ರಾಜ್ಯ

ಆರ್ ಟಿಒ ಕಚೇರಿ, ಚೆಕ್ ಪೋಸ್ಟ್ ಗಳಲ್ಲಿನ ಅಕ್ರಮದ ವಿರುದ್ಧ ಸ್ವಯಂ ಪ್ರೇರಿತ ಕ್ರಮಕ್ಕೆ ಲೋಕಾಯುಕ್ತ ಮುಂದು

Srinivas Rao BV

ಬೆಂಗಳೂರು: ಮೋಟಾರ್ ವಾಹನಗಳ ಇನ್ಸ್ಪೆಕ್ಟರ್ಗಳು ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಲು ವಿಫಲರಾಗುತ್ತಿರುವುದು ಹಾಗೂ ಜಿಲ್ಲೆಯಲ್ಲಿ ಸಾಮಾಜಿಕ ಅರಣ್ಯ ಯೋಜನೆ ಜಾರಿಗೊಳಿಸುವುದರಲ್ಲಿನ ವೈಫಲ್ಯದ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿಎಸ್ ಪಾಟೀಲ್ ಸಂಬಂಧಪಟ್ಟ ಅಧಿಕಾರಿಗಳಿಂದ ವಿವರಣೆ ಕೇಳಿದ್ದಾರೆ.
 
ವಿಜಯಪುರಕ್ಕೆ ಜೂ.24 ರಂದು ಲೋಕಾಯುಕ್ತರ ಭೇಟಿ ವೇಳೆ, ಸಾರ್ವಜನಿಕರು ಆರ್ ಟಿಒನಲ್ಲಿನ ಅಕ್ರಮಗಳ ಬಗ್ಗೆ ದೂರು ನೀಡಿದ್ದರು ಹಾಗೂ ಜಿಲ್ಲೆಯ ಚೆಕ್ ಪೋಸ್ಟ್ ಗಳಲ್ಲಿ ಮೋಟಾರ್ ವಾಹನಗಳ ಇನ್ಸ್ಪೆಕ್ಟರ್ಗಳ ಕಾರ್ಯನಿರ್ವಹಣೆಯ ಕುರಿತು ಆರೋಪಿಸಿದ್ದರು.

ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತರು ಆರ್ ಟಿಒ ಅಧಿಕಾರಿಗಳಿದ್ದ ಕಚೇರಿಗೆ ಭೇಟಿ ನೀಡಿದಾಗ ಚಾಲನಾ ಪರವಾನಗಿಗೆ ಸಂಬಂಧಿಸಿದ 2,437 ಅರ್ಜಿಗಳು, ಪರ್ಮಿಟ್, ನೋಂದಣಿ ಪ್ರಕರಣಗಳು, ದಂಡ ವಿಧಿಸುವುದು ಸೇರಿದಂತೆ ಹಲವು ಕಡತಗಳನ್ನು ಇತ್ಯರ್ಥಗೊಳಿಸದೇ ಬಾಕಿ ಇಟ್ಟಿದ್ದು ಕಂಡುಬಂದಿತ್ತು. 

ಪ್ರಾದೇಶಿಕ ಸಾರಿಗೆ ಅಧಿಕಾರಿ ಆನಂದ ಪಾರ್ಥನಹಳ್ಳಿ ಅವರಲ್ಲಿ ವಿಚಾರಿಸಿದಾಗ ಜಿಲ್ಲೆಯಲ್ಲಿರುವ ಚೆಕ್ ಪೋಸ್ಟ್ ಗಳಲ್ಲಿ 9 ಮೋಟಾರ್ ವಾಹನ ಪರಿವೀಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಒಮ್ಮೆಲೆ ಮೂವರು ಕರ್ತವ್ಯದಲ್ಲಿರುತ್ತಾರೆ. ಆದರೆ ಅವರ ಕಾರ್ಯನಿರ್ವಹಣೆ, ಸಮಯಪಾಲನೆ ಮತ್ತು ಅವರ ಕರ್ತವ್ಯಕ್ಕೆ ಹಾಜರಾಗುವುದು, ಅವರ ವಿರುದ್ಧ ದೂರುಗಳನ್ನು ಸ್ವೀಕರಿಸುವ ಕಾರ್ಯವಿಧಾನಗಳ ಬಗ್ಗೆ, ಅವರ ವಿರುದ್ಧ ದೂರು ಸ್ವೀಕರಿಸುವುದಕ್ಕೆ, ನಿಗಾ ವಹಿಸುವುದಕ್ಕೆ ಯಾವುದೇ ವ್ಯವಸ್ಥೆ ಇಲ್ಲದೇ ಇರುವುದು ಲೋಕಾಯುಕ್ತರ ಗಮನಕ್ಕೆ ಬಂದಿದೆ. 

ಈ ಹಿನ್ನೆಲೆಯಲ್ಲಿ ಲೋಕಾಯುಕ್ತರು ಸ್ವಯಂ ಪ್ರೇರಿತ ಕ್ರಮಕ್ಕೆ ಮುಂದಾಗಿ, ಕಾರ್ಯದರ್ಶಿ, ಸಾರಿಗೆ ಇಲಾಖೆ ಆಯುಕ್ತರು, ಬೆಳಗಾವಿ ವಿಭಾಗದ ಸಾರಿಗೆ ಇಲಾಖೆಯ ಜಂಟಿ ಆಯುಕ್ತರಿಗೆ ಸಾರ್ವಾನಿಕರ ಕುಂದುಕೊರತೆಗಳನ್ನು ಆಲಿಸಿ ಆಗಸ್ಟ್ 19 ರ ವೇಳೆಗೆ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ.

SCROLL FOR NEXT