ರಾಜ್ಯ

ಬೆಂಗಳೂರಿಗರ ಹಸಿರು ಪ್ರೀತಿ: ಒಂಬತ್ತು ದಿನಗಳಲ್ಲಿ ಬಿಬಿಎಂಪಿಯಿಂದ 1 ಲಕ್ಷ ಸಸಿ ಪಡೆದ ಸಾರ್ವಜನಿಕರು

Lingaraj Badiger

ಬೆಂಗಳೂರು: ವಿಶ್ವ ಪರಿಸರ ದಿನದ ನಂತರ ಕೇವಲ ಒಂಬತ್ತು ದಿನಗಳಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಅರಣ್ಯೀಕರಣವನ್ನು ಉತ್ತೇಜಿಸಲು ಸಾರ್ವಜನಿಕರಿಗೆ ಒಂದು ಲಕ್ಷ ಮರದ ಸಸಿಗಳನ್ನು ವಿತರಿಸಿದೆ.

ಐಟಿ ಸಿಟಿ ತನ್ನ 'ಉದ್ಯಾನ ನಗರಿ' ಮತ್ತು 'ಪಿಂಚಣಿದಾರರ ಸ್ವರ್ಗ' ಎಂಬ 'ಹಳೆಯ ಕಾಲದ' ಟ್ಯಾಗ್‌ ಉಳಿಸಿಕೊಳ್ಳಲು ಬೆಂಗಳೂರಿಗರು ಒಂಬತ್ತು ದಿನಗಳಲ್ಲಿ ಬಿಬಿಎಂಪಿಯಿಂದ 1 ಲಕ್ಷ ಸಿಸಿಗಳನ್ನು ಪಡೆದಿದ್ದಾರೆ.

ಜೂನ್ 5 ರಿಂದ ಪಾಲಿಕೆಯ ನರ್ಸರಿಯಲ್ಲಿ  8x12 ಅಡಿ ಅಳತೆಯ ಒಂದು ಲಕ್ಷ ಮರದ ಸಸಿಗಳನ್ನು ಸಾರ್ವಜನಿಕರು ಉಚಿತವಾಗಿ ತೆಗೆದುಕೊಂಡು ಹೋಗಿದ್ದಾರೆ ಎಂದು ಬಿಬಿಎಂಪಿ ಅರಣ್ಯ ಉಪ ಸಂರಕ್ಷಣಾಧಿಕಾರಿ ಸರೀನಾ ಸಕ್ಕಲಿಗೆರ್ ಅವರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

"ಹೊಂಗೆ, ಬೇವು, ಜಾಮೂನ್, ಹೂವಿನ ಜಾತಿಯ ಟಬೂಬಿಯಾ ಮತ್ತು ಮಹೋಗಾನಿ ಮುಂತಾದ ಸಸಿಗಳನ್ನು ವಿತರಿಸಲಾಯಿತು. ಪಾಲಿಕೆಯು 5.5 ಲಕ್ಷ ಮರದ ಸಸಿಗಳನ್ನು ಸಣ್ಣ ಚೀಲಗಳಲ್ಲಿ ಈ ಉದ್ದೇಶಕ್ಕಾಗಿ ಬೆಳೆಸಿದೆ ಮತ್ತು ಇದುವರೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಾನ್ಸೂನ್ ಆರಂಭ ಆಗಿದ್ದು, ಸಸಿಗಳನ್ನು ನೆಡುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಸಿಗಳನ್ನು ನೆಡಲು ಮತ್ತು ಕಾಳಜಿ ವಹಿಸಲು ಮುಂದೆ ಬರುವ ಸಾರ್ವಜನಿಕರು ಮತ್ತು ಸಂಸ್ಥೆಗಳನ್ನು ಬಿಬಿಎಂಪಿ ಪ್ರೋತ್ಸಾಹಿಸುತ್ತದೆ ಎಂದು ಮಹಿಳಾ ಅಧಿಕಾರಿ ಹೇಳಿದ್ದಾರೆ.

2021-2022ರಲ್ಲಿ ಪಾಲಿಕೆಯು ಅರಣ್ಯೀಕರಣ ಯೋಜನೆಗೆ 32.53 ಕೋಟಿ ರೂಪಾಯಿ ಮೀಸಲಿಟ್ಟಿದ್ದು, ಅದರಲ್ಲಿ ಒಂಬತ್ತು ಕೋಟಿ ರೂಪಾಯಿ ಅನ್ನು ರಸ್ತೆ ಬದಿ, ಮೈದಾನದ ಸುತ್ತಮುತ್ತ ಮತ್ತು ಇತರೆ ಕಡೆ ಮರ ನೆಡುವುದು ಸೇರಿದೆ ಎಂದು ವರದಿಯಾಗಿದೆ.

SCROLL FOR NEXT