ರಾಜ್ಯ

ಬಕ್ರೀದ್ ಹಿನ್ನೆಲೆ: ಶಾಸಕ ಜಮೀರ್ ಅಹ್ಮದ್ ಖಾನ್ ನೇತೃತ್ವದಲ್ಲಿ ಸೌಹಾರ್ದ ಸಭೆ

Shilpa D

ಬೆಂಗಳೂರು: ಚಾಮರಾಜಪೇಟೆ ಈದ್ಗಾ ಮೈದಾನ ಭೂವಿವಾದ ಕುರಿತು, ವೆಂಕಟರಾಮ್‌ ಕಲಾಭವನದಲ್ಲಿ ಸೌಹಾರ್ದ ಸಭೆ ನಡೆಸಲಾಗಿದ್ದು, ಸಭೆಯಲ್ಲಿ ಮಾಜಿ ಕಾರ್ಪೋರೇಟರ್ ಗಳು, ಶಾಸಕ ಜಮೀರ್ ಅಹ್ಮದ್  ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಇದು 1871 ರಿಂದ ಈದ್ಗಾ ಮೈದಾನವಾಗಿಯೇ ಇದೆ. ವಾಜೀದ್ ಅನ್ನೋರು 1954ರಲ್ಲಿ ಮುಸ್ನಿಲ್ ಕೋರ್ಟ್ ಫೈಲ್ ಮಾಡಿದ್ದರು. ಆದರೆ ಈ ಕೇಸ್ ಡಿಸ್ಮಿಸ್ ಆಗಿತ್ತು. ಆಗ 1958 ರಲ್ಲಿ ಮೈಸೂರ್ ಕೋರ್ಟ್ಗೆ ಅಫೀಲ್ ಹೋಗಿದ್ದರು. ಆಗ ಕೋರ್ಟ್ ನಿಮ್ಮ ದಾಖಲೆಗಳನ್ನ ಕೊಡಿ ಅಂತ ಕೇಳಿದೆ. ಸುಮಾರು ಒಂದೂವರೆ ವರ್ಷಗಳ ಕಾಲ ಈ ಕೇಸ್ ನಡೆದಿದೆ. 1959ರಲ್ಲಿ ಅಲ್ಲೂ ಕೇಸ್ ಡಿಸ್ ಮಿಸ್ ಆಗಿದೆ. ನಾನಿನ್ನು ಹುಟ್ಟೇ ಇರಲಿಲ್ಲ, ಆಗ ಇದೆಲ್ಲ ನಡೆದಿದೆ ಎಂದು ಮೈದಾನದ ಇತಿಹಾಸದ ಬಗ್ಗೆ ಜಮೀರ್ ಮಾತನಾಡಿದರು.

1965 ರಲ್ಲಿ ವಕ್ಫ್ ಬೋರ್ಡ್ ಗೆ ಇದೇ ಗೆಜೆಟ್ ಆಗಿಬಿಡುತ್ತದೆ. ಬಳಿಕ ಇದು ಹಾಗೇ ನಡೆದುಕೊಂಡು ಬಂದಿದೆ. 1972ರಲ್ಲಿ ಕಾರ್ಪೊರೇಷನ್ ನವರು ಕೋರ್ಟ್ ಗೆ ಹೋದರು. ಆದರೆ ಆಟದ ಮೈದಾನವನ್ನ ತೆಗೀತಿವಿ ಅಂತ ಯಾರೂ ಹೇಳಿಲ್ಲ. ಯಾರೂ ಹೇಳದೆ ಯಾಕಿಷ್ಟು ಗೊಂದಲ ಸೃಷ್ಟಿಸುತ್ತಾರೆ ಎಂಬುದು ಗೊತ್ತಿಲ್ಲ. ಜಮೀರ್ ಚಾಮರಾಜಪೇಟೆಯ ಮನೆ ಮಗನಾಗಿದ್ದಾನೆ. ಅದಕ್ಕಾಗಿಯೇ ಸತತ 4 ಬಾರಿಯೂ ನನ್ನನ್ನ ಗೆಲ್ಲಿಸಿದ್ದಾರೆ. ನಾನು ಜಾತಿ, ಧರ್ಮದ ವಿಚಾರವಾಗಿ ಬೇಧಬಾವ ಮಾಡಿಲ್ಲ. ಹೆಣ್ಣು-ಗಂಡು ಅಷ್ಟೇ ಜಾತಿ ಇರೋದು ಎಂದಿದ್ದಾರೆ.

ಚಾಮರಾಜಪೇಟೆಯ ಆಟದ ಮೈದಾನ ಇಂದು, ನಿನ್ನೆಯದಲ್ಲ. ನಾನು ಹುಟ್ಟುವ ಪೂರ್ವದಿಂದಲೂ ಇದೆ, ಮುಂದೆಯೂ ಇರುತ್ತದೆ. 'ಆಟದ ಮೈದಾನ ಉಳಿಸಿ' ಎಂದು ಬೊಬ್ಬೆ ಹಾಕುತ್ತ ಬಂದ್ ಗೆ ಕರೆ ನೀಡಿರುವ ಕಿಡಿಗೇಡಿಗಳಿಗೆ ನಾನು ಕೇಳ ಬಯಸುವುದೇನೆಂದರೆ, ಈಗ ಆಟದ ಮೈದಾನ ಎಲ್ಲಿ ಹೋಗಿದೆ? ಅದನ್ನು ತೆಗೆಯುತ್ತೇವೆ ಎಂದು ಹೇಳಿದವರು ಯಾರು.

ನಾನು ಅಧಿಕಾರದಲ್ಲಿರೋವರೆಗೂ ಆಟದ ಮೈದಾನ ತೆಗೆಯುವ ಪ್ರಶ್ನೆಯೇ ಇಲ್ಲ. ವಿಕೃತ ಮನಸುಗಳಿಗೆ ಸುಳ್ಳು ಸುದ್ದಿ ಹಬ್ಬಿಸಿ, ತಮ್ಮ ಬೇಳೆ ಬೇಯಿಸಿಕೊಳ್ಳಲು ಚಾಮರಾಜಪೇಟೆ ಕ್ಷೇತ್ರದ ಜನತೆ ಅವಕಾಶ ನೀಡುವುದಿಲ್ಲ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದರು.

SCROLL FOR NEXT