ರಾಜ್ಯ

ದೇವನಾಗರಿ ಲಿಪಿಯಲ್ಲಿ ರಸ್ತೆ ಮಾರ್ಗಸೂಚಿ ಫಲಕಗಳಿಗೆ ಒತ್ತಾಯಿಸಿ ಕೊಂಕಣಿ ಭಾಷಿಕರ ಪ್ರತಿಭಟನೆ

Nagaraja AB

ಕಾರವಾರ: ಕಾರವಾರದ ರಸ್ತೆ ಮಾರ್ಗಸೂಚಿ ಫಲಕಗಳನ್ನು ಕನ್ನಡ ಹಾಗೂ ದೇವನಾಗರಿ ಲಿಪಿಯಲ್ಲಿ ಬರೆಯುವಂತೆ ಆಗ್ರಹಿಸಿ ಕೊಂಕಣಿ ಭಾಷಿಕರು ಪ್ರತಿಭಟನೆ ನಡೆಸಿದರು. ಇದಕ್ಕೆ ಕಾರವಾರ ಪುರಸಭೆ ಪ್ರಚೋದನೆಯೇ ಕಾರಣ.  ಮೊದಲು ಎರಡು ಭಾಷೆಯಲ್ಲೂ ಮಾರ್ಗಸೂಚಿ ಫಲಕಗಳಿತ್ತು. ಆದರೆ, ಕನ್ನಡ ಪರ ಸಂಘಟನೆಗಳ ಪ್ರತಿಭಟನೆ ನಂತರ ಕನ್ನಡ ಅಕ್ಷರಗಳನ್ನು ಉಳಿಸಿಕೊಳ್ಳಲು ದೇವನಾಗರಿ ಲಿಪಿಯನ್ನು ಅಳಿಸಿತ್ತು.

ಇದು ಕೊಂಕಣಿ ಮಾತನಾಡುವ ಜನರನ್ನು ಕೆರಳಿದ್ದು, ಸೈನ್‌ಬೋರ್ಡ್‌ಗಳಲ್ಲಿ ಮರಳಿ ದೇವನಾಗರಿ ಲಿಪಿಯನ್ನು  ತರಬೇಕೆಂದು ಒತ್ತಾಯಿಸಿದ್ದಾರೆ.  ಇದೀಗ ಕಾರವಾರಾದ್ಯಂತ ಪ್ರತಿಭಟನೆ ವ್ಯಾಪಿಸಿದ್ದು, ಕನ್ನಡಿಗರ ಒತ್ತಡಕ್ಕೆ ಮಣಿದು ಪುರಸಭೆ ನುಣುಚಿಕೊಂಡಿದ್ದು, ಕೊಂಕಣಿ ಭಾಷೆಗೆ ಅಪಮಾನ ಮಾಡಿದೆ ಎಂದು ಆರೋಪಿಸಿ ನೂರಾರು ಜನರು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದ್ದಾರೆ.

ಪುರಸಭೆಯವರು 15 ದಿನಗಳಲ್ಲಿ ದೇವನಾಗರಿ ಲಿಪಿಯಲ್ಲಿ ಬೋರ್ಡ್‌ಗಳನ್ನು ಮರುಸ್ಥಾಪಿಸಬೇಕು, ಇಲ್ಲದಿದ್ದರೆ ನಾವು ಚಳವಳಿಯನ್ನು ಪ್ರಾರಂಭಿಸುತ್ತೇವೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.  ತಮ್ಮ ಬೇಡಿಕೆಯನ್ನು ಈಡೇರಿಸದಿದ್ದರೆ ಕಾರವಾರದ ಜನರು ವಿಶಾಲ ಗೋಮಾಂತಕ ಚಳವಳಿಯಲ್ಲಿ ತಮ್ಮನ್ನು ಗುರುತಿಸಿಕೊಳ್ಳುತ್ತಾರೆ ಅಥವಾ ಗೋವಾದ ಭಾಗವಾಗುತ್ತಾರೆ ಎಂದು ಕೊಂಕಣಿ ಕಲಾವಿದರ ವೃಂದದಂತಹ ಕೆಲವು ಸಂಘಟನೆಗಳು ಎಚ್ಚರಿಸಿದ್ದಾರೆ.  

ಕೊಂಕಣಿಯನ್ನು ನಿರ್ಲಕ್ಷಿಸಿದರೆ, ಜನರು ಗೋವಾದೊಂದಿಗೆ ಇರಲು ಬಯಸುತ್ತಾರೆ. ಆಗ ಕರ್ನಾಟಕಕ್ಕೆ ದೊಡ್ಡ ಪೆಟ್ಟು ಬೀಳಲಿದೆ ಎಂದು  ಕೊಂಕಣಿ ಕಲಾವಿದರ ವೃಂದದ ಸದಸ್ಯ ದತ್ತಾತ್ರೇಯ ನಾಯಕ್ ಎಚ್ಚರಿಸಿದರು.

ಈ ವಿಚಾರದಲ್ಲಿ ಮೂರನೇ ವ್ಯಕ್ತಿಯ ಹಸ್ತಕ್ಷೇಪ ಬೇಡ ಎಂದು ಕೊಂಕಣಿ ಮರಾಠ ಮಂಡಳಿ ಪ್ರತಿನಿಧಿ ಸಂಜಯ ಸಾಳುಂಕೆ ಹೇಳಿದರು. ಮಹಾಜನ್ ವರದಿಯೇ ಅಂತಿಮ, ಗೋವಾ ಅಥವಾ ಮಹಾರಾಷ್ಟ್ರಕ್ಕೆ ಸೇರುವ ಪ್ರಶ್ನೆಯೇ ಇಲ್ಲ. ಕಾರವಾರ ಕರ್ನಾಟಕದ ಅವಿಭಾಜ್ಯ ಅಂಗ. ಆದರೆ ಸೂಚನಾ ಫಲಕದಲ್ಲಿ ಕೊಂಕಣಿಯೂ ಇರಬೇಕು ಎಂದು ವಾದಿಸಿದರು.

SCROLL FOR NEXT