ರಾಜ್ಯ

ಬಿಜೆಪಿ ಹಿರಿಯ ನಾಯಕಿ ಸುಶೀಲಾ ಶಿವಪ್ಪ ನಿಧನ!

Vishwanath S

ಹಾಸನ: ಅನಾರೋಗ್ಯದಿಂದ ಬಳಲುತ್ತಿದ್ದ ಬಿಜೆಪಿ ಮಹಿಳಾ ಮೋರ್ಚಾದ ಮಾಜಿ ರಾಜ್ಯಾಧ್ಯಕ್ಷೆ ಸುಶೀಲಾ ಶಿವಪ್ಪ ನಿಧನರಾಗಿದ್ದಾರೆ.

90 ವರ್ಷದ ಸುಶೀಲಾ ಶಿವಪ್ಪ ಅವರು ಇಂದು ಸಕಲೇಶಪುರ ತಾಲೂಕಿನ ಕುಂಬ್ರಹಳ್ಳಿಯಲ್ಲಿ ನಿಧನರಾಗಿದ್ದಾರೆ. ಸುಶೀಲಾ ಶಿವಪ್ಪ ದಿವಂಗತ ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಸಕಲೇಶಪುರ ಮಾಜಿ ಶಾಸಕ ಬಿ.ಬಿ ಶಿವಪ್ಪ ಅವರ ಪತ್ನಿ. ಸುಶೀಲಾ ಶಿವಪ್ಪ ಅವರ ಅಂತ್ಯಕ್ರಿಯೆ ಮಂಗಳವಾರ ಕುಂಬಾರಹಳ್ಳಿಯಲ್ಲಿ ನಡೆಯಲಿದೆ. 

ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ, ವಸತಿ ಸಚಿವ ವಿ.ಸೋಮಣ್ಣ, ಸಕಲೇಶಪುರ ಶಾಸಕ ಎಚ್.ಕೆ. ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ. ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ಅವರು ಕುಂಬಾರಹಳ್ಳಿಗೆ ಭೇಟಿ ನೀಡಿ ಅಗಲಿದ ನಾಯಕನಿಗೆ ಅಂತಿಮ ನಮನ ಸಲ್ಲಿಸಲಿದ್ದಾರೆ.

SCROLL FOR NEXT