ರಾಜ್ಯ

ರಾಷ್ಟ್ರಪತಿ ಚುನಾವಣೆ: ವಿಪಕ್ಷ ಅಭ್ಯರ್ಥಿ ಯಶವಂತ್ ಸಿನ್ಹಾ ಬೆಂಗಳೂರಿಗೆ ಆಗಮನ, ಕಾಂಗ್ರೆಸ್ ಮುಖಂಡರಿಂದ ಸ್ವಾಗತ

Nagaraja AB

ಬೆಂಗಳೂರು: ರಾಷ್ಟ್ರಪತಿ ಚುನಾವಣೆಯ ವಿಪಕ್ಷ ಅಭ್ಯರ್ಥಿ ಯಶವಂತ್ ಸಿನ್ಹಾ ಶನಿವಾರ ಸಂಜೆ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಿದರು. 84 ವರ್ಷದ ಮಾಜಿ ಕೇಂದ್ರ ಸಚಿವರನ್ನು ವಿಧಾನಪರಿಷತ್ ಮುಖ್ಯ ವಿಪ್ ಪ್ರಕಾಶ್ ರಾಥೋಡ್, ಕೆಪಿಸಿಸಿ ಉಪಾಧ್ಯಕ್ಷ ಅಶೋಕ್ ಪಟ್ಠಣ್ ಮತ್ತಿತರರು ಹೆಚ್ ಎಎಲ್ ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಬರಮಾಡಿಕೊಂಡರು.

ಭಾನುವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಯಶವಂತ್ ಸಿನ್ಹಾ ಪಾಲ್ಗೊಳ್ಳಲಿದ್ದು, ಶಾಸಕರು, ಸಂಸದರಿಂದ ಮತ ಯಾಚಿಸಲಿದ್ದಾರೆ. ನಗರದ ಹೋಟೆಲ್ ನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯಲಿರುವ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಡಿಕೆ ಶಿವಕುಮಾರ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

ಇದನ್ನೂ ಓದಿ: ನಮ್ಮ ಸರ್ಕಾರ ಬೀಳಿಸಿ ನೋಡಿ, ನಿಮ್ಮನ್ನೇ ಅಧಿಕಾರದಿಂದ ಕೆಳಗಿಳಿಸುತ್ತೇವೆ: ಪ್ರಧಾನಿ ಮೋದಿಗೆ ಕೆಸಿಆರ್ ಸವಾಲು
ಭಾನುವಾರ ಸಂಜೆ 4 ಗಂಟೆಗೆ ದೆಹಲಿಗೆ ಯಶವಂತ ಸಿನ್ಹಾ ತೆರಳಲಿದ್ದಾರೆ. ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಅವರನ್ನು ಯಶವಂತ್ ಸಿನ್ಹಾ ಭೇಟಿಯಾಗಲಿದ್ದಾರೆಯೇ ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. 

ತೆಲಂಗಾಣದಲ್ಲಿ ಅದ್ಬುತ ಸಂವಾದ ನಂತರ ಬೆಂಗಳೂರಿಗೆ ಆಗಮಿಸಿದ್ದೇನೆ. ಭಾನುವಾರ ಕಾಂಗ್ರೆಸ್ ಪಕ್ಷದ ಶಾಸಕರೊಂದಿಗೆ ಸಮಯ ಕಳೆಯಲಿದ್ದೇನೆ. ಪ್ರಜಾಪ್ರಭುತ್ವವನ್ನು ರಕ್ಷಿಸುವ ಮಿಷನ್ ಮುಂದುವರೆಯಲಿದೆ ಎಂದು ಯಶವಂತ್ ಸಿನ್ಹಾ ಟ್ವೀಟ್ ಮಾಡಿದ್ದಾರೆ.

SCROLL FOR NEXT