ಉದ್ಘಾಟನೆಗೆ ಎಮ್ಮೆಯನ್ನು ಕರೆತಂದ ಗ್ರಾಮಸ್ಥರು 
ರಾಜ್ಯ

ಎಮ್ಮೆಯಿಂದ ಬಸ್ ನಿಲ್ದಾಣ ಉದ್ಘಾಟನೆ: ಜನಪ್ರತಿನಿಧಿಗಳು, ಅಧಿಕಾರಿಗಳ ಗಮನ ಸೆಳೆಯಲು ಗ್ರಾಮಸ್ಥರ ಉಪಾಯ!

ಗದಗ ಜಿಲ್ಲೆಯ ಹಳ್ಳಿಯೊಂದರಲ್ಲಿ ಬಸ್ ನಿಲ್ದಾಣ ಉದ್ಘಾಟನೆಯ ವಿಶಿಷ್ಟ ಸಮಾರಂಭ. ಇಂತಹ ಕಾರ್ಯಕ್ರಮಗಳಿಗೆ ರಾಜಕಾರಣಿಗಳು ಮತ್ತು ಪ್ರಮುಖ ವ್ಯಕ್ತಿಗಳು ಬರುತ್ತಾರೆ, ಆದರೆ ಈ ಕಾರ್ಯಕ್ರಮ ಸಂಪೂರ್ಣ ಭಿನ್ನ, ಇದಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದು ಎಮ್ಮೆ.

ಗದಗ: ಗದಗ ಜಿಲ್ಲೆಯ ಹಳ್ಳಿಯೊಂದರಲ್ಲಿ ಬಸ್ ನಿಲ್ದಾಣ ಉದ್ಘಾಟನೆಯ ವಿಶಿಷ್ಟ ಸಮಾರಂಭ. ಇಂತಹ ಕಾರ್ಯಕ್ರಮಗಳಿಗೆ ರಾಜಕಾರಣಿಗಳು ಮತ್ತು ಪ್ರಮುಖ ವ್ಯಕ್ತಿಗಳು ಬರುತ್ತಾರೆ, ಆದರೆ ಈ ಕಾರ್ಯಕ್ರಮ ಸಂಪೂರ್ಣ ಭಿನ್ನ, ಇದಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದು ಎಮ್ಮೆ. 

ಬಸ್ ನಿಲ್ದಾಣ ಉದ್ಘಾಟಿಸುವ ಸಂದರ್ಭದಲ್ಲಿ ರಿಬ್ಬನ್ ಕತ್ತರಿಸುವ ವೇಳೆ ಗ್ರಾಮಸ್ಥರೊಂದಿಗೆ ಎಮ್ಮೆ ಇದ್ದು ಎಲ್ಲರಿಂದ ಚಪ್ಪಾಳೆ ಗಿಟ್ಟಿಸಿಕೊಂಡು ನೋಡುಗರ ಗಮನಸೆಳೆಯಿತು. 

ಯಾಕೆ ಎಮ್ಮೆಯನ್ನು ಕರೆತಂದರು?: ಗದಗ ಜಿಲ್ಲೆಯ ಬಾಳೆಹೊಸೂರು ಗ್ರಾಮಸ್ಥರು ತಮಗೊಂದು ಬಸ್ ತಂಗುದಾಣ ನೀಡುವಂತೆ ಅಧಿಕಾರಿಗಳಿಗೆ ಬಹುದಿನಗಳಿಂದ ಮನವಿ ಮಾಡುತ್ತಿದ್ದರು. ಆದರೆ ಅಧಿಕಾರಿಗಳು ಕ್ಯಾರೇ ಮಾಡಿರಲಿಲ್ಲ. ಅಧಿಕಾರಿಗಳ ಗಮನ ಸೆಳೆಯಲು ಗ್ರಾಮಸ್ಥರು ಎಮ್ಮೆ ಕರೆತಂದು ಈ ರೀತಿ ವಿಶಿಷ್ಟತೆ ತೋರಿಸಿದ್ದಾರೆ. 

ಇಲ್ಲಿ ಮೊದಲ ಬಸ್ ನಿಲ್ದಾಣವನ್ನು ಸುಮಾರು 40 ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು. ಕೆಲವು ವರ್ಷಗಳ ಹಿಂದೆ ಅದು ಕುಸಿದಿದೆ. ಗ್ರಾಮಸ್ಥರಿಗೆ ಬಸ್ ಗೆ ಕಾಯಲು ಸರಿಯಾದ ಸ್ಥಳವಿಲ್ಲದೆ ಹತ್ತಿರದ ಹೊಟೇಲ್ ಅಥವಾ ಮನೆಯ ಮುಂದೆ ಕಾಯಬೇಕು. ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು ಮತ್ತು ಹಲವರು ಬಸ್ ಸೇವೆಗಳನ್ನು ಸಾಕಷ್ಟು ಅವಲಂಬಿಸಿದ್ದಾರೆ. ಮಳೆಗಾಲದಲ್ಲಿ ಬಹಳ ಕಷ್ಟವಾಗುತ್ತದೆ. 

ನಂತರ ಈ ಬಸ್ ನಿಲ್ದಾಣ ಸ್ಥಳ ತ್ಯಾಜ್ಯ ಸುರಿಯುವ ಸ್ಥಳವಾಗಿ ಮಾರ್ಪಟ್ಟಿತು. ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗದಿದ್ದಾಗ ಗ್ರಾಮಸ್ಥರು ಒಂದಿಷ್ಟು ಹಣ ಸಂಗ್ರಹಿಸಿ ತೆಂಗಿನ ಗರಿಗಳಿಂದ ತಾತ್ಕಾಲಿಕ ನಿಲ್ದಾಣ ನಿರ್ಮಿಸಿಕೊಂಡರು. ಎಮ್ಮೆಯನ್ನು ತಂದು ಉದ್ಘಾಟನೆ ಮಾಡಿದರು. 

ಕಳೆದೆರಡು ವರ್ಷಗಳಿಂದ ನಾವು ಸ್ಥಳೀಯ ಶಾಸಕರು ಮತ್ತು ಸಂಸದರಿಗೆ ಬಸ್ ನಿಲ್ದಾಣ ನಿರ್ಮಿಸಿಕೊಡುವಂತೆ ಮನವಿ ಮಾಡುತ್ತಿದ್ದೇವೆ. ಪ್ರತಿ ಬಾರಿಯೂ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖಂಡರು ಭರವಸೆ ನೀಡಿದರೂ ಏನೂ ಆಗಿಲ್ಲ. ಬಸ್ ತಂಗುದಾಣವು ಕಸ ಹಾಕುವ ರಾಶಿಯಾಗಿ ಮಾರ್ಪಟ್ಟಿದೆ. ಜನರು ಇನ್ನೂ ಆಶ್ರಯವಿಲ್ಲದೆ ಬಳಲುತ್ತಿದ್ದಾರೆ. ಆದ್ದರಿಂದ ನಾವು ದುರಸ್ತಿ ಮಾಡಲು ನಿರ್ಧರಿಸಿದ್ದೇವೆ ಅಧಿಕಾರಿಗಳಿಂದ ಏನೂ ನಿರೀಕ್ಷೆಯಿಟ್ಟುಕೊಂಡಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

ಬಸ್ ತಂಗುದಾಣವನ್ನು ಎಮ್ಮೆ ಉದ್ಘಾಟಿಸಿದ ನಂತರ, ಪ್ರತಿನಿಧಿಗಳ ನಿರ್ಲಕ್ಷ್ಯದ ಹಿಂದೆ ಕಾರಣವನ್ನು ಕೇಳುವ ವೀಡಿಯೊಗಳು ವೈರಲ್ ಆಗಿವೆ. ಶಿರಹಟ್ಟಿ ಶಾಸಕ ರಾಮಪ್ಪ ಲಮಾಣಿ, ನಾವು ಈ ವಿಷಯವನ್ನು ಶೀಘ್ರದಲ್ಲೇ ಪರಿಶೀಲಿಸುತ್ತೇವೆ. ಗ್ರಾಮಸ್ಥರಿಗೆ ಹೊಸ ಬಸ್ ತಂಗುದಾಣವನ್ನು ನಿರ್ಮಿಸುತ್ತೇವೆ ಎಂದು ಭರವಸೆ ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT