ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿ(ಸಂಗ್ರಹ ಚಿತ್ರ)
ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಎರಡು ದಿನಗಳ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರು, ಮೈಸೂರುಗಳಲ್ಲಿ ಕಟ್ಚೆಚ್ಚರ ವಹಿಸಲಾಗಿದೆ. ಬಿಜೆಪಿ ಪಾಳಯದಲ್ಲಿ ಸಂಭ್ರಮ ಮನೆಮಾಡಿದೆ. ಪ್ರಧಾನಿ ಸ್ವಾಗತಕ್ಕೆ ಬಿಜೆಪಿ ನಾಯಕರು ಸಜ್ಜಾಗಿದ್ದಾರೆ.
ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ, ಬಿಜೆಪಿ, ಪ್ರಧಾನಿಯವರನ್ನು ಸದಾ ಟೀಕೆ ಮಾಡುವ ವಿಪಕ್ಷ ನಾಯಕರು ಸಿದ್ದರಾಮಯ್ಯನವರು ಬೆಂಗಳೂರಿಗೆ ಆಗಮಿಸಿರುವ ಮೋದಿಯವರಿಗೆ ಸಾಲುಸಾಲು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಹಲವು ಪ್ರಶ್ನೆಗಳನ್ನು ಕೇಳಿ ಉತ್ತರ ಹೇಳಿ ಮೋದಿ, #Answer Modi ಹ್ಯಾಶ್ ಟಾಗ್ ಮಾಡಿ ಪೋಸ್ಟ್ ಮಾಡಿದ್ದಾರೆ.
ಸಿದ್ದರಾಮಯ್ಯನವರ ಪ್ರಶ್ನೆಗಳು:
- ಬೆಂಗಳೂರು ಉಪನಗರ ರೈಲು ಯೋಜನೆ ನೆನೆಗುದಿಗೆ ಬೀಳಲು ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಕಾರಣವೇ,
- ಹಿಂದಿ ಭಾಷೆಯನ್ನು ಹೇರಲು ಹೊರಟಿರುವ ಸಂದರ್ಭದಲ್ಲಿ ಕನ್ನಡದ ಅತ್ಮಿತೆ ಬಗ್ಗೆ ನಿಮ್ಮ ನಿಲುವೇನು, ಅಮಿತ್ ಶಾ ಅವರ ಹಿಂದಿ ಹೇರಿಕೆಗೆ ನಿಮ್ಮ ಮೌನವೇಕೆ,
- ಬೆಂಗಳೂರು ಸುತ್ತಮುತ್ತ ಭಾಗಗಳಿಗೆ ನೀರುಣಿಸುವ ಮೇಕೆದಾಟು ಯೋಜನೆ ಜಾರಿಗೆ ವಿಳಂಬವೇಕೆ,
- ರಾಜ್ಯ ಸರ್ಕಾರವೇಕೆ ಕರಾಳ ಕೃಷಿ ಕಾಯ್ದೆಯನ್ನು ರದ್ದುಪಡಿಸಿಲ್ಲ,
- ಬೆಂಗಳೂರು ಉಪನಗರ ರೈಲು ಯೋಜನೆಗೆ ಶೇ.20ರಷ್ಟು ವೆಚ್ಚವನ್ನು ಕೇಂದ್ರ ಸರ್ಕಾರ ನೀಡಿದೆಯೇ,
- ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕೇಳಿಬಂದ ಶೇ.40ರಷ್ಟು ಕಮಿಷನ್ ಆರೋಪ ಬಗ್ಗೆ ತನಿಖೆ ಯಾವಾಗ,
- ಜಿಎಸ್ ಟಿ ಪರಿಹಾರ ಮೂರು ವರ್ಷ ಮುಂದುವರಿಸಬೇಕೆಂದು ಕೇಳಿದ್ದಕ್ಕೆ ನಿಮ್ಮ ಉತ್ತರವೇನು, ಜಿಎಸ್ ಟಿ ಪರಿಹಾರ ರಾಜ್ಯದ ಜನರ ಮೇಲೆ ಹೊರೆಯಲ್ಲವೇ,
- ಜಿಎಸ್ಟಿ ಜಾರಿ, ಕೊರೋನಾದಿಂದ, ನೋಟು ಅನಾಣ್ಯೀಕರಣದಿಂದ ಉದ್ಯೋಗ ಕಳೆದುಕೊಂಡಿದ್ದಕ್ಕೆ ಯಾರು ಹೊಣೆ, ಕರ್ನಾಟಕದಿಂದ ಇಷ್ಟೊಂದು ತೆರಿಗೆ ಸಂಗ್ರಹವಾಗುತ್ತಿದ್ದರೂ ಕೇಂದ್ರದಿಂದ ರಾಜ್ಯಕ್ಕೆ ಏಕೆ ಕಡಿಮೆ ಕೊಡುಗೆ ಬರುತ್ತಿದೆ
- ಹೀಗೆ ಸಾಲು ಸಾಲು ಪ್ರಶ್ನೆಗಳನ್ನು ಕೇಳಿ ಅದಕ್ಕೆಲ್ಲಾ ಉತ್ತರಿಸುವಂತೆ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos