ಬಸವರಾಜ ಬೊಮ್ಮಾಯಿ 
ರಾಜ್ಯ

ನಂದಿನಿ ಉತ್ಪನ್ನಗಳ ದರ ಏರಿಕೆ ಆದೇಶ ಬೆನ್ನಲ್ಲೇ ಗೊಂದಲಕ್ಕೆ ಕಾರಣವಾಯ್ತು ಸಿಎಂ ಬೊಮ್ಮಾಯಿ ಹೇಳಿಕೆ!

ನಂದಿನ ಹಾಲು ಹಾಗೂ ಮೊಸರಿನ ದರ ಏರಿಕೆ ಮಾಡಿ ಈಗಾಗಲೇ ಕೆಎಂಎಫ್ ಆದೇಶ ಹೊರಡಿಸಿದ್ದು ನಾಳೆಯಿಂದಲೇ ಜಾರಿಗೆ ಬರುತ್ತಿದೆ. ಆದರೆ ಹಾಲಿನ ದರ ಏರಿಕೆ ಬಗ್ಗೆ ಚರ್ಚಿಸಿ ನಿರ್ಧಾರ ಮಾಡಲಾಗುವುದು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದೂ ಇದು ಇದೀಗ ಗೊಂದಲಕ್ಕೆ ಕಾರಣವಾಗಿದೆ.

ಕಲಬುರಗಿ: ನಂದಿನ ಹಾಲು ಹಾಗೂ ಮೊಸರಿನ ದರ ಏರಿಕೆ ಮಾಡಿ ಈಗಾಗಲೇ ಕೆಎಂಎಫ್ ಆದೇಶ ಹೊರಡಿಸಿದ್ದು ನಾಳೆಯಿಂದಲೇ ಜಾರಿಗೆ ಬರುತ್ತಿದೆ. ಆದರೆ ಹಾಲಿನ ದರ ಏರಿಕೆ ಬಗ್ಗೆ ಚರ್ಚಿಸಿ ನಿರ್ಧಾರ ಮಾಡಲಾಗುವುದು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದೂ ಇದು ಇದೀಗ ಗೊಂದಲಕ್ಕೆ ಕಾರಣವಾಗಿದೆ. 

ಕಲಬುರಗಿಯ ಸೇಡಂನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ರೈತರಿಗೆ ಅನುಕೂಲವಾಗುವಂತೆ ಹಾಗೂ ಜನರಿಗೆ ಹೊರೆಯಾಗದಂತೆ ಚರ್ಚಿಸಿ ನವೆಂಬರ್ 20ರ ಬಳಿಕ ಹಾಲಿನ ದರ ಏರಿಕೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. 

ಹಾಲು, ಮೊಸರಿನ ಪರಿಷ್ಕೃತ ದರ ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ. ಟೋನ್ಡ್ ಹಾಲಿನ ದರ 37 ರಿಂದ 40 ರುಪಾಯಿಗೆ ಹೆಚ್ಚಳ ಮಾಡಲಾಗಿದೆ. ಇನ್ನು ಸ್ಪೆಷನ್ ಹಾಲಿನ ದರ 43 ರಿಂದ 46 ರೂಪಾಯಿಗೆ, ಸಮೃದ್ಧಿ ಹಾಲಿನ ದರ 48 ರಿಂದ 51 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ.

ಹೋಮೋಜಿನೈಸ್ಡ್ ಹಾಲು 38 ರೂ. ರಿಂದ 41 ರೂ.ಗೆ ಏರಿಕೆ. ಹೊಮೊಜಿನೈಸ್ಡ್ ಹಸುವಿನ ಹಾಲು 42 ರೂ. ರಿಂದ 45 ರೂ.ಗೆ ಏರಿಕೆ. ಶುಭಂ ಹಾಲು 43 ರೂ. ರಿಂದ 46 ರೂ.ಗೆ ಏರಿಕೆ. ಹೊಮೊಜಿನೈಸ್ಡ್ ಸ್ಟ್ಯಾಂಡಡೈಸ್ಡರ್ ಹಾಲು 44 ರೂ. ರಿಂದ 47 ರೂ.ಗೆ ಏರಿಕೆ. ಸಂತೃಪ್ತಿ ಹಾಲು 50 ರೂ. ರಿಂದ 53 ರೂ.ಗೆ ಏರಿಕೆ. ಡಬಲ್ ಟೋನ್ಡ್ ಹಾಲು 36 ರೂ. ರಿಂದ 39 ರೂ.ಗೆ ಏರಿಕೆಯಾಗಿದೆ.

ಇನ್ನು ಮೊಸರಿನ ದರವನ್ನು ಲೀಟರ್ ಗೆ 45 ರಿಂದ 48 ರೂಪಾಯಿಗೆ ಏರಿಕೆ ಮಾಡಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel