ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರು ನಗರಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಮೈಸೂರಿನ ರಸ್ತೆಗೆ ಹೊಸದಾಗಿ ಟಾರ್ ಹಾಕಲಾಗಿದೆ 
ರಾಜ್ಯ

ನಾಲ್ಕು ತಿಂಗಳ ಮೊದಲೇ ಮೈಸೂರಿನಲ್ಲಿ ದಸರಾ ಹಬ್ಬದ ವಾತಾವರಣ: ಎಲ್ಲಾ ಪ್ರಧಾನಿ ಮೋದಿ ಭೇಟಿ ಮಹಿಮೆ!

ಅರಮನೆ ನಗರಿ ಮೈಸೂರು ದಸರಾ ಹಬ್ಬದ ಸಮಯದಲ್ಲಿ ಕಂಗೊಳಿಸುವಂತೆಯೇ ಈಗ ಮದುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿದೆ. ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪಾಲ್ಗೊಳ್ಳುತ್ತಿರುವುದೇ ಇದಕ್ಕೆ ಕಾರಣ. 

ಮೈಸೂರು: ಅರಮನೆ ನಗರಿ ಮೈಸೂರು ದಸರಾ ಹಬ್ಬದ ಸಮಯದಲ್ಲಿ ಕಂಗೊಳಿಸುವಂತೆಯೇ ಈಗ ಮದುವಣಗಿತ್ತಿಯಂತೆ ಸಿಂಗಾರಗೊಳ್ಳುತ್ತಿದೆ. ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪಾಲ್ಗೊಳ್ಳುತ್ತಿರುವುದೇ ಇದಕ್ಕೆ ಕಾರಣ. 

ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಪಾರಂಪರಿಕ ನಗರಿ ಮೈಸೂರು ದಸರಾ ಶೈಲಿಯಲ್ಲಿ ಸಜ್ಜಾಗಿದೆ. ಮೈಸೂರು ವಿಮಾನ ನಿಲ್ದಾಣದಿಂದ ಹೋಟೆಲ್‌ಗೆ ಪ್ರಧಾನಿ ಬೆಂಗಾವಲು ಪಡೆ ಸಾಗುತ್ತಿದ್ದು ಅಲ್ಲಿ ಕೂಡ ಅದ್ದೂರಿಯಾಗಿ ಸಿದ್ದವಾಗುತ್ತಿದೆ.

ಮೈಸೂರು ಅರಮನೆ, ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ, ಮಹಾರಾಜ ಕಾಲೇಜು ಮೈದಾನ, ಪ್ರಮುಖ ಜಂಕ್ಷನ್‌ಗಳು ಮತ್ತು ಮಾರ್ಗದುದ್ದಕ್ಕೂ ಮರಗಳು ಹಬ್ಬದ ನೋಟವನ್ನು ಹೊಂದಿವೆ. ಪ್ರಧಾನಿ ಮೋದಿ ಮತ್ತು ಅವರ ಪರಿವಾರದವರಿಗೆ ಸುಗಮ ಚಾಲನೆ ಸಿಗಲು ಮೈಸೂರು ಸಿಟಿ ಕಾರ್ಪೊರೇಷನ್ ಆರ್ಟರಿಯಲ್ ರಸ್ತೆಗಳನ್ನು ಡಾಂಬರೀಕರಣ ಮಾಡುವ ಕೆಲಸ ನಡೆಯುತ್ತಿದೆ.

ಮೈಸೂರು ರಸ್ತೆ ಡಾಂಬರೀಕರಣಕ್ಕೆ 15 ಕೋಟಿ ರೂ: ಮೈಸೂರು ಸಿಟಿ ಕಾರ್ಪೊರೇಶನ್ ಬೀದಿ, ಜಂಕ್ಷನ್ ಗಳು ಮತ್ತು ಫುಟ್‌ಪಾತ್‌ಗಳಲ್ಲಿ ಬೀದಿದೀಪಗಳು ಪ್ರಕಾಶಮಾನವಾಗಿ ಉರಿಯುವಂತೆ ನೋಡಿಕೊಳ್ಳುತ್ತಿದೆ. ಮರಗಳನ್ನು ಟ್ರಿಮ್ ಮಾಡಲಾಗುತ್ತಿದೆ. ಪ್ರಮುಖ ಬೀದಿಗಳಲ್ಲಿ ಕಳೆಗಳನ್ನು ತೆಗೆದುಹಾಕಿದೆ. ಪಾಲಿಕೆ ಹಾಗೂ ತೋಟಗಾರಿಕೆ ಇಲಾಖೆಗಳು ಒಟ್ಟಾಗಿ ಸೇರಿ ಪ್ರಮುಖ ಜಂಕ್ಷನ್‌ಗಳಲ್ಲಿ ಅಲಂಕಾರಿಕ ಗಿಡಗಳನ್ನು ನೆಟ್ಟು ಸುಂದರಗೊಳಿಸಿದ್ದಾರೆ. ಅರಮನೆ ಮಂಡಳಿಯು ಅರಮನೆ ಆವರಣದ ಸೌಂದರ್ಯೀಕರಣ ಮತ್ತು ಅರಮನೆಯಲ್ಲಿ ಮೂಲ ಸೌಕರ್ಯಗಳನ್ನು ಸುಧಾರಿಸಿದೆ, ಅಂದು ಜೂನ್ 21ರಂದು 15,000ಕ್ಕೂ ಹೆಚ್ಚು ಜನರು ಮೋದಿ ಅವರೊಂದಿಗೆ ಯೋಗ ಮಾಡುತ್ತಾರೆ.

ಪ್ರಧಾನಿ ಆಗಮನ ಹಿನ್ನೆಲೆ ಭರ್ಜರಿ ತಯಾರಿ: ಮೋದಿ ಬರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ರಸ್ತೆಗಳ ಡಾಂಬರೀಕರಣಕ್ಕೆ 15 ಕೋಟಿ ಮತ್ತು ಯೋಗ ಕಾರ್ಯಕ್ರಮಕ್ಕೆ 6 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಜಂಕ್ಷನ್‌ಗಳ ಸೌಂದರ್ಯೀಕರಣ, ಹೊಸ ಬೀದಿದೀಪಗಳನ್ನು ಸರಿಪಡಿಸುವುದು ಮತ್ತು ಇತರ ಕಾಮಗಾರಿಗಳಿಗೆ ನಿಗಮವು ಹಣವನ್ನು ಖರ್ಚು ಮಾಡುತ್ತಿದೆ ಎಂದು ಶಾಸಕ ಎಸ್.ಎ.ರಾಮದಾಸ್ ಹೇಳಿದರು.

ಯೋಗ ಕಾರ್ಯಕ್ರಮಕ್ಕೆ ಪ್ರಧಾನಿ ಬರುತ್ತಾರೆ ಎಂದ ಮೇಲೆ ಪ್ರಪಂಚದ ಗಮನ ಸೆಳೆಯುತ್ತದೆ. ದಸರಾಕ್ಕೂ ಮುನ್ನ ಪ್ರವಾಸೋದ್ಯಮವನ್ನು ಉತ್ತೇಜನ ದೃಷ್ಟಿಯಿಂದ ಇಷ್ಟೊಂದು ಗಮನ ಹರಿಸಲಾಗಿದೆ. ಸಣ್ಣ ಸಿವಿಲ್ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಒಳಗೆ ನಿಷ್ಕ್ರಿಯಗೊಂಡ ಕಾರಂಜಿಗಳನ್ನು ಸರಿಪಡಿಸಿದ್ದೇವೆ. ಪ್ರಧಾನಿಯವರು ಇದೇ ಮೊದಲ ಬಾರಿಗೆ ಅರಮನೆಗೆ ಭೇಟಿ ನೀಡುತ್ತಿರುವ ಕಾರಣ ಉದ್ಯಾನವನ್ನು ಕೂಡ ಅಲಂಕರಿಸಲಾಗಿದೆ ಎಂದು ಅರಮನೆ ಮಂಡಳಿ ಉಪನಿರ್ದೇಶಕ ಸುಬ್ರಹ್ಮಣ್ಯ ತಿಳಿಸಿದ್ದಾರೆ.

ನಗರವನ್ನು ಸ್ವಚ್ಛವಾಗಿಡಲು ಮೈಸೂರಿನ ನಾಲ್ಕು ವಾರ್ಡ್‌ಗಳಲ್ಲಿ ಪೌರಕಾರ್ಮಿಕರನ್ನು ರಜಾದಿನಗಳಲ್ಲಿಯೂ ಕೆಲಸ ಮಾಡಲು ನಿಯೋಜಿಸಲಾಗಿದೆ. ಅಧಿಕಾರಿಗಳು ಸಂಪೂರ್ಣ ಪ್ಲಾಸ್ಟಿಕ್ ನಿಷೇಧಕ್ಕೆ ಒತ್ತಾಯಿಸುತ್ತಿದ್ದಾರೆ. ಮೇಯರ್ ಸುನಂದಾ ಪಾಲನೇತ್ರ ಮತ್ತಿತರರು ಕಾಮಗಾರಿಯ ಮೇಲುಸ್ತುವಾರಿ ನಡೆಸುತ್ತಿದ್ದಾರೆ.

ಪ್ರತಿಭಟನೆಗೆ ರೈತರು ಸಜ್ಜು: ಇಷ್ಟೆಲ್ಲಾ ಮೈಸೂರು ನಗರಿ ಸಜ್ಜುಗೊಳ್ಳುತ್ತಿದ್ದರೆ ಇತ್ತ ರೈತರು ತಮಗೆ ಸರ್ಕಾರ ಖಾತ್ರಿಪಡಿಸಿದ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಯನ್ನು ಕೂಡಲೇ ಬಿಡುಗಡೆ ಮಾಡುವಂತೆ ಕರ್ನಾಟಕ ಕಬ್ಬು ಬೆಳೆಗಾರರ ಸಂಘವು ಜೂನ್ 20 ರಂದು ಮೈಸೂರು ನ್ಯಾಯಾಲಯದ ಸಂಕೀರ್ಣದ ಮುಂಭಾಗದಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ನಿರ್ಧರಿಸಿದೆ.

ಕಬ್ಬು ಬೆಳೆಗಾರರ ಸಂಘ ಕುರುಬೂರು ಶಾಂತಕುಮಾರ್ ಮಾತನಾಡಿ, ಜೂನ್ 20 ಮತ್ತು 21 ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮಕ್ಕಾಗಿ ಪ್ರಧಾನಿ ನಗರಕ್ಕೆ ಭೇಟಿ ನೀಡಲಿದ್ದಾರೆ. ರೈತರ ಹಿತದೃಷ್ಟಿಯಿಂದ ಎಂಎಸ್‌ಪಿ ನೀತಿಯನ್ನು ತರಲು ಅವರನ್ನು ಒತ್ತಾಯಿಸಲು, ನಾವು ನಮ್ಮ ಉತ್ಪನ್ನಗಳನ್ನು ನ್ಯಾಯಾಲಯದ ಮುಂದೆ ಮಾರಾಟ ಮಾಡುವ ಮೂಲಕ ಒತ್ತಾಯಿಸುತ್ತೇವೆ. ಆ ದಿನವನ್ನು ಕರ್ಮಯೋಗಿಗಳ ರೈತ ನಾಯಕರ ದಿನವನ್ನಾಗಿ ಆಚರಿಸುತ್ತೇವೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಶಂಕಿತ ದಾಳಿಕೋರ 'ನರಕ ದೇಶ' ಆಫ್ಘಾನಿಸ್ತಾನದಿಂದ ಬಂದವನು, ಇದು ಭಯೋತ್ಪಾದಕ ಕೃತ್ಯ: ನ್ಯಾಷನಲ್ ಗಾರ್ಡ್ ಮೇಲೆ ದಾಳಿಗೆ Donald Trump ತೀವ್ರ ಖಂಡನೆ

ಇದು ಜೈಲಲ್ಲ, ಮದ್ಯದ ಫ್ಯಾಕ್ಟರಿ: ಕೈದಿಗಳಿಂದ ಮದ್ಯ ತಯಾರಿಕೆ? ಏನಾಗುತ್ತಿದೆ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ?

CM ಕುರ್ಚಿ ಕಸರತ್ತು: ಸಮಸ್ಯೆಗೆ ಪರಿಹಾರ ಇದ್ದೇ ಇರುತ್ತದೆ, ರಾಹುಲ್-ಸೋನಿಯಾ ಜೊತೆ ಚರ್ಚಿಸಿ ಗೊಂದಲ ಬಗೆಹರಿಸುವೆ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ: ಸಿದ್ದುಗೆ ಪರೋಕ್ಷ ಟಾಂಗ್ ಕೊಟ್ಟರೇ ಡಿಕೆಶಿ..?

ಮೊದಲು ಪರಮೇಶ್ವರ್ ಕೂಲಿ ಚುಕ್ತಾ ಮಾಡಲಿ: ನಂತರ ವಿಧಾನಸಭೆ ವಿಸರ್ಜಿಸಿ ಡಿಕೆಶಿ ನೇತೃತ್ವದಲ್ಲೇ ಚುನಾವಣೆಗೆ ಹೋಗೋಣ!

SCROLL FOR NEXT