ಮೈಸೂರು ದಸರಾ ಸಾಂದರ್ಭಿಕ ಚಿತ್ರ 
ರಾಜ್ಯ

ದಸರಾ ಗೋಲ್ಡನ್ ಪಾಸ್ ನಲ್ಲಿ ಥೀಮ್ ಆಧಾರಿತ ಪ್ಯಾಕೇಜ್ ಟೂರ್ ಸೇರಿಸಲು ಚಿಂತನೆ!

ನಾಡಹಬ್ಬ ಮೈಸೂರು ದಸರಾ ವೇಳೆಯಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಸೆಳೆಯಲು ಪ್ಯಾಕೇಜ್ ಟೂರುಗಳ ಬಗ್ಗೆ ಪ್ರವಾಸೋದ್ಯಮ ಇಲಾಖೆ ಚಿಂತನೆ ನಡೆಸುತ್ತಿದೆ.

ಬೆಂಗಳೂರು: ನಾಡಹಬ್ಬ ಮೈಸೂರು ದಸರಾ ವೇಳೆಯಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಸೆಳೆಯಲು ಪ್ಯಾಕೇಜ್ ಟೂರುಗಳ ಬಗ್ಗೆ ಪ್ರವಾಸೋದ್ಯಮ ಇಲಾಖೆ ಚಿಂತನೆ ನಡೆಸುತ್ತಿದೆ. ಮೈಸೂರು ದಸರಾಕ್ಕಾಗಿ 1,000 ಗೋಲ್ಡನ್ ಪಾಸ್ ಗೆ ಅನುಮೋದನೆ ನೀಡುವಂತೆ ರಾಜ್ಯ ಪ್ರವಾಸೋದ್ಯಮ ನಿಗಮ ಸರ್ಕಾರವನ್ನು ಕೋರಿದೆ.

ಈ ಪಾಸ್ ನಿಂದ ಜಂಬೂ ಸವಾರಿ ವೀಕ್ಷಣೆ ಮಾತ್ರವಲ್ಲದೇ, ಚಿಕ್ಕಮಗಳೂರು, ಮಡಿಕೇರಿ, ಮೇಲುಕೋಟೆ, ಬೇಲೂರು ಮತ್ತು ಹಳೇ ಬಿಡು ನಂತಹ ಪ್ರವಾಸಿ ತಾಣಗಳಿಗೆ ತೆರಳಲು ಬಳಸಿಕೊಳ್ಳಬಹುದಾಗಿದೆ.

ನಾಡ ಹಬ್ಬ ನೋಡಲು ಯೋಚಿಸಿರುವ ಪ್ರವಾಸಿಗರಿಗೆ ಥೀಮ್ ಆಧಾರಿತ ಪ್ಯಾಕೇಜ್ ಅವಕಾಶ ನೀಡಲಾಗುತ್ತಿದೆ. ಎರಡು ವರ್ಷಗಳ ನಂತರ ಈ ಬಾರಿಯ ದಸರಾ ಹಬ್ಬ ವಿಜೃಂಭಣೆಯಿಂದ ನಡೆಯಲಿದೆ. ಮೈಸೂರಿಗೆ ಮಾತ್ರವಲ್ಲದೇ ರಾಜ್ಯಕ್ಕೆ ಹೆಚ್ಚಿನ ಪ್ರವಾಸಿಗರನ್ನು ಸೆಳೆಯಲು ಇದೊಂದು ಅವಕಾಶವಾಗಿದೆ ಎಂದು ಕೆಎಸ್ ಟಿಡಿಸಿ ವ್ಯವಸ್ಥಾಪಕ ನಿರ್ದೇಶಕ ಜಗದೀಶ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.

ಈ ಬಾರಿ 1,000 ಗೋಲ್ಡನ್ ಪಾಸ್  ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಇದರಿಂದ ಹೆಚ್ಚಿನ ಜನರನ್ನು ಸೆಳೆಯಬಹುದಾಗಿದೆ. ಜನರಿಗಾಗಿ ಡೇ ಪ್ಯಾಕೇಜ್ ಮತ್ತು ಧೀರ್ಘ ಅವಧಿಯ ಪ್ಯಾಕೇಜ್ ಟೂರ್ ಗೂ ಚಿಂತನೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು. 

ಪ್ರತಿ ಪಾಸ್ ಗೂ ಸುಮಾರು 5,000 ಶುಲ್ಕವಿರಲಿದೆ. ಮೈಸೂರು ದಸರಾ ವೀಕ್ಷಿಸುವ ಪ್ರವಾಸಿಗರು ಇತರ ಸ್ಥಳಗಳಿಗೂ ಭೇಟಿ ನೀಡಬಹುದಾಗಿದೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಆದಾಯ ಹೆಚ್ಚಳ ಇದರ ಗುರಿಯಾಗಿದೆ. ದಸರಾ ವೇಳೆಯಲ್ಲಿ ಇ- ಬ್ರೋಚರ್ ಸೇವೆಗೂ ಚಾಲನೆ ನೀಡಲಾಗುವುದು, ಅದರಲ್ಲಿ ಹೋಟೆಲ್, ಸೇವೆಗಳ ವಿವರ ಮತ್ತು ಬುಕ್ಕಿಂಗ್ ಹಾಗಿ ಕ್ಯೂಆರ್ ಕೋಡ್ ನ್ನು ಪ್ರವಾಸಿಗರು ಸ್ಕ್ಯಾನ್ ಮಾಡಬಹುದು ಎಂದು ಅವರು ಮಾಹಿತಿ ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT