ಸಂಗ್ರಹ ಚಿತ್ರ 
ರಾಜ್ಯ

ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಕಂಪಿಸಿದ ಭೂಮಿ; 72 ಗಂಟೆಗಳ ಅವಧಿಯಲ್ಲಿ ನಾಲ್ಕು ಬಾರಿ ಭೂಕಂಪನ

ಕಳೆದ 72 ಗಂಟೆಗಳಿಂದ ವಿಜಯಪುರ ಜಿಲ್ಲೆಯಾದ್ಯಂತ ಎಡೆಬಿಡದೆ ಸುರಿಯುತ್ತಿರುವ ಮಳೆಯ ಜತೆಗೆ ಭೂಕಂಪನವೂ ಹೆಚ್ಚುತ್ತಿದೆ. 72 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಾದ್ಯಂತ ಕಡಿಮೆ ತೀವ್ರತೆಯ ನಾಲ್ಕು ಭೂಕಂಪಗಳು ವರದಿಯಾಗಿವೆ.

ವಿಜಯಪುರ: ಕಳೆದ 72 ಗಂಟೆಗಳಿಂದ ವಿಜಯಪುರ ಜಿಲ್ಲೆಯಾದ್ಯಂತ ಎಡೆಬಿಡದೆ ಸುರಿಯುತ್ತಿರುವ ಮಳೆಯ ಜತೆಗೆ ಭೂಕಂಪನವೂ ಹೆಚ್ಚುತ್ತಿದೆ. 72 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಾದ್ಯಂತ ಕಡಿಮೆ ತೀವ್ರತೆಯ ನಾಲ್ಕು ಭೂಕಂಪಗಳು ವರದಿಯಾಗಿವೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ ಅಧಿಕಾರಿಗಳು ಈ ಪ್ರದೇಶದಲ್ಲಿ ವರದಿಯಾದ ಸಣ್ಣ ಕಂಪನಗಳನ್ನು ದೃಢಪಡಿಸಿದ್ದಾರೆ. ಜಿಲ್ಲೆಯ ಯಾವುದೇ ಭಾಗದಲ್ಲಿ ಭೂಕಂಪನದಿಂದ ಯಾವುದೇ ಪ್ರಾಣಹಾನಿ ಮತ್ತು ಆಸ್ತಿಪಾಸ್ತಿ ಹಾನಿಯಾದ ಬಗ್ಗೆ ವರದಿಯಾಗಿಲ್ಲ.

ಕೆಎಸ್‌ಎನ್‌ಡಿಎಂಸಿ ಪ್ರಕಾರ, ಶುಕ್ರವಾರ 2.0 ಮತ್ತು 1.9 ತೀವ್ರತೆಯ ಎರಡು ಭೂಕಂಪನಗಳು ದಾಖಲಾಗಿವೆ. ಈ ಎರಡೂ ಭೂಕಂಪನಗಳ ಕೇಂದ್ರಬಿಂದು ಬಸವನಬಾಗೇವಾಡಿಯ ಉಕ್ಕಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 10 ಕಿ.ಮೀ ಆಳದಲ್ಲಿ ದಾಖಲಾಗಿದೆ. ಇವೆರಡರ ನಡುವೆ ಒಂದು ನಿಮಿಷದ ವ್ಯತ್ಯಾಸವಿದೆ. ಇದಾದ ಎರಡು ಗಂಟೆಗಳ ನಂತರ, ಅದೇ ಗ್ರಾಮದಲ್ಲಿ 3.2 ತೀವ್ರತೆಯ ಮತ್ತೊಂದು ಭೂಕಂಪನ (ಮೂರನೇ ಭೂಕಂಪನ) ದಾಖಲಾಗಿದೆ. ಅಲ್ಲಿಯೇ 10 ಕಿಮೀ ಆಳದಲ್ಲಿ ಭೂಕಂಪನ ಸಂಭವಿಸಿದೆ.

ವಿಜಯಪುರದ ಅಲಿಯಾಬಾದ್ ಗ್ರಾಮ ಪಂಚಾಯಿತಿಯಲ್ಲಿ ಭಾನುವಾರ 2.5 ತೀವ್ರತೆಯ ನಾಲ್ಕನೇ ಭೂಕಂಪ ಸಂಭವಿಸಿದೆ. ಭೂಕಂಪದ ಕೇಂದ್ರಬಿಂದು ಅಲಿಯಾಬಾದ್‌ನಲ್ಲಿ 8 ಕಿ.ಮೀ ಆಳದಲ್ಲಿ ವರದಿಯಾಗಿದೆ. ಈ ಎಲ್ಲಾ ಭೂಕಂಪಗಳು ಕಡಿಮೆ ತೀವ್ರತೆಯನ್ನು ಹೊಂದಿವೆ ಮತ್ತು ಭೂಕಂಪನವು ಕೇಂದ್ರ ಬಿಂದುವಿನಿಂದ 20 ರಿಂದ 30 ಕಿಮೀ ರೇಡಿಯಲ್ ದೂರದವರೆಗೆ ಸಂಭವಿಸಬಹುದು.

'ಈ ರೀತಿಯ ಭೂಕಂಪವು ಸ್ಥಳೀಯ ಸಮುದಾಯಕ್ಕೆ ಯಾವುದೇ ಹಾನಿಯನ್ನುಂಟು ಮಾಡುವುದಿಲ್ಲ. ಏಕೆಂದರೆ, ಇದು ಕಡಿಮೆ ತೀವ್ರತೆ ಇರುತ್ತದೆ. ಆದರೆ, ಭೂಮಿ ಕಂಪಿಸಿದ ಅನುಭವವಾಗಬಹುದು. ಭೂಕಂಪನ ವಲಯ III ರಲ್ಲಿ ಕೇಂದ್ರಬಿಂದು ಇರುತ್ತದೆ. ಕಡಿಮೆ ತೀವ್ರತೆ ಇರುವುದರಿಂದ ಜನರು ಭಯಪಡುವ ಅಗತ್ಯವಿಲ್ಲ' ಎಂದು ಕೆಎಸ್‌ಎನ್‌ಡಿಎಂಸಿ ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!