ಸಂಗ್ರಹ ಚಿತ್ರ 
ರಾಜ್ಯ

ಬೆಂಗಳೂರು: ನಗರದ ಸರ್ಕಾರಿ ಕಚೇರಿಗಳಿಗೆ ಸಿಎನ್‌ಜಿ ಒದಗಿಸಲು ಕೆಸಿಡಿಸಿ ಚಿಂತನೆ!

ಕರ್ನಾಟಕ ಕಾಂಪೋಸ್ಟ್ ಡೆವಲಪ್‌ಮೆಂಟ್ ಕಾರ್ಪೊರೇಷನ್ (ಕೆಸಿಡಿಸಿ) ಬೆಂಗಳೂರಿನಲ್ಲಿರುವ ಎಲ್ಲಾ ಸರ್ಕಾರಿ ಕಚೇರಿಗಳಿಗೆ ಕೂಡ್ಲು ಮತ್ತು ಚಿಕ್ಕನಾಗಮಂಗಲ ಮತ್ತು ಇತರ ಸ್ಥಳಗಳಲ್ಲಿನ ಸ್ಥಾವರಗಳಿಂದ ಸಾಂದ್ರೀಕೃತ ನೈಸರ್ಗಿಕ ಅನಿಲ (ಸಿಎನ್‌ಜಿ) ಪೂರೈಸಲು ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಬೆಂಗಳೂರು: ಕರ್ನಾಟಕ ಕಾಂಪೋಸ್ಟ್ ಡೆವಲಪ್‌ಮೆಂಟ್ ಕಾರ್ಪೊರೇಷನ್ (ಕೆಸಿಡಿಸಿ) ಬೆಂಗಳೂರಿನಲ್ಲಿರುವ ಎಲ್ಲಾ ಸರ್ಕಾರಿ ಕಚೇರಿಗಳಿಗೆ ಕೂಡ್ಲು ಮತ್ತು ಚಿಕ್ಕನಾಗಮಂಗಲ ಮತ್ತು ಇತರ ಸ್ಥಳಗಳಲ್ಲಿನ ಸ್ಥಾವರಗಳಿಂದ ಸಾಂದ್ರೀಕೃತ ನೈಸರ್ಗಿಕ ಅನಿಲ (ಸಿಎನ್‌ಜಿ) ಪೂರೈಸಲು ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಕೆಸಿಡಿಸಿ ಅಧ್ಯಕ್ಷ ಎಸ್.ಮಹದೇವಯ್ಯ ಮಾತನಾಡಿ, ಕೆಸಿಡಿಸಿಯು ಕೂಡ್ಲುವಿನಲ್ಲಿ 500 ಟನ್ ಸಾಮರ್ಥ್ಯದ ಸಿಎನ್‌ಜಿ ಘಟಕ ಮತ್ತು ಚಿಕ್ಕನಾಗಮಂಗಲದಲ್ಲಿ 300 ಟನ್‌ನ ಮತ್ತೊಂದು ಘಟಕವನ್ನು ಪ್ರಾರಂಭಿಸುತ್ತಿದೆ. ಈ ಘಟಕಗಳಿಂದ ಬೆಂಗಳೂರಿನ ಸರ್ಕಾರಿ ಕಚೇರಿಗಳಿಗೆ ಸಿಎನ್'ಜಿ ಪೂರೈಕೆ ಮಾಡಲು ಚಿಂತನೆ ನಡೆಸಲಾಗಿದ್ದು, ಈ ವಿಚಾರ ಇದೀಗ ತಾಂತ್ರಿಕ ಮಾರ್ಗದರ್ಶನ ಸಮಿತಿಯ ಮುಂದಿದೆ. ಶೀಘ್ರದಲ್ಲೇ ಅವರು ಈ ಬಗ್ಗೆ ನಿರ್ಧಾರ ಪ್ರಕಟಿಸಲಿದ್ದಾರೆಂದು ಹೇಳಿದ್ದಾರೆ.

ತಾಂತ್ರಿಕ ಮಾರ್ಗದರ್ಶನ ಸಮಿತಿ ಒಪ್ಪಿಗೆ ನೀಡಿದ ಕೂಡಲೇ ಟೆಂಡರ್ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗುತ್ತದೆ. 2023ರ ಅಂತ್ಯಕ್ಕೆ ಸಿಎನ್‌ಜಿ ಘಟಕಗಳು ಕಾರ್ಯನಿರ್ವಹಿಸಲಿವೆ. ಮೊದಲ ಹಂತದಲ್ಲಿ, ಬೆಂಗಳೂರಿನಲ್ಲಿರುವ ಎಲ್ಲಾ ಸರ್ಕಾರಿ ಕಚೇರಿಗಳು ಮತ್ತು ಸರ್ಕಾರಿ ವಾಹನಗಳನ್ನು ಸಿಎನ್‌ಜಿ ಘಟಕಗಳಿಂದ ಇಂಧನ ಮತ್ತು ವಿದ್ಯುತ್ ಅನ್ನು ಬಳಸುವಂತೆ ಉತ್ತೇಜನ ನೀಡುತ್ತೇವೆ. ಇದು ಬೆಸ್ಕಾಂ ಸರಬರಾಜು ಮಾಡುವ ಪೆಟ್ರೋಲ್, ಡೀಸೆಲ್ ಮತ್ತು ವಿದ್ಯುತ್ ಬಳಕೆಯನ್ನು ಕಡಿತಗೊಳಿಸುತ್ತದೆ ಎಂದು ತಿಳಿಸಿದ್ದಾರೆ.

ಪ್ರಸ್ತುತ ಕೂಡ್ಲು, ಚಿಕ್ಕನಾಗಮಂಗಲ, ದೊಡ್ಡಬಿದರಕಲ್ಲು, ಲಿಂಗದೀರನಹಳ್ಳಿ, ಸುಬ್ಬರಾಯ ಪಾಳ್ಯದಲ್ಲಿ ಕಾಂಪೋಸ್ಟ್ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ವಾರ್ಷಿಕ 10 ಸಾವಿರ ಟನ್ ಸಾವಯವ ಗೊಬ್ಬರ ಉತ್ಪಾದಿಸುತ್ತಿದೆ. 10 ಜಿಲ್ಲೆಗಳ ರೈತರಿಗೆ ಪ್ರತಿ ಟನ್‌ಗೆ 200 ರೂ.ನಂತೆ ಸಬ್ಸಿಡಿ ದರದಲ್ಲಿ ಪೂರೈಸಲಾಗುತ್ತಿದೆ.

“ಕೆಸಿಡಿಸಿ ಯಾವುದೇ ಲಾಭದ ಆಧಾರದ ಮೇಲೆ ಕೆಲಸ ಮಾಡುತ್ತಿಲ್ಲ. ಇದರಿಂದ ಗೊಬ್ಬರ ಖರೀದಿಸಿದರೆ ರೈತರು ಸ್ವಂತ ಸಾರಿಗೆ ವ್ಯವಸ್ಥೆ ಮಾಡಿಕೊಳ್ಳಬಹುದು ಎಂದು ಮಹದೇವಯ್ಯ ಹೇಳಿದ್ದಾರೆ.

ಬಿಬಿಎಂಪಿ ಅಧಿಕಾರಿಗಳ ಮಾತನಾಡಿ, ತಾಂತ್ರಿಕ ಸಮಿತಿ ಮಾರ್ಗಸೂಚಿಗಳನ್ನು ಹೊರಡಿಸಿದ ನಂತರ ದೊಡ್ಡಬಿದರಕಲ್ಲು, ಲಿಂಡೀರ್ನಹಳ್ಳಿ, ಸುಬ್ಬರಾಯ ಪಾಳ್ಯ ಮತ್ತು ಕನ್ನಹಳ್ಳಿಯಲ್ಲಿರುವ ಸ್ಥಾವರಗಳನ್ನು ಸಿಎನ್‌ಜಿ ಘಟಕಗಳನ್ನು ನಡೆಸಲು ಮೇಲ್ದರ್ಜೆಗೇರಿಸಲಾಗುವುದು, ಇದು ಇನ್ನ ಕೆಲವೇ ದಿನಗಳಲ್ಲಿ ಬರುವ ನಿರೀಕ್ಷೆಯಿದೆ ಎಂದು ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

ಅಯೋಧ್ಯೆ ಧರ್ಮಧ್ವಜದಲ್ಲಿರುವ ಕೋವಿದಾರ ಮರ: ರಾಜವೃಕ್ಷಕ್ಕೂ, ಶ್ರೀರಾಮಚಂದ್ರನಿಗೂ ಅದೆಂಥ ನಂಟು? ತ್ರೇತಾಯುಗದಲ್ಲಿದ್ದ ದೈವಿಕ ಮರದ ವಿಶೇಷತೆ ಏನು?

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

SCROLL FOR NEXT