ರಾಜ್ಯ

ಬೆಂಗಳೂರು: 75 ಲಕ್ಷ ರೂಪಾಯಿ ಆಸೆಗಾಗಿ 35 ಲಕ್ಷ ರೂಪಾಯಿ ಕಳೆದುಕೊಂಡ ಟೆಕ್ಕಿ!

Srinivas Rao BV

ಬೆಂಗಳೂರು: ಬೆಂಗಳೂರಿನಲ್ಲಿರುವ ಕೇರಳದ 36 ವರ್ಷದ ಮಹಿಳಾ ಸಾಫ್ಟ್ ವೇರ್ ಇಂಜಿನಿಯರ್ 75 ಲಕ್ಷ ರೂಪಾಯಿ ಆಸೆಗಾಗಿ 35 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.

ಮುಖ್ಯ ಆರೋಪಿ ಸಂತ್ರಸ್ತೆಯನ್ನು ಸಾಮಾಜಿಕ ಜಾಲತಾಣದ ಮೂಲಕ ಟ್ರ್ಯಾಪ್ ಮಾಡಿದ್ದು, ಕರೆನ್ಸಿ ಪಾರ್ಸಲ್ ನ ಫೋಟೊ ಕಳಿಸಿದ್ದು ನಂಬಿಸಿದ್ದಾನೆ. ಆದರೆ ಇದರ ಹಿಂದಿದ್ದ ವಂಚನೆಯ ಜಾಲವನ್ನು ಅರಿಯದೇ ವಂಚಕನಿಗೆ 35 ಲಕ್ಷ ರೂಪಾಯಿ ನೀಡಲು ಸಂಬಂಧಿಕರು ಸ್ನೇಹಿತರಿಂದ ಹಣ ಸಂಗ್ರಹಿಸಿಕೊಟ್ಟು ಮಾಹಿಳಾ ಟೆಕ್ಕಿ ಖೆಡ್ಡಾಗೆ ಬಿದ್ದಿದ್ದಾರೆ. 

2 ವರ್ಷಗಳ ಹಿಂದೆ ಆಕೆಗೆ ವಂಚನೆಯಾಗಿದ್ದರೂ ಟೆಕ್ಕಿ ನಗರ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿರುವುದು ಕಳೆದ ತಿಂಗಳ ಹಿಂದೆಯಷ್ಟೆ. ಪೊಲೀಸರು ವಂಚಕರ ಜಾಲವನ್ನು ನವದೆಹಲಿಯ ಉತ್ತಮ್ ನಗರದಲ್ಲಿ ಪತ್ತೆ ಮಾಡಿದ್ದು, ಈ ಪ್ರದೇಶದಲ್ಲಿ ಆಫ್ರಿಕಾ ದೇಶಳಿಂದ ಬಂದಿರುವ ವಂಚಕರು ಹೆಚ್ಚಾಗಿ ವಾಸಿಸುತ್ತಾರೆ. ತನಿಖಾಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದಂತೆ 2 ಖಾತೆಗಳನ್ನು ವಶಕ್ಕೆ ಪಡೆದಿದ್ದು ಈ ಖಾತೆಗಳಲ್ಲಿ 4.5 ಲಕ್ಷ ರೂಪಾಯಿಗಳಷ್ಟು ಹಣ ಇತ್ತು ಎಂದು ತಿಳಿಸಿದ್ದಾರೆ. 

ಸಂತ್ರಸ್ತೆ ಪೊಲೀಸರಿಗೆ ಮಾಹಿತಿ ನೀಡದೇ, ಸಾಮಾಜಿಕ ಜಾಲತಾಣಾದಲ್ಲಿ ವಿವರಗಳನ್ನು ಹಂಚಿಕೊಂಡಿದ್ದರು. ಈಗ ಪೊಲೀಸರಿಗೆ ದೆಹಲಿಯಲ್ಲಿ ಖಾತೆಗಳ ವಿವರಗಳನ್ನು ಹೊರತುಪಡಿಸಿದರೆ ಯಾವುದೇ ರೀತಿಯ ಸುಳಿವೂ ಇಲ್ಲ. ಕರೆ ವಿವರಗಳು ಐಪಿ ಲಾಗ್ ಗಳೆಲ್ಲವೂ ಗರಿಷ್ಠ ಒಂದು ವರ್ಷದ ಅವಧಿಗೆ ಮಾತ್ರ ಲಭ್ಯವಿರಲಿದೆ. 2 ವರ್ಷ ಹಿಂದೆ ವಂಚನೆ ನಡೆದಿರುವ ಹಿನ್ನೆಲೆಯಲ್ಲಿ ಪೊಲೀಸರು ಯಾವುದೇ ರೀತಿಯ ಎಲೆಕ್ಟ್ರಾನಿಕ್ ಸಾಕ್ಷ್ಯಗಳನ್ನು ಪಡೆಯುವುದಕ್ಕೆ ಸಾಧ್ಯವಾಗುತ್ತಿಲ್ಲ. ದೆಹಲಿಯಲ್ಲಿ ಆರೋಪಿಗಳ ಬಂಧನವಾಗುವುದನ್ನು ಇಲ್ಲಿನ ಪೊಲೀಸರು ಎದುರುನೋಡುತ್ತಿದ್ದಾರೆ. 

ಸಂತ್ರಸ್ತೆ ಬೆಂಗಳೂರಿನ ಹೆಚ್ಎಎಲ್ ಬಳಿ ವಾಸವಿದ್ದು, 11 ಮಂದಿ ಆರೋಪಿಗಳ ಪೈಕಿ ಐವರು ಮಹಿಳೆಯರಾಗಿದ್ದು, ಸಂತ್ರಸ್ತೆಯೊಂದಿಗೆ ಮಾತನಾಡಬೇಕಾದರೆ ನಕಲಿ ಹೆಸರು ಬಳಸಿದ್ದರು ಎಂದು ತಿಳಿದುಬಂದಿದೆ.

SCROLL FOR NEXT