ಬೆಂಗಳೂರು ತಲುಪಿದ ಅಮರನಾಥ ಯಾತ್ರಿಗಳು 
ರಾಜ್ಯ

ಅಮರನಾಥದಲ್ಲಿ ಮೇಘಸ್ಪೋಟ: ಸುರಕ್ಷಿತವಾಗಿ ಬೆಂಗಳೂರು ತಲುಪಿದ ಕರ್ನಾಟಕದ 11 ಜನರ ತಂಡ

ರಾಜ್ಯದಿಂದ ಅಮರನಾಥ ಯಾತ್ರೆಗೆ ತೆರಳಿದ್ದವರಲ್ಲಿ 11 ಮಂದಿಯ ತಂಡವೊಂದು ಬೆಂಗಳೂರಿಗೆ ಸುರಕ್ಷಿತವಾಗಿ ತಲುಪಿದೆ.

ಬೆಂಗಳೂರು: ರಾಜ್ಯದಿಂದ ಅಮರನಾಥ ಯಾತ್ರೆಗೆ ತೆರಳಿದ್ದವರಲ್ಲಿ 11 ಮಂದಿಯ ತಂಡವೊಂದು ಬೆಂಗಳೂರಿಗೆ ಸುರಕ್ಷಿತವಾಗಿ ತಲುಪಿದೆ.

ನಾನು 18 ವರ್ಷಗಳಿಂದ ಅಮರನಾಥ ಯಾತ್ರೆಗೆ ಹೋಗುತ್ತಿದ್ದೇನೆ. ನಾನು ಸಿಕ್ಕಿಹಾಕಿಕೊಂಡಿರುವುದು ಇದೇ ಮೊದಲು.  ಈ ಮೊದಲು ಉಂಟಾದ ಭೂಕುಸಿತಗಳು  ನಮ್ಮ ಉತ್ಸಾಹಕ್ಕೆ ಅಡ್ಡಿಪಡಿಸಲಿಲ್ಲ.

ಈ ಬಾರಿಯೂ ಮಂಜುಗಡ್ಡೆ ಇಲ್ಲದಿದ್ದರೂ  ಏಕಾಏಕಿ ಸುರಿದ ಭಾರಿ ಮಳೆ ಅವಾಂತರ ಸೃಷ್ಟಿಸಿತು’ ಎಂದು ಅಮರನಾಥದಿಂದ ಶನಿವಾರ ತಡರಾತ್ರಿ ಬೆಂಗಳೂರಿಗೆ ಮರಳಿದ 11 ಮಂದಿ ತಂಡದಲ್ಲಿದ್ದ ತಾವರೆಕೆರೆ ನಿವಾಸಿ ಚೈತನ್ಯ ಟಿ ಎಸ್‌ ಹೇಳಿದ್ದಾರೆ.

ಅಮರನಾಥ ಯಾತ್ರೆ ವೇಳೆ ಯಾವಾಗಲೂ ಮಂಜುಗಡ್ಡೆ ಇರುತ್ತಿತ್ತು. ಈ ಬಾರಿ ಮಂಜುಗಡ್ಡೆ ಕಡಿಮೆಯಾಗಿದ್ದ ಕಾರಣ ಅಮರನಾಥ ಬೆಟ್ಟದ ಹಿಂದಿನ ಕಾರ್ಗಿಲ್ ಬೆಟ್ಟವೂ ಗೋಚರಿಸಿದೆ. ಮುನ್ಸೂಚನೆಯ ಪ್ರಕಾರ, ಜುಲೈ 8-11 ರವರೆಗೆ ಅತಿ ಹೆಚ್ಚು ಮಳೆಯಾಗಲಿದೆ. ಜುಲೈ 5 ರಂದು ನಾವು ತಲುಪಿದಾಗ, ದೇವಾಲಯದ ಮಂಡಳಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದವು. ನಂತರ, 3-5 ಗಂಟೆಗೆ ಹೇಸರಗತ್ತೆಗಳು ಮತ್ತು ಡೋಲಿಯಲ್ಲಿ ಪ್ರಯಾಣಿಸಿ ನಂತರ 5.30 ರಿಂದ ಕಾಲ್ನಡಿಗೆ ಯಲ್ಲಿ ತೆರಳು ನಿರ್ಧರಿಸಲಾಯಿತು. ದರ್ಶನ ಪಡೆದ ನಂತರ ನಾವು ಹಿಂತಿರುಗಿದೆವು, ಬೆಳಗ್ಗೆ 11 ಗಂಟೆಗೆ ಸಂಭವಿಸಿದ ಮೇಘಸ್ಪೋಟಕ್ಕೆ ದಾರಿಯಲ್ಲಿ ಸಾಗುತ್ತಿದ್ದವರು ಸಿಲಕಿ ಹಾಕಿಕೊಂಡರು ಎಂದು ಹೇಳಿದ್ದಾರೆ.

ರಕ್ಷಣಾ ತಂಡಗಳ ಸಹಾಯದಿಂದ, ನಾನು ಮತ್ತು ತಂಡದಲ್ಲಿದ್ದ ಇತರ 10ಮಂದಿ ಬಸ್‌ನಲ್ಲಿ ಶ್ರೀನಗರಕ್ಕೆ ಹೊರಟು ಶನಿವಾರ ಸಂಜೆ 4.30 ಕ್ಕೆ ವಿಮಾನದಲ್ಲಿ ಮುಂಬೈ ತಲುಪಿದೆವು. ರಾತ್ರಿ 11.30 ಕ್ಕೆ ಬೆಂಗಳೂರಿಗೆ ಬಂದೆವು ಎಂದು ಹೇಳಿದ್ದಾರೆ. ದೋಮಲ್ ಮತ್ತು ಬಾಲ್ಟಾ ಚೆಕ್ ಪೋಸ್ಟ್‌ನಲ್ಲಿ ಸುಮಾರು 500 ಜನರು ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಅವರು ಹೇಳಿದರು.

ಶುಕ್ರವಾರ ಸಂಭವಿಸಿದ ಮೇಘ ಸ್ಪೋಟ ದಲ್ಲಿ ಅಮರನಾಥದಲ್ಲಿ ಸಿಕ್ಕಿಬಿದ್ದ ಕರ್ನಾಟಕದ 350 ಯಾತ್ರಿಗಳಲ್ಲಿ ಚೈತನ್ಯ ಕೂಡ ಒಬ್ಬರು. ಅಮರನಾಥಕ್ಕೆ ಗುಂಪು ಗುಂಪಾಗಿ ತೆರಳಿದ್ದ ಯಾತ್ರಿಗಳ ಸಂಬಂಧಿಕರಿಂದ ಕರ್ನಾಟಕ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರಕ್ಕೆ ಸುಮಾರು (ಎಸ್‌ಇಒಸಿ) 57 ಕರೆಗಳು ಬಂದಿದ್ದವು.

ಯಾತ್ರಿಗಳಲ್ಲಿ ಕೆಲವರು ಬೆಂಗಳೂರು ನಗರ ಮತ್ತು ರಾಮನಗರದವರಾಗಿದ್ದರೆ, ಉಳಿದವರು ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಮೈಸೂರು, ಮಂಡ್ಯ, ಶಿವಮೊಗ್ಗ, ಬಾಗಲಕೋಟೆ, ದಕ್ಷಿಣ ಕನ್ನಡ, ಬೀದರ್, ಕಲಬುರ್ಗಿ ಮತ್ತು ಕೋಲಾರ ಜಿಲ್ಲೆಗಳಿಂದ ಬಂದವರಾಗಿದ್ದರು ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಕೆಎಸ್‌ಡಿಎಂಎ) ಅಧಿಕಾರಿಗಳು ತಿಳಿಸಿದ್ದಾರೆ.

ಶನಿವಾರ ಬೆಳಗ್ಗೆ IAF ಮತ್ತು ALH ಧ್ರುವ್ ಮತ್ತು Mi-17 ಹೆಲಿಕಾಪ್ಟರ್‌ಗಳನ್ನು ಅಮರನಾಥ ದೇಗುಲದ ಸ್ಥಳಕ್ಕೆ ಮತ್ತು AN-32 ಮತ್ತು IIyushin-76 ಸಾರಿಗೆ ವಿಮಾನಗಳನ್ನು ಚಂಡೀಗಢದಲ್ಲಿ ನಿಯೋಜಿಸಲಾಗಿತ್ತು.

ಅಮರನಾಥಕ್ಕೆ ತೆರಳಿದ್ದ ಕರ್ನಾಟಕದವರೆಲ್ಲರನ್ನು ಸಂಪರ್ಕಿಸಿದ್ದೆವು, ಅವರೆಲ್ಲರೂ ಸುರಕ್ಷಿತವಾಗಿದ್ದಾರೆ.  ಕರ್ನಾಟಕದ ಪ್ರಯಾಣಿಕರಿಗೆ ಯಾವುದೇ ಹಾನಿಯಾಗಿಲ್ಲ. ಕೆಲವು ಪ್ರಯಾಣಿಕರು ತಮ್ಮ ಪ್ರಯಾಣವನ್ನು ಮುಂದುವರಿಸಲು ಉತ್ಸುಕರಾಗಿದ್ದರೆ, ಮತ್ತೆ ಕೆಲವರು ಹಿಂತಿರುಗುತ್ತಿದ್ದಾರೆ ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
ನೆಟ್‌ವರ್ಕ್ ಸಮಸ್ಯೆಯಿಂದಾಗಿ ಯಾತ್ರಿಗಳನ್ನು ಸಂಪರ್ಕಿಸಲು ಸಂಬಂಧಿಕರಿಗೆ ಮತ್ತು ಇಲಾಖೆಗೆ ಪ್ರಮುಖ ಸಮಸ್ಯೆಯಾಗಿದೆ. ಪೋಸ್ಟ್‌ಪೇಯ್ಡ್ ನೆಟ್‌ವರ್ಕ್ ಪ್ರಿಪೇಯ್ಡ್‌ಗಿಂತ ಹೆಚ್ಚಾಗಿ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಸಿದ್ದಾರೆ.

ಅಮರನಾಥಕ್ಕೆ ತೆರಳಿದ್ದ ಮೈಸೂರಿನ ಹತ್ತು ವಕೀಲರ ತಂಡವನ್ನು ಭಾರತೀಯ ಸೇನೆಯ ಹೆಲಿಕಾಪ್ಟರ್‌ಗಳ ಮೂಲಕ ಪ್ರದೇಶದ ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಯಿತು.  ನಂತರ ಅವರು ದೆಹಲಿ ತಲುಪುವ ಮೊದಲು ಜಮ್ಮು ಮತ್ತು ಕಾಶ್ಮೀರದ ಕತ್ರಾ, ನಂತರ ಅಮೃತಸರಕ್ಕೆ ಪ್ರಯಾಣಿಸಿದರು. ಅವರು ಭಾನುವಾರ ಬೆಂಗಳೂರಿಗೆ ಮತ್ತು ನಂತರ ಮೈಸೂರಿಗೆ ಬರಲಿದ್ದಾರೆ.

ಅಮರನಾಥಕ್ಕೆ ತೆರಳಿದ್ದ ಮುತ್ಯಾನ ಬಬಲಾದ ಮಠದ ಶ್ರೀ ಗುರುಪಾದಲಿಂಗ ಮಹಾಶಿವಯೋಗಿ ಸ್ವಾಮೀಜಿ ಸೇರಿದಂತೆ ಕಲಬುರಗಿಯ 43 ಮಂದಿಯನ್ನು ರಕ್ಷಿಸಲಾಗಿದೆ ಎಂದು ಕಲಬುರಗಿಯ ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗಳ್ಳಿ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

ಬೀದರ್ ಜಿಲ್ಲಾಧಿಕಾರಿ ಗೋವಿಂದ್ ರೆಡ್ಡಿ ಮಾತನಾಡಿ, ಎಲ್ಲಾ ಒಂಬತ್ತು ಯಾತ್ರಾರ್ಥಿಗಳು ಸುರಕ್ಷಿತವಾಗಿದ್ದು, ಅವರನ್ನು ಮರಳಿ ಕರೆತರಲು ಸರ್ಕಾರ ಶ್ರಮಿಸುತ್ತಿದೆ ಎಂದು ತಿಳಿಸಿದ್ದಾರೆ.

ಸಹಾಯವಾಣಿಯ ವಿವರಗಳು
ಎನ್ ಡಿ ಆರ್ ಎಫ್ 011-23438252, 011-23438253

ಕಾಶ್ಮೀರ ವಿಭಾಗೀಯ ಸಹಾಯವಾಣಿ -- 0194-2496240

ಶ್ರೈನ್ ಬೋರ್ಡ್ ಸಹಾಯವಾಣಿ 0194-2313149

ಪೊಲೀಸ್ ನಿಯಂತ್ರಣ ಕೊಠಡಿ ಅನಂತನಾಗ್ -- 9596777669, 9419051940, 01932225870, 01932222870

ಜಂಟಿ ಪೊಲೀಸ್ ನಿಯಂತ್ರಣ ಕೊಠಡಿ ಪಹಲ್ಗಾಮ್ -- 9596779039, 9797796217, 01936243233, 01936243018

ರೆಸಿಡೆಂಟ್ ಕಮಿಷನರ್ ಆಫೀಸ್, ಕರ್ನಾಟಕ ಭವನ, ನವದೆಹಲಿ -- 011-24103701, 24103702 011-26115515, 26117666

ಕರ್ನಾಟಕ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ 080-1070, 22340676,

ಇಮೇಲ್:revenuedmkar@gmail.com, seockarnataka@gmail.com

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

ಸಂಭಾಲ್ ದೇವಸ್ಥಾನದಿಂದ ಸಾಯಿಬಾಬಾ ವಿಗ್ರಹಕ್ಕೆ ಗೇಟ್ ಪಾಸ್! ಗಂಗಾ ನದಿಯಲ್ಲಿ ವಿಸರ್ಜನೆ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

SCROLL FOR NEXT