ರಾಜ್ಯ

ನೀಲಗಿರಿ ಬೆಳೆಯ ಮೇಲಿನ ನಿಷೇಧ ಹಿಂಪಡೆಯಲು ಸರ್ಕಾರಕ್ಕೆ ಮನವಿ: ತಾರಾ ಅನುರಾಧ

Sumana Upadhyaya

ಬೆಂಗಳೂರು: 2017ರ ನೀಲಗಿರಿ ಬೆಳೆಯ ನೀಲಗಿರಿ ಕೃಷಿಮೇಲಿನ ನಿಷೇಧವನ್ನು ಹಿಂಪಡೆಯುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ತಾರಾ ತಿಳಿಸಿದ್ದಾರೆ. 

ಸ್ವರ್ಣ ಮಹೋತ್ಸವ ಕಾರ್ಯಕ್ರಮದ ಪ್ರಕಟಣೆಯಲ್ಲಿ ಮಾತನಾಡಿದ ಅವರು, ಬೆಳೆದ ಮರಗಳನ್ನು ಕಾಗದದ ಕೈಗಾರಿಕೆಗಳಿಗೆ ವಸ್ತುವಾಗಿ ಬಳಸಲಾಗುತ್ತದೆ. ಅರಣ್ಯ ಇಲಾಖೆಯು ಅರಣ್ಯೀಕರಣಕ್ಕಾಗಿ ತಮ್ಮ ನಿಯಂತ್ರಣದಲ್ಲಿರುವ 40,000 ಹೆಕ್ಟೇರ್‌ಗಳನ್ನು ಹೊರತುಪಡಿಸಿ 10,000 ಹೆಕ್ಟೇರ್ ಭೂಮಿಯನ್ನು ಹಸ್ತಾಂತರಿಸಿದೆ ಎಂದು ತಿಳಿಸಿದರು.

ರಾಜ್ಯಾದ್ಯಂತ ಭೂಮಿಯನ್ನು ಕ್ಯಾಸುರಿನಾ, ಮೆಲಿಯಾ ದುಬಿಯಾ, ಸುಬಾಬುಲ್ ಮತ್ತು ಇತರ ಹಲವು ತಳಿಗಳ ಮರಗಳನ್ನು ಬೆಳೆಯಲು ಬಳಸಿಕೊಳ್ಳಲಾಗುವುದು ಎಂದರು.

2017ರ ನಂತರ ಅರಣ್ಯ ನಿಗಮ ನಷ್ಟವನ್ನು ಅನುಭವಿಸುತ್ತಿದ್ದು ನಿಶ್ಚಿತ ಠೇವಣಿ ಮೊತ್ತ ಕೂಡ ಕುಸಿತವಾಗಿದೆ. ಈಗ ಹೊಸ ಗಿಡ ನೆಡುವ ಯೋಜನೆ ಮತ್ತು ಜಾರಿಯನ್ನು ಪರಿಚಯಿಸುವ ಮೂಲಕ ನಿಗದಿತ ಠೇವಣಿ ಮೊತ್ತವನ್ನು 100 ಕೋಟಿ ರೂಪಾಯಿಗೆ ಏರಿಕೆ ಮಾಡಲಾಗಿದೆ. ಇನ್ನು ಮುಂದೆ ನಿಶ್ಚಿತ ಠೇವಣಿ ಹಣವನ್ನು ಬೇರೆ ಕೆಲಸಗಳಿಗೆ ಬಳಸಿಕೊಳ್ಳಲಾಗುವುದಿಲ್ಲ ಎಂದು ಕೂಡ ಹೇಳಿದರು. 

SCROLL FOR NEXT