ರಾಜ್ಯ

ರಾಜ್ಯದಲ್ಲಿ ಡೇಟಾ ಕೇಂದ್ರ ಸ್ಥಾಪಿಸಲು ಎಸ್‌ಟಿಟಿ ಜಿಡಿಸಿ ಇಂಡಿಯಾದಿಂದ 1,500 ಕೋಟಿ ರೂ. ಹೂಡಿಕೆ

Lingaraj Badiger

ಬೆಂಗಳೂರು: ಎಸ್‌ಟಿಟಿ ಗ್ಲೋಬಲ್ ಡಾಟಾ ಸೆಂಟರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್(ಎಸ್‌ಟಿಟಿ ಜಿಡಿಸಿ ಇಂಡಿಯಾ) ಕರ್ನಾಟಕದಲ್ಲಿ ಡಾಟಾ ಸೆಂಟರ್‌ಗಳನ್ನು ಸ್ಥಾಪಿಸುವ ಗುರಿ ಹೊಂದಿದ್ದು, ಸುಮಾರು 1,500 ಕೋಟಿ ರೂ. ಹೂಡಿಕೆ ಮಾಡಲಿದೆ.

ಮುಂದಿನ ಎಂಟರಿಂದ ಹತ್ತು ವರ್ಷಗಳಲ್ಲಿ ಹಲವು ಹಂತಗಳಲ್ಲಿ ಬಂಡವಾಳ ಹೂಡಿಕೆ ಮಾಡಲು ಯೋಜಿಸಲಾಗಿದೆ ಮತ್ತು ನಿರ್ಮಾಣ ಹಂತದಲ್ಲಿ 1000 ಜನರಿಗೆ ಮತ್ತು ಕಾರ್ಯಾಚರಣೆಯಲ್ಲಿ 200 ಜನರಿಗೆ (ನೇರ ಮತ್ತು ಪರೋಕ್ಷ) ಉದ್ಯೋಗ ನೀಡಲಿದೆ ಎಂದು ಡೇಟಾ ಸೆಂಟರ್ ಸೇವೆ ಒದಗಿಸುವ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ನಗರದಲ್ಲಿ ನಡೆಯುತ್ತಿರುವ 'ಇನ್ವೆಸ್ಟ್ ಕರ್ನಾಟಕ 2022', ಜಾಗತಿಕ ಹೂಡಿಕೆದಾರರ ಸಮಾವೇಶದ ಮೂರನೇ ದಿನವಾದ ಶುಕ್ರವಾರ ಈ ಸಂಬಂಧ ರಾಜ್ಯ ಸರ್ಕಾರದೊಂದಿಗೆ ಎಸ್‌ಟಿಟಿ ಜಿಡಿಸಿ ಇಂಡಿಯಾ ಒಪ್ಪಂದಕ್ಕೆ ಸಹಿ ಹಾಕಿದೆ.

ಮುಂಬೈನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿರುವ ಈ ಕಂಪನಿಯು, ಕೊಲೊಕೇಶನ್, ಕ್ಯಾರಿಯರ್ ಮತ್ತು ನೆಟ್‌ವರ್ಕಿಂಗ್ ಮತ್ತು ಮೇಲ್ವಿಚಾರಣೆ ಸೇರಿದಂತೆ ತಾಂತ್ರಿಕ ಬೆಂಬಲ ಸೇವೆಗಳನ್ನು ನೀಡುತ್ತದೆ.

SCROLL FOR NEXT