'ಬ್ಯೂಲಿಯು' ಪಾರಂಪರಿಕ ಕಟ್ಟಡ 
ರಾಜ್ಯ

ಬೆಂಗಳೂರಿನಲ್ಲಿರುವ ಪ್ರಧಾನ ಅಂಚೆ ಕಚೇರಿಯ 'ಬ್ಯೂಲಿಯು' ಪಾರಂಪರಿಕ ಕಟ್ಟಡ ದಶಕಗಳ ನಂತರ ಸಾರ್ವಜನಿಕರಿಗೆ ಮುಕ್ತ

ಮುಂದಿನ ಬಾರಿ ನೀವು ಬೆಂಗಳೂರಿನಲ್ಲಿರುವ ಕರ್ನಾಟಕದ ಪ್ರಧಾನ ಅಂಚೆ ಕಚೇರಿಗೆ ಭೇಟಿ ನೀಡಿದರೆ ನಿಮಗೆ ಆಶ್ಚರ್ಯವಾಗುತ್ತದೆ. 1860 ರ ದಶಕದಲ್ಲಿ ನಿರ್ಮಿಸಲಾದ ಭವ್ಯವಾದ 'ಬ್ಯೂಲಿಯು' ಪಾರಂಪರಿಕ ಕಟ್ಟಡ ದಶಕಗಳ ನಂತರ ನವೀಕರಣಗೊಂಡು ಸಾರ್ವಜನಿಕ ಬಳಕೆಗೆ ಮುಕ್ತಗೊಂಡಿದೆ. 

ಬೆಂಗಳೂರು: ಮುಂದಿನ ಬಾರಿ ನೀವು ಬೆಂಗಳೂರಿನಲ್ಲಿರುವ ಕರ್ನಾಟಕದ ಪ್ರಧಾನ ಅಂಚೆ ಕಚೇರಿಗೆ (Karnataka chief post master general office) ಭೇಟಿ ನೀಡಿದರೆ ನಿಮಗೆ ಆಶ್ಚರ್ಯವಾಗುತ್ತದೆ. 1860 ರ ದಶಕದಲ್ಲಿ ನಿರ್ಮಿಸಲಾದ ಭವ್ಯವಾದ 'ಬ್ಯೂಲಿಯು' (‘Beaulieu’) ಪಾರಂಪರಿಕ ಕಟ್ಟಡ ದಶಕಗಳ ನಂತರ ನವೀಕರಣಗೊಂಡು ಸಾರ್ವಜನಿಕ ಬಳಕೆಗೆ ಮುಕ್ತಗೊಂಡಿದೆ. 

ಪಾರಂಪರಿಕ ಉತ್ಸಾಹಿ ಮತ್ತು ‘ಹೆರಿಟೇಜ್ ಬೇಕು’ ಸಂಸ್ಥಾಪಕರಾದ ಪ್ರಿಯಾ ಚೆಟ್ಟಿ-ರಾಜಗೋಪಾಲ್ ಅವರು ಕಳೆದ ವರ್ಷ ಫೆಬ್ರವರಿ 2021 ರಿಂದ ಉನ್ನತ ಅಂಚೆ ಅಧಿಕಾರಿಗಳೊಂದಿಗೆ ಚರ್ಚಿಸಿ ಅದನ್ನು ನವೀಕರಿಸಿ ಮರುಬಳಕೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. 

ಶೇಷಾದ್ರಿ ರಸ್ತೆಯಿಂದ ಹೊರಗಿರುವ ಪ್ರವೇಶ ದ್ವಾರವನ್ನು ಅಂಚೆ ಇಲಾಖೆ ಕಳೆದ ವಾರ ತೆರೆಯಿತು. ಹೊಸ ಪ್ರವೇಶದ್ವಾರವು ಅರಮನೆ ರಸ್ತೆಗೆ ಸಮಾನಾಂತರವಾಗಿ ಸಾಗುತ್ತದೆ ಮುಂದುವರಿದ ತಾಂತ್ರಿಕ ಶಿಕ್ಷಣ ಕೇಂದ್ರ, ಮಹಿಳಾ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪಕ್ಕದಲ್ಲಿದೆ. 

ಫ್ರೆಂಚ್ ಹೆಸರಿನ ಐತಿಹಾಸಿಕ ಕಟ್ಟಡವನ್ನು ಬ್ಯೂಟಿಫುಲ್ ಪ್ಲೇಸ್ 'ಸುಂದರ ಸ್ಥಳ' ಎಂದು ಅನುವಾದಿಸಲಾಗಿದೆ, ಇದನ್ನು 1966 ರಲ್ಲಿ ಮುಖ್ಯ ಪ್ರಧಾನ ಅಂಚೆ ಕಚೇರಿಯಾಗಿ ಪರಿವರ್ತಿಸಲಾಯಿತು. ಕರ್ನಾಟಕ ವೃತ್ತದ ಮುಖ್ಯಸ್ಥ, ರಾಜೇಂದ್ರ ಎಸ್ ಕುಮಾರ್ TNIE ಗೆ ಮಾಹಿತಿ ನೀಡಿ, ಹೊಸ ಪ್ರವೇಶದ್ವಾರವು ಹೆಚ್ಚಿನ ಸಂದರ್ಶಕರು ಮತ್ತು ಸಿಬ್ಬಂದಿಯನ್ನು ಆಕರ್ಷಿಸುವಲ್ಲಿ ಸಕಾರಾತ್ಮಕ ಪಾತ್ರವನ್ನು ವಹಿಸುತ್ತದೆ ಎಂದು ಹೇಳಿದರು. ಕಛೇರಿಗೆ, ವಿಧಾನಸೌಧ ಮೆಟ್ರೋ ನಿಲ್ದಾಣವು ಈ ಪ್ರವೇಶದ್ವಾರದಿಂದ ಕೇವಲ 800 ಮೀಟರ್ ದೂರದಲ್ಲಿದೆ. ಸ್ಥಳವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿದ್ದೇವೆ. ಗೋಡೆಯ ಮೇಲೆ ಪೇಂಟಿಂಗ್ ನ್ನು ಹಾಕಿದ್ದೇವೆ. ಈ ರಸ್ತೆಯ ಹಿಂದೆ ನಡೆಯುವವರು ಸಹ ಇಲ್ಲಿ ರಚಿಸಲಾದ ತೆರೆಯುವಿಕೆಯ ಮೂಲಕ ಈ ಪರಂಪರೆಯ ರಚನೆಯನ್ನು ವೀಕ್ಷಿಸಬಹುದು. 

ಕಳೆದ ವರ್ಷದ ಆರಂಭದಲ್ಲಿ, ಸುರಿಯುವ ಮಳೆಯಲ್ಲಿ, ಕಟ್ಟಡದ ಸರಿಯಾದ ನೋಟವನ್ನು ಅದರ ಹಿಂದಿನ ಭಾಗದಿಂದ ಮಾತ್ರ ಪಡೆಯಲಾಗಿದೆ ಎಂದು ನನಗೆ ಇದ್ದಕ್ಕಿದ್ದಂತೆ ಹೊಳೆಯಿತು. ಕೆಲವು ಸಂಶೋಧನೆಯ ನಂತರ ಇದು ದಶಕಗಳ ಹಿಂದೆ ಮುಚ್ಚಲ್ಪಟ್ಟ ಮೂಲ ಪ್ರವೇಶ ಬಗ್ಗೆ ತಿಳಿಯಿತು ಎನ್ನುವ ರಾಜಗೋಪಾಲ್, ತಮ್ಮ ಶಿಫಾರಸಿನ ಮೇರೆಗೆ ಅಂಚೆ ಇಲಾಖೆ ಕ್ರಮ ಕೈಗೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಈ ಬದಲಾವಣೆಯು ಪಾರಂಪರಿಕ ಕಟ್ಟಡದ ಬಗ್ಗೆ ಜನರ ಗ್ರಹಿಕೆಯಲ್ಲಿ ದೊಡ್ಡ ವ್ಯತ್ಯಾಸವನ್ನು ಉಂಟುಮಾಡಬಹುದು ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

ಬಿಗ್ ಬಾಸ್ 12 ಫಿನಾಲೆ ಹೊತ್ತಲ್ಲಿ ಕಿಚ್ಚ ಸುದೀಪ್‌ಗೆ ಸಂಕಷ್ಟ ತಂದ 'ರಣಹದ್ದು'!

CM ಕುರ್ಚಿ ಗುದ್ದಾಟ: ಅಗತ್ಯವಿದ್ದಾಗ ಸಿದ್ದರಾಮಯ್ಯ, ಶಿವಕುಮಾರ್‌ರನ್ನು ಮಾತುಕತೆಗೆ ಕರೆಯಲಾಗುವುದು; ಮಲ್ಲಿಕಾರ್ಜುನ ಖರ್ಗೆ

ಉತ್ತರ ಪ್ರದೇಶ: "ಆಕ್ಷೇಪಾರ್ಹ" ಸ್ಥಿತಿಯಲ್ಲಿದ್ದ ಪ್ರೇಮಿಗಳನ್ನು ಹೊಡೆದು ಕೊಂದ ಕುಟುಂಬಸ್ಥರು!

ಮಹಾತ್ಮ ಗಾಂಧಿ ಸಂದೇಶಗಳು ಹಿಂದೆಂದಿಗಿಂತಲೂ ಈಗ ಹೆಚ್ಚು ಪ್ರಸ್ತುತ: ಸಬರಮತಿ ಆಶ್ರಮದಲ್ಲಿ ಜರ್ಮನ್ ಚಾನ್ಸೆಲರ್!

SCROLL FOR NEXT