ರಾಜ್ಯ

ಮೈಸೂರು: 'ಜತೆಗಿರುವನು ಚಂದಿರ' ನಾಟಕ ಪ್ರದರ್ಶನಕ್ಕೆ ಹಿಂದೂ ಕಾರ್ಯಕರ್ತರ ಅಡ್ಡಿ!

Shilpa D

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯಬೇಕಿದ್ದ ಜತೆಗಿರುವನು ಚಂದಿರ ಎಂಬ ನಾಟಕ ಪ್ರದರ್ಶನಕ್ಕೆ ಬಜರಂಗದಳ ಕಾರ್ಯಕರ್ತರು ಅಡ್ಡಿ ಪಡಿಸಿದ್ದಾರೆ.

ಇತಿಹಾಸ ಪುನರಾವರ್ತನೆಯಾಗುತ್ತಿರುವಂತೆ ತೋರುತ್ತಿದೆ. ಆಗಿನ ಪ್ರಧಾನಿ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರವು ಘೋಷಿಸಿದ ತುರ್ತು ಪರಿಸ್ಥಿತಿಯನ್ನು ಎಡ ಪಕ್ಷಗಳು ಮತ್ತು ಆರ್ ಎಸ್ ಎಸ್ ಸೇರಿದಂತೆ ಅನೇಕರು ಖಂಡಿಸಿದರು. ಆದರೆ ಈಗ ಆರೆಸ್ಸೆಸ್ ಸ್ನೇಹಿತರು ಅಧಿಕಾರದಲ್ಲಿದ್ದಾರೆ. ನಿಜವಾಗಿ ಹೇಳಬೇಕೆಂದರೆ ಅವರಿಗೆ ಕಾಂಗ್ರೆಸ್‌ಗಿಂತ ಹೆಚ್ಚಿನ ಶಕ್ತಿಯಿದೆ. ಹೀಗಿರುವಾಗ ಕಾಂಗ್ರೆಸ್ ತನ್ನ ಅಧಿಕಾರಾವಧಿಯಲ್ಲಿ ಮಾಡಿದ್ದಕ್ಕಿಂತ ಕೆಟ್ಟದಾಗಿ ನಡೆದುಕೊಳ್ಳುವುದು ಸರಿಯೇ? ಎಂದು ರಂಗಾಯಣ ಪ್ರಸನ್ನ ಖಂಡಿಸಿದ್ದಾರೆ.

ಭದ್ರಾವತಿಯಲ್ಲಿ ಬಟ್ಟೆ ಅಂಗಡಿಯನ್ನು ಧ್ವಂಸಗೊಳಿಸಿದ ಮತ್ತು ಇಬ್ಬರು ಮಾರಾಟಗಾರರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಆರು ಬಜರಂಗದಳ ಕಾರ್ಯಕರ್ತರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಭಾನುವಾರ ಸಂಜೆ 5.48ರ ಸುಮಾರಿಗೆ ರಂಗಪ್ಪ ಸರ್ಕಲ್‌ನಲ್ಲಿರುವ ಅಂಗಡಿಗೆ ನುಗ್ಗಿದ ಆರೋಪಿಗಳು ಗ್ರಾಹಕರಿಗೆ ಬಟ್ಟೆ ಮಾರುತ್ತಿದ್ದಾಗ ಸೇಲ್ಸ್‌ಮ್ಯಾನ್‌ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ಶೌಕತ್ ಅಲಿ ಎಂಬವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಬಜರಂಗದಳ ಕಾರ್ಯಕರ್ತರು ಅಂಗಡಿಯ ಕಂಪ್ಯೂಟರ್, ಶೋಕೇಸ್ ಗ್ಲಾಸ್  ಹಾನಿಗೊಳಿಸಿದರು. ಇತ್ತೀಚೆಗೆ ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಕನ್ಹಯ್ಯಾ ಲಾಲ್ ಹತ್ಯೆಯನ್ನು ವಿರೋಧಿಸಿ ಹಿಂದೂ ಸಂಘಟನೆಗಳ ಕೆಲವು ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಭದ್ರಾವತಿ ಹಳೆಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

SCROLL FOR NEXT