ಸಾಂಕೇತಿಕ ಚಿತ್ರ 
ರಾಜ್ಯ

ರಾಜ್ಯದ 43 ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ: ಲೋಕಾಯುಕ್ತ ನ್ಯಾಯಮೂರ್ತಿಗಳಿಗೆ ವರದಿ ಸಲ್ಲಿಕೆ

ಕರ್ನಾಟಕ ಲೋಕಾಯುಕ್ತದ 10 ತಂಡಗಳು ನಾಲ್ಕು ದಿನಗಳ ಕಾಲ ನಡೆಸಿದ ದಿಢೀರ್ ದಾಳಿಯಿಂದ ಬೆಂಗಳೂರಿನ 43 ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಹಲವು ಅಕ್ರಮಗಳು ಮತ್ತು ಅವ್ಯವಹಾರಗಳು ಬೆಳಕಿಗೆ ಬಂದಿವೆ. ದಾಳಿ ನಡೆದ ಎಲ್ಲಾ ಸ್ಥಳಗಳಲ್ಲಿ ಅಕ್ರಮಗಳು ನಡೆಯುವುದು ಸಾಮಾನ್ಯವಾಗಿದೆ.

ಬೆಂಗಳೂರು: ಕರ್ನಾಟಕ ಲೋಕಾಯುಕ್ತದ 10 ತಂಡಗಳು ನಾಲ್ಕು ದಿನಗಳ ಕಾಲ ನಡೆಸಿದ ದಿಢೀರ್ ದಾಳಿಯಿಂದ ಬೆಂಗಳೂರಿನ 43 ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಹಲವು ಅಕ್ರಮಗಳು ಮತ್ತು ಅವ್ಯವಹಾರಗಳು ಬೆಳಕಿಗೆ ಬಂದಿವೆ. ದಾಳಿ ನಡೆದ ಎಲ್ಲಾ ಸ್ಥಳಗಳಲ್ಲಿ ಅಕ್ರಮಗಳು ನಡೆಯುವುದು ಸಾಮಾನ್ಯವಾಗಿದೆ.

ನಗರದ ಪ್ರತಿ ಆಸ್ತಿಗೆ 10 ಸಾವಿರದಿಂದ 20 ಸಾವಿರ ರೂಪಾಯಿಗಳವರೆಗೆ ಕಮಿಷನ್ ಸಂಗ್ರಹಿಸುತ್ತಾರೆ, ಪಂಚಾಯತ್ ಮಿತಿಯಲ್ಲಿ  40 ಸಾವಿರದಿಂದ 1 ಲಕ್ಷದವರೆಗೆ ಇದೆ. ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಗಿರಾಕಿಗಳಿಗೆ (Touts) ನೀಡುವ ಲಂಚವು ಸ್ಟಾಂಪ್ ಶುಲ್ಕ, ನೋಂದಣಿ ಮತ್ತು ಸ್ಕ್ಯಾನಿಂಗ್ ಶುಲ್ಕಗಳ ಒಟ್ಟು ಮೊತ್ತಕ್ಕಿಂತ ಅಧಿಕವಾಗಿದೆ. 

ಮಧ್ಯವರ್ತಿಗಳು ಕೆಲಸವನ್ನು ಕಾರ್ಯಗತಗೊಳಿಸಲು ಅಧಿಕಾರಿಗಳಂತೆ ವರ್ತಿಸುವುದರಿಂದ ಅಧಿಕಾರಿಗಳು ಮತ್ತು ಲಂಚ ಪಡೆಯುb ಗಿರಾಕಿಗಳ ಮಧ್ಯೆ ವ್ಯತ್ಯಾಸವನ್ನು ಕಂಡುಹಿಡಿಯುವುದು ಕಷ್ಟವಾಗಿದೆ. ಉಪ-ನೋಂದಣಿದಾರರು ಮತ್ತು ಸಿಬ್ಬಂದಿ ಗುರುತಿನ ಚೀಟಿಗಳನ್ನು ಧರಿಸುವುದಿಲ್ಲ ಹಾಜರಾತಿಯನ್ನು ಕೂಡ ಕಚೇರಿಯಲ್ಲಿ ಹಾಕುವುದಿಲ್ಲ. ಹೆಸರುಗಳು ಮತ್ತು ಜಾಗೃತ ದಳದ ಜಾಗೃತಿ ಫಲಕಗಳು ಕಚೇರಿಗಳಲ್ಲಿ ಪ್ರದರ್ಶಿಸುವುದಿಲ್ಲ. ಸಿಸಿಟಿವಿ ಕ್ಯಾಮರಾಗಳನ್ನು  ಅಳವಡಿಸದಿರುವುದು ಮತ್ತು ಸರ್ವರ್ (ಕಾವೇರಿ ಆಸ್ತಿ ನೋಂದಣಿ ಸಾಫ್ಟ್‌ವೇರ್) ಹೆಚ್ಚಿನ ಸಮಯಗಳಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಇದರಿಂದ ಸಾರ್ವಜನಿಕರಿಗೆ ದಾಖಲೆಗಳ ನೋಂದಣಿಗೆ ಬಹುತೇಕ ಸಮಯಗಳಲ್ಲಿ ಅನನುಕೂಲವಾಗುತ್ತದೆ.

ಗಿರಾಕಿಗಳ ವ್ಯವಹಾರ ಮುಕ್ತ: ಇಲ್ಲಿ ಬಗೆದಷ್ಟೂ ಅನೇಕ ಹುಳುಕುಗಳು ಹೊರಬರುತ್ತವೆ. ನಗದು ಘೋಷಣೆ ನೋಂದಣಿಯನ್ನು ಕಚೇರಿಗಳಲ್ಲಿ ನಿರ್ವಹಿಸುವುದಿಲ್ಲ. ಆದಾಯ ತೆರಿಗೆ ಪಾವತಿಯನ್ನು ತಪ್ಪಿಸಿಕೊಳ್ಳಲು ದಾಖಲೆಗಳಲ್ಲಿ ಪ್ಯಾನ್ ಸಂಖ್ಯೆಗಳನ್ನು ನಮೂದಿಸುವುದಿಲ್ಲ, ನಿವೇಶನಗಳ ನೋಂದಣಿಯನ್ನು ಕಾನೂನುಬಾಹಿರವಾಗಿ ಮಾಡಲಾಗುತ್ತದೆ. ಈ ಬಗ್ಗೆ ಉನ್ನತ ಅಧಿಕಾರಿಗಳು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಾರೆ. ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ.

ರಾಜ್ಯಾದ್ಯಂತ ಹಠಾತ್ ದಾಳಿ ನಡೆಸಿ ಭ್ರಷ್ಟಾಚಾರದ ಬ್ರಹ್ಮಾಂಡವನ್ನು ಬಯಲಿಗೆಳೆಯಲು ನಾಲ್ಕು ದಿನಗಳ ಕಾಲ ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೆ ಭೇಟಿ ನೀಡಿದ ಪೊಲೀಸ್ ಅಧಿಕಾರಿಗಳನ್ನೊಳಗೊಂಡ 10 ತಂಡಗಳಲ್ಲಿ ನ್ಯಾಯಾಂಗ ಅಧಿಕಾರಿಗಳು ಮೊದಲ ಬಾರಿಗೆ ತೊಡಗಿಸಿಕೊಂಡರು. ತಂಡಗಳು ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ ಎಸ್ ಪಾಟೀಲ್ ಅವರಿಗೆ ವರದಿ ಸಲ್ಲಿಸಿವೆ.

ಈ ಅಕ್ರಮಗಳು ಸಾರ್ವಜನಿಕರಿಗೆ ಕಿರುಕುಳ ಉಂಟು ಮಾಡುತ್ತಿರುವುದು ದುರದೃಷ್ಟಕರ, ಇಂತಹ ಅಕ್ರಮಗಳ ವಿರುದ್ಧ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ನ್ಯಾಯಮೂರ್ತಿ ಪಾಟೀಲ್ ಅವರು ಸ್ವಯಂಪ್ರೇರಿತವಾಗಿ ವಿಚಾರಣೆಯನ್ನು ಕೈಗೆತ್ತಿಕೊಂಡು ಭ್ರಷ್ಟಾಚಾರವನ್ನು ಹೊರತೆಗೆದು ಸರ್ಕಾರದ ಗಮನಕ್ಕೆ ತಂದಿದ್ದಾರೆ. ಸರ್ಕಾರದ ಬಳಿ ವಿವರಣೆ ಕೇಳಿದ್ದಾರೆ.

ಲೋಕಾಯುಕ್ತ ನ್ಯಾಯಮೂರ್ತಿಗಳಿಗೆ ಸಲ್ಲಿಸಿದ ವರದಿಗಳಲ್ಲಿ ಸಾರ್ವಜನಿಕ ದೂರುಗಳು ಸಾಕಷ್ಟಿವೆ. ಉನ್ನತ ಅಧಿಕಾರಿಗಳ ಸರಿಯಾದ ಮತ್ತು ನಿರಂತರ ಮೇಲ್ವಿಚಾರಣೆ ಇದ್ದಿದ್ದರೆ, ಈ ಅಕ್ರಮಗಳನ್ನು ತಡೆದು ಕಚೇರಿಗಳಲ್ಲಿ ನಾಗರಿಕ ಸ್ನೇಹಿ ವ್ಯವಸ್ಥೆಯನ್ನು ಜಾರಿಗೆ ತರಬಹುದಿತ್ತು ಎಂದು ಲೋಕಾಯುಕ್ತ ನ್ಯಾಯಮೂರ್ತಿಗಳು ಹೇಳುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

Belagavi: ಲವರ್ ಜೊತೆ ಮಗಳು ಪರಾರಿ, ಇಡೀ ಊರಿಗೆ 'ತಿಥಿ' ಊಟ ಹಾಕಿಸಿದ ತಂದೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು, Video!

ಅಧಿಕೃತವಾಗಿ 'ಹೊಸ ಗರ್ಲ್‌ ಫ್ರೆಂಡ್‌' ಪರಿಚಯಿಸಿದ ಹಾರ್ದಿಕ್ ಪಾಂಡ್ಯ! Video

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

SCROLL FOR NEXT