ರಾಜ್ಯ

ಹುಬ್ಬಳ್ಳಿ ಫ್ಯಾಕ್ಟರಿ ಬೆಂಕಿ: ಆಸ್ಪತ್ರೆಯಲ್ಲಿ ಮೂವರ ಸಾವು

Srinivas Rao BV

ಹುಬ್ಬಳ್ಳಿ: ಹುಬ್ಬಳ್ಳಿಯ ಸ್ಪಾರ್ಕಲ್ ಕ್ಯಾಂಡಲ್ ಉತ್ಪಾದನಾ ಘಟಕದಲ್ಲಿ ಸಂಭವಿಸಿದ್ದ ಅಗ್ನಿ ಅವಘಡದಲ್ಲಿ ಗಾಯಗೊಂಡು ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂವರು ಕಾರ್ಮಿಕರು ಸಾವನ್ನಪ್ಪಿದ್ದಾರೆ. 

ಮೃತ ದುರ್ದೈವಿ ಕಾರ್ಮಿಕರಿಗೆ ಬೆಂಕಿ ಅವಘಡದ ಘಟನೆಯಲ್ಲಿ ಶೇ.75 ರಷ್ಟು ಸುಟ್ಟ ಗಾಯಗಳಾಗಿದ್ದವು. ಶನಿವಾರ ಸಂಜೆ ಹುಬ್ಬಳ್ಳಿಯ ತರಿಹಾಳ್ ಕೈಗಾರಿಕಾ ಪ್ರದೇಶದಲ್ಲಿದ್ದ ಸ್ಪಾರ್ಕಲ್ ಕ್ಯಾಂಡಲ್ ಉತ್ಪಾದನಾ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. 

ಬೆಂಕಿ ಅವಘಡದಲ್ಲಿ 8 ನೌಕರರಿಗೆ ಸುಟ್ಟ ಗಾಯಗಳಾಗಿತ್ತು, ಅವರನ್ನು ಐಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಿಜಯಲಕ್ಷ್ಮಿ ಎಚ್ಚನಗರ್, 34 ಗೆ ಶೇ.90 ರಷ್ಟು ಗಾಯಗಳಾಗಿತ್ತು. ಆತ ಶನಿವಾರ ರಾತ್ರಿ ಮೃತಪಟ್ಟಿದ್ದರು. ಗೌರಮ್ಮ ಹಿರೇಮಠ (45) ಶೇ.80 ರಷ್ಟು ಸುಟ್ಟ ಗಾಯಗಳಾಗಿತ್ತು. ಶೇ.75 ರಷ್ಟು ಗಾಯಗೊಂಡಿದ್ದ ಮಲೇಶ್ ಹದ್ದಣ್ಣನವರ್ ಭಾನುವಾರ ಬೆಳಿಗ್ಗೆ ಕಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಗಾಯಗೊಂಡ ಇತರ ಕಾರ್ಮಿಕರಾದ ಮಲ್ಲೀಕ್ ರೇಹಾನ್ ಕೊಪ್ಪದ್ (18) ನಿರ್ಮಲಾ ಹುಚ್ಚಣ್ಣನವರ್ (29), ಚೆನ್ನವ್ವ ಅರಿಮಾಳ್ (42) ಪ್ರೇಮಾ ಅರಿಮಾಳ್ (20) ನಾಣಿಮ್ಮ ಪಡದಾರ್ (35) ಅವರ ಆರೋಗ್ಯ ಪರಿಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
 
ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಅಗ್ನಿ ಅವಘಡ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರ್ಮಿಕರ ಆರೋಗ್ಯವನ್ನು ವಿಚಾರಿಸಿದ್ದಾರೆ. "ಪೊಲೀಸರು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.  ತನಿಖೆಯ ಬಳಿಕ ಅಗ್ನಿ ಅವಘಡಕ್ಕೆ ಕಾರಣ ಏನೆಂಬುದು ತಿಳಿಯಲಿದೆ, ಅಕ್ರಮ ನಡೆದಿದ್ದರೆ, ಸರ್ಕಾರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.

SCROLL FOR NEXT