ರಾಜ್ಯ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿ ಮರಿ ಶವವಾಗಿ ಪತ್ತೆ

Manjula VN

ಮೈಸೂರು: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ಉಪವಿಭಾಗದಲ್ಲಿ ಹುಲಿ ಮರಿಯೊಂದು ಶವವಾಗಿ ಪತ್ತೆಯಾಗಿದೆ.

ಬೇಗೂರು ಅರಣ್ಯ ವ್ಯಾಪ್ತಿಯ ಚೌಡಳ್ಳಿ ಬೀಟ್‌ನಲ್ಲಿರುವ ಬೈರಿಗದ್ದೆ ಪಿಂಚಿಂಗ್‌ನಲ್ಲಿ ಅರಣ್ಯ ಸಿಬ್ಬಂದಿಗಳು ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ಹುಲಿ ಮರಿಯ ಶವ ಪತ್ತೆಯಾಗಿದೆ. ಕೂಡಲೇ ಸಿಬ್ಬಂದಿಗಳು ಮೇಲಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ತಿಳಿದ ಮೈಸೂರು ಸಿಸಿಎಫ್ ಮಾಲತಿ ಪ್ರಿಯಾ, ಬಿಟಿಆರ್ ನಿರ್ದೇಶಕ ಪಿ ರಮೇಶ್ ಕುಮಾರ್, ಎನ್‌ಟಿಸಿಎ ಪ್ರತಿನಿಧಿ ಪ್ರಸನ್ನ ಮತ್ತು ವನ್ಯಜೀವಿ ವೈದ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಎನ್‌ಟಿಸಿಎ ಮಾರ್ಗಸೂಚಿಯಂತೆ ಮರಣೋತ್ತರ ಪರೀಕ್ಷೆ ನಡೆಸಿದರು.

ಕಾಡು ಪ್ರಾಣಿಗಳು ದಾಳಿ ಮಾಡಿ ಹುಲಿ ಮರಿಯನ್ನು ಹತ್ಯೆ ಮಾಡಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ಹುಲಿ ಶವದ ಮಾದರಿಗಳನ್ನು ಮೈಸೂರಿನ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ಮತ್ತು ಹೈದರಾಬಾದ್‌ನಲ್ಲಿರುವ ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್‌ಗೆ ಪರೀಕ್ಷೆಗಾಗಿ ಕಳುಹಿಸಲಾಗಿದೆ.

SCROLL FOR NEXT