ರಾಜ್ಯ

ಹೆಚ್ ಎಂಎಸ್ ಸಂಸ್ಥೆಗೂ ಯುನಾನಿ ಮೆಡಿಕಲ್ ಕಾಲೇಜಿಗೂ ಸಂಬಂಧವಿಲ್ಲ: ತುಮಕೂರಿನ ಮಾಜಿ ಶಾಸಕ ಸ್ಪಷ್ಟನೆ

Sumana Upadhyaya

ತುಮಕೂರು: ನಗರದ ಯುನಾನಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಯನ್ನು ಕೇಂದ್ರ ತನಿಖಾ ತಂಡ(NIA)ದವರು ಬಂಧಿಸಿದ್ದಾರೆ ಎಂಬ ವದಂತಿಯಿದೆ. ಯುನಾನಿ ಮೆಡಿಕಲ್ ಕಾಲೇಜು 15 ವರ್ಷಗಳ ಹಿಂದೆ ಹೆಚ್ ಎಂಎಸ್ ವಿದ್ಯಾಸಂಸ್ಥೆಯಿಂದ ಮುಂಬೈಯ ಐಡಳಿತ ಮಂಡಳಿಗೆ ಮಾರಾಟ ಮಾಡಿದ್ದೆವು ಎಂದು ತುಮಕೂರಿನ ಮಾಜಿ ಶಾಸಕ ಸ್ಪಷ್ಟೀಕರಣ ನೀಡಿದ್ದಾರೆ.

ಆಡಳಿತ ಮಂಡಳಿಯವರು ಯುನಾನಿ ವೈದ್ಯಕೀಯ ಕಾಲೇಜನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಇದಕ್ಕೂ ಹೆಚ್ ಎಂಎಸ್ ವಿದ್ಯಾಸಂಸ್ಥೆಗೂ ಯಾವುದೇ ಸಂಬಂಧವಿಲ್ಲ. ಇದು ಹೆಚ್ ಎಂಎಸ್ ವಿದ್ಯಾಸಂಸ್ಥೆಗೆ ಸೇರಿಲ್ಲ ಎಂದು ಸ್ಪಷ್ಟಪಡಿಸಿದರು.

ರಾಷ್ಟ್ರೀಯ ತನಿಖಾ ದಳ (ಎನ್ಐಎ) ರಾಜ್ಯದ ಭಟ್ಕಳ, ತುಮಕೂರು ಹಾಗೂ 5 ರಾಜ್ಯಗಳ ವಿವಿಧ ಪ್ರದೇಶಗಳಲ್ಲಿ ದಾಳಿ ನಡೆಸಿ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್- ಸಿರಿಯಾ (ISIS) ಭಯೋತ್ಪಾದಕ ಸಂಘಟನೆಯನ್ನು ಬೆಂಬಲಿಸುತ್ತಿದ್ದ ಇಬ್ಬರನ್ನು ಭಟ್ಕಳದಲ್ಲಿ ವಶಕ್ಕೆ ಪಡೆದಿದೆ. ಐಎಸ್ಐಎಸ್ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಆರೋಪದಡಿ 30 ವರ್ಷದ ಅಬ್ದುಲ್ ಮುಕ್ತದೀರ್ ಹಾಗೂ ಆತನ ಸಹೋದರನನ್ನು ಎನ್ಐಎ ವಶಕ್ಕೆ ಪಡೆದಿದೆ.

ಅದರಲ್ಲಿ ತುಮಕೂರಿನ ಯುನಾನಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಯನ್ನು ಐಸಿಸ್ ಜೊತೆ ಸಂಪರ್ಕ ಹೊಂದಿರುವ ಶಂಕೆ ಮೇಲೆ ವಶಕ್ಕೆ ಪಡೆಯಲಾಗಿದೆ.

SCROLL FOR NEXT