಹಲ್ಲೆ ಪ್ರಕರಣಗಳಲ್ಲಿ ಆರೋಪಿಗಳು ಪ್ರತಿಯಾಗಿ ಮೂರ್ತಿ ವಿರುದ್ಧ ಆರೋಪ ಮಾಡಿದ್ದಕ್ಕೆ ಪೊಲೀಸರು ಕೌಂಟರ್ ಕೇಸ್  ದಾಖಲಿಸಿದ್ದಾರೆ ಎಂದೂ ಅವರು ಆರೋಪಿಸಿದ್ದಾರೆ.

ಜುಲೈ 2022 ರ ಪ್ರಕರಣದಲ್ಲಿ, ಪೊಲೀಸರು ಐದು ತಿಂಗಳಾದರೂ ಚಾರ್ಜ್‌ಶೀಟ್ ಇನ್ನೂ ಸಲ್ಲಿಸಿಲ್ಲ, ಆದರೆ ಮೂರು ತಿಂಗಳಲ್ಲಿ ಕಡ್ಡಾಯವಾಗಿ ಮಾಡಬೇಕು ಎಂಬ ನಿಯಮವಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT