ರಾಜ್ಯ

ಮೆದುಳಿನ ರಕ್ತಸ್ರಾವ: ಜೇಮ್ಸ್ ಚಿತ್ರದ ನಿರ್ಮಾಪಕ ಕಿಶೋರ್ ಪತ್ತಿಕೊಂಡಗೆ ಶಸ್ತ್ರ ಚಿಕಿತ್ಸೆ

Nagaraja AB

ಬೆಂಗಳೂರು: ಕನ್ನಡ ಚಲನಚಿತ್ರ ನಿರ್ಮಾಪಕ ಕಿಶೋರ್ ಪತ್ತಿಕೊಂಡ (40) ಸೋಮವಾರ ತಡರಾತ್ರಿ ಮೆದುಳಿನ ರಕ್ತಸ್ರಾವದಿಂದ ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಮನೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದ ಅವರನ್ನು ಕೂಡಲೇ ಅಪೋಲೋ ಆಸ್ಪತ್ರೆಯ ತುರ್ತು ವಿಭಾಗಕ್ಕೆ ರವಾನಿಸಿ ಶಸ್ತ್ರ  ಚಿಕಿತ್ಸೆ ಮಾಡಿಸಲಾಗಿದೆ. 

ಪ್ರಾಥಮಿಕ ತನಿಖೆಯಲ್ಲಿ ಅವರ ಮೆದುಳಿನ ಎಡಭಾಗದಲ್ಲಿ ದೊಡ್ಡ ಗಾಯವಾಗಿದೆ ಎಂದು ತಿಳಿದುಬಂದಿದೆ. ಅದನ್ನು ತೆಗೆಯಲು ಅದೇ ರಾತ್ರಿ ಶಸ್ತ್ರಚಿಕಿತ್ಸೆಗೆ ಒಳಗಾದರು. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಮಂಗಳವಾರ ಅವರನ್ನು ಐಸಿಯುಗೆ ಸ್ಥಳಾಂತರಿಸಲಾಗಿದೆ. ಅವರು  ನಿಕಟ ನಿಗಾವಣೆಯಲ್ಲಿದ್ಜು,  ವೆಂಟಿಲೇಟರ್ ನೆರವಿನಲ್ಲಿದ್ದಾರೆ. ಅವರ ದೇಹದ ಪ್ರಮುಖ ಅಂಗಗಳು ಸ್ಥಿರವಾಗಿದ್ದು, ನರಗ ಸ್ಥಿತಿಯಲ್ಲಿ ಸುಧಾರಣೆಯಾಗಿದೆ.

ಅಧಿಕ ರಕ್ತದೊತ್ತಡದಿಂದ ಕಿಶೋರ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದಿದ್ದಾಗಿ  ಚಲನಚಿತ್ರ ನಿರ್ದೇಶಕ ಚೇತನ್ ಕುಮಾರ್  ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು. ಇಡೀ ದಿನ ಅವರು ಆಫೀಸ್ ಗೆ ಬರಲಿಲ್ಲ.ಆದ್ದರಿಂದ ಆತಂಕಗೊಂಡು ಹೋಗಿ ಪರಿಶೀಲಿಸಿದಾಗ ಪ್ರಜ್ಞಾಹೀನರಾಗಿ ಬಿದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಕಿಶೋರ್ ಅವರಿಗೆ ಚಿಕಿತ್ಸೆ ನೀಡಲಾಗಿದ್ದು, ಶೀಘ್ರದಲ್ಲೇ ಡಿಸ್ಚಾರ್ಜ್ ಆಗುವ ಸಾಧ್ಯತೆ ಇದೆ ಎಂದರು.

 ಪುನೀತ್ ರಾಜ್ ಕುಮಾರ್ ಅವರ ಕೊನೆಯ ಚಿತ್ರ ಜೇಮ್ಸ್ ಚಿತ್ರವನ್ನು ನಿರ್ಮಿಸಿದ್ದ ಕಿಶೋರ್ ಪತ್ತಿಕೊಂಡ, ನಟ ಉಪೇಂದ್ರ ರಾವ್ ಅವರೊಂದಿಗೆ ಒಂದು ಪ್ರಾಜೆಕ್ಟ್‌  ಮಾಡುತ್ತಿದ್ದಾರೆ ಮತ್ತು ಧೀರೇನ್ ರಾಮ್‌ಕುಮಾರ್ ಅವರೊಂದಿಗೆ ಇನ್ನೊಂದು ಚಿತ್ರ ಮಾಡುವ ಚಿಂತನೆ ನಡೆಸಿದ್ದಾರೆ.
 

SCROLL FOR NEXT