ರಾಜ್ಯ

ಬೆಂಗಳೂರಿನಲ್ಲಿ ಇಂದು ಬೆಳ್ಳಂಬೆಳಗ್ಗೆ ಜಿಟಿಜಿಟಿ ಮಳೆ: ಹಲವು ಜಿಲ್ಲೆಗಳಲ್ಲಿ ನ.27ರವರೆಗೆ ಮಳೆ ಸಾಧ್ಯತೆ

Sumana Upadhyaya

ಬೆಂಗಳೂರು: ಒಂದೆಡೆ ಚುಮುಚುಮು ಚಳಿ, ಮತ್ತೊಂದೆಡೆ ಮಲೆನಾಡು, ಕರಾವಳಿ ಭಾಗದಲ್ಲಿ ಮಳೆಗಾಲದಲ್ಲಿ ಯಾವ ರೀತಿ ವಾತಾವರಣ, ಹವಾಮಾನವಿರುತ್ತದೋ ಆ ರೀತಿಯ ವಾತಾವರಣವನ್ನು ರಾಜಧಾನಿ ಬೆಂಗಳೂರಿಗರು ಇಂದು ನಸುಕಿನಿಂದಲೇ ಕಾಣುತ್ತಿದ್ದಾರೆ.

ಬೆಂಗಳೂರಿನಲ್ಲಿ ಇಂದು ಮುಂಜಾನೆಯಿಂದಲೇ ಜಿಟಿಜಿಟಿ ಮಳೆಯಾಗುತ್ತಿದೆ. ನಿನ್ನೆಯಿಂದಲೇ ಮಳೆ ಆರಂಭವಾಗಿದ್ದು ಅದಿನ್ನೂ ನಿಂತಿಲ್ಲ, ಬೆಳ್ಳಂಬೆಳಗ್ಗೆ ಆಫೀಸು, ಕಚೇರಿ, ಕೆಲಸ ಕಾರ್ಯ, ಶಾಲಾ-ಕಾಲೇಜುಗಳಿಗೆ ಹೋಗುವವರು ಮಳೆರಾಯನಿಗೆ ಬೈಯುತ್ತಾ ಮನೆಯಿಂದ ಕೊಡೆ ಹಿಡಿದುಕೊಂಡು,ಶ್ವೆಟರ್, ಟೊಪ್ಪಿ, ರೈನ್ ಕೋಟ್ ಧರಿಸಿ ಹೊರಬಂದಿದ್ದಾರೆ. (Bengaluru Rain) ಶುರುವಾಗಿದ್ದು, ಅದರ ಜೊತೆಗೆ ಮಂಜು ಕವಿದ ವಾತಾವರಣವೂ (Bangalore Weather) ನಿರ್ಮಾಣವಾಗಿದೆ.

 ಕಳೆದೊಂದು ವಾರದಿಂದ ಬೆಂಗಳೂರಿನಲ್ಲಿ ಚಳಿ (Bengaluru Weather Today) ವಿಪರೀತ ಹೆಚ್ಚಾಗಿತ್ತು. ಬೆಳಗ್ಗೆ, ರಾತ್ರಿ ಮಾತ್ರವಲ್ಲದೆ ಮಧ್ಯಾಹ್ನದ ವೇಳೆಯಲ್ಲೂ ಚಳಿ ಇರುತ್ತಿತ್ತು. ಮಧ್ಯಾಹ್ನ ಹೊತ್ತು ಬಿಸಿಲು ಚೆನ್ನಾಗಿತ್ತು. ಆದರೀಗ ಎರಡು ದಿನಗಳಿಂದ ಮಳೆಯಾಗುತ್ತಿದೆ. 

ಕರ್ನಾಟಕದ 25ಕ್ಕೂ ಅಧಿಕ ಜಿಲ್ಲೆಗಳಲ್ಲಿ ನವೆಂಬರ್ 27ರವರೆಗೂ ಮಳೆ(Rain)ಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೋಲಾರ, ಮಂಡ್ಯ, ರಾಮನಗರ, ಶಿವಮೊಗ್ಗ, ತುಮಕೂರಿನಲ್ಲಿ ಮಳೆಯಾಗಲಿದೆ.

ಮುಂದಿನ 48 ಗಂಟೆಗಳಲ್ಲಿ ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಮತ್ತು ಕರಾವಳಿ ಹಾಗೂ ಉತ್ತರ ಒಳನಾಡಿನ ಒಂದೆರಡು ಕಡೆ ಹಗರುದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡಕವಿದ ವಾತಾವರಣವಿರಲಿದೆ, ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇಂದು ಬೆಂಗಳೂರಿನಲ್ಲಿ ತುಂತುರು ಮಳೆಯೊಂದಿಗೆ ಭಾಗಶಃ ಮೋಡ ಕವಿದ ಆಕಾಶವಿದೆ. ಗರಿಷ್ಠ ಹಾಗೂ ಕನಿಷ್ಠ ತಾಪಮಾನವು ಕ್ರಮವಾಗಿ 26 ಡಿಗ್ರಿ ಸೆಲ್ಸಿಯಸ್ ಮತ್ತು 19 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. 

SCROLL FOR NEXT