ರಾಜ್ಯ

ಐಎಸ್ಐಎಸ್ ನೊಂದಿಗೆ ಆನ್ ಲೈನ್ ಸಂಪರ್ಕ: ತಮಿಳುನಾಡು ವಿದ್ಯಾರ್ಥಿ ಬಂಧನ 

Srinivas Rao BV

ತಿರುಪತ್ತೂರ್: ಗುಪ್ತಚರ ಇಲಾಖೆಯ ಹಲವು ಗಂಟೆಗಳ ವಿಚಾರಣೆಯ ಬಳಿಕ, ಐಎಸ್ಐಎಸ್ ನೊಂದಿಗೆ ಆನ್ ಲೈನ್ ಸಂಪರ್ಕ ಹೊಂದಿದ್ದ ಆರೋಪದಡಿ ತಮಿಳುನಾಡು ವಿದ್ಯಾರ್ಥಿಯನ್ನು ಬಂಧಿಸಲಾಗಿದೆ. 

ಆಂಬೂರ್ ನಲ್ಲಿ ಈ ವಿದ್ಯಾರ್ಥಿಯನ್ನು ವಶಕ್ಕೆ ಪಡೆಯಲಾಗಿದ್ದು, ಮೀರ್ ಅನಾಸ್ ಅಲಿ (22) ಬಂಧಿತ ವಿದ್ಯಾರ್ಥಿಯಾಗಿದ್ದು, ರಾಣಿಪೇಟ್ ನಲ್ಲಿ ಮೇಲ್ವಿಶಾರಮ್ ನಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಮೂರನೇ ವರ್ಷದ ವ್ಯಾಸಂಗ ಮಾಡುತ್ತಿದ್ದಾನೆ.
  
ಅನಾಸ್ ಎಂಬಾತನ ಆನ್ ಲೈನ್ ಚಟುವಟಿಕೆಗಳು ಅನುಮಾನ ಮೂಡಿಸಿದ್ದ ಹಿನ್ನೆಲೆಯಲ್ಲಿ ಗುಪ್ತಚರ ಇಲಾಖೆಯ ಕಣ್ಗಾವಲು ಆತನ ಮೇಲಿತ್ತು. ಆತನನ್ನು ಮನೆಯಲ್ಲಿ ವಶಕ್ಕೆ ಪಡೆಯಲಾಗಿದ್ದು, ಅಲ್ಲಿಂದ 35 ಕಿ.ಮೀ ದೂರ ಕರೆದೊಯ್ದು ಹಲವು ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದೆ.

ಮುಸ್ಲಿಮೇತರರಲ್ಲಿ ಭಯೋತ್ಪಾದನೆ ಮೂಡಿಸಲು ಆತ ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಸಂಘಟನೆಯೊಂದಿಗೆ ಪಿತೂರಿಯಲ್ಲಿ ಭಾಗಿಯಾಗಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 

SCROLL FOR NEXT