ರಾಜ್ಯ

ಮೈಸೂರಿನ ಪ್ರತಿಷ್ಠಿತ ಲಲಿತ್ ಮಹಲ್ ಅರಮನೆ ತಾಜ್ ಗ್ರೂಪ್ ತೆಕ್ಕೆಗೆ ಸಾಧ್ಯತೆ 

Nagaraja AB

ಬೆಂಗಳೂರು: ಮೈಸೂರಿನಲ್ಲಿರುವ ಐಕಾನಿಕ್ ಲಲಿತ್ ಮಹಲ್ ಪ್ಯಾಲೇಸ್ ಅನ್ನು ಮುಂಬೈ ಮೂಲದ ಐಷಾರಾಮಿ ಹೋಟೆಲ್ ಗ್ರೂಪ್ ತಾಜ್ ಹೋಟೆಲ್ ಗೆ ಹಸ್ತಾಂತರಿಸುವ ಸಾಧ್ಯತೆಯಿದೆ. ಮಂಗಳವಾರ ನಡೆಯಲಿರುವ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ನಿರ್ಮಿಸಿರುವ ಐಕಾನಿಕ್ ಕಟ್ಟಡದ ಭವಿಷ್ಯ ನಿರ್ಧಾರವಾಗಲಿದೆ. 

ಲಲಿತ್ ಮಹಲ್ 1973 ರಲ್ಲಿ ರಾಜ್ಯ ಸರ್ಕಾರದ ನಿಯಂತ್ರಣಕ್ಕೆ ಬಂದಿತ್ತು.  ಆದರೆ ಮರುವರ್ಷವೇ ಕೇಂದ್ರ ಸರ್ಕಾರದ ಭಾರತ ಪ್ರವಾಸೋದ್ಯಮ ಅಭಿವೃದ್ಧಿ ನಿಗಮಕ್ಕೆ (ಐಟಿಡಿಸಿ) ಗುತ್ತಿಗೆ ನೀಡಲಾಗಿತ್ತು. ಆದಾಗ್ಯೂ, ಕೆಲವು ವರ್ಷಗಳ ಹಿಂದೆ, ಅದರ ಗುತ್ತಿಗೆ ಅವಧಿ ಮುಗಿಯುವ ಮೊದಲೇ, ಅದನ್ನು ಕರ್ನಾಟಕ ಸರ್ಕಾರಕ್ಕೆ ಹಿಂತಿರುಗಿಸಲಾಯಿತು. ಪ್ರಸ್ತುತ, ಇದನ್ನು ಪ್ರವಾಸೋದ್ಯಮ ಇಲಾಖೆಯ ಜಂಗಲ್ ಲಾಡ್ಜ್‌ಗಳು ಮತ್ತು ರೆಸಾರ್ಟ್‌ಗಳು ನಡೆಸುತ್ತಿವೆ.

ಇದೀಗ ಇದನ್ನು ಖಾಸಗಿ ಕಂಪನಿಗೆ ಹಸ್ತಾಂತರಿಸಲು ಉದ್ದೇಶಿಸಲಾಗಿದೆ. ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಎನ್‌ವಿ ಪ್ರಸಾದ್,  ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರ ನೇತೃತ್ವದಲ್ಲಿ ಇಂದು ಸಚಿವ ಸಂಪುಟ ಉಪ ಸಮಿತಿ ಸಭೆ ನಡೆಯಲಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುವುದು  ಎಂದು ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಎನ್ ವಿ ಪ್ರಸಾದ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು. 

ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಲಲಿತ ಮಹಲ್‌ ಗೆ 1921 ರಲ್ಲಿ ಕೃಷ್ಣರಾಜ ಒಡೆಯರ್ ಅವರು ಅಡಿಪಾಯ ಹಾಕಿದರು ಮತ್ತು ಇದನ್ನು ಮೈಸೂರು ಮಹಾರಾಜರ ವಿಶೇಷ ಅತಿಥಿಗಳಿಗೆ ಆತಿಥ್ಯ ವಹಿಸಲು ನಿರ್ಮಿಸಲಾಯಿತು. ಪ್ರಸ್ತುತ, ಒಂದು ಕೋಣೆಗೆ ರಾತ್ರಿಗೆ 3,000 ರಿಂದ 30,000 ರೂ.ಗಳವರೆಗೆ ವೆಚ್ಚವಾಗುತ್ತದೆ. ತಾಜ್ ಗ್ರೂಪ್ ನಿರ್ವಹಣೆ ಮತ್ತು ಕಾರ್ಯಾಚರಣೆಯ ಗುತ್ತಿಗೆಯನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ.ಮೈಸೂರಿಗೆ ಭೇಟಿ ನೀಡುವ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಆಕರ್ಷಿಸುವುದು ಇದರ ಉದ್ದೇಶವಾಗಿದೆ ಎಂದು ಮೂಲಗಳು ತಿಳಿಸಿವೆ. ಗುತ್ತಿಗೆ ನಿಯಮಗಳು ಮತ್ತು ಷರತ್ತುಗಳ ಬಗ್ಗೆಯೂ ಸಭೆ ನಿರ್ಧರಿಸುತ್ತದೆ.

ಏತನ್ಮಧ್ಯೆ,  ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ (ಕೆಎಸ್‌ಟಿಡಿಸಿ) ಅಧ್ಯಕ್ಷ ಕಾ.ಪು ಸಿದ್ದಲಿಂಗಸ್ವಾಮಿ ಅವರು ಲಲಿತ್ ಮಹಲ್ ಖಾಸಗೀಕರಣದ ಪ್ರಸ್ತಾಪದ ಬಗ್ಗೆ ಸುಳಿವಿಲ್ಲ. ಮಂಗಳವಾರದ ಸಭೆಗೆ ನಮ್ಮನ್ನು ಆಹ್ವಾನಿಸಲಾಗಿಲ್ಲ. ಇದು ಸರ್ಕಾರದ ಆಸ್ತಿ ಮತ್ತು ಇದು ಸರ್ಕಾರದ ಬಳಿಯೇ ಉಳಿಯಬೇಕು ಎಂದು ನಾನು ವೈಯಕ್ತಿಕವಾಗಿ ಭಾವಿಸುತ್ತೇನೆ ಎಂದರು.ಸಚಿವ ಆನಂದ್ ಸಿಂಗ್ ಪ್ರತಿಕ್ರಿಯೆಗೆ ಲಭ್ಯವಾಗಲಿಲ್ಲ.

SCROLL FOR NEXT